ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ : ಕರ್ನಾಟಕ ಪದಾರ್ಥ ಚಿಂತಾಮಣಿ

By Staff
|
Google Oneindia Kannada News

ಹದಿಮೂರನೆ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಈ ಚುನಾವಣಾ ಋತುವಿನಲ್ಲಿ ಅತಿಹೆಚ್ಚು ಸಲ ಬಳಕೆಯಾದ ಆಯ್ದ ಪದಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ. ಈ ಪದಗಳು ನಮ್ಮ ಮಾತುಕತೆಯ ನಡುವೆ ಪದೇಪದೇ ಸುಳಿದಾಡುತ್ತವೆ. ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ, ಟಿವಿ ವಾಹಿನಿಗಳಲ್ಲಿ ಮತ್ತು ಭಾಷಣಗಳಲ್ಲಿ ಹೇರಳವಾಗಿ ಉಪಯೋಗಿಸಲ್ಪಟ್ಟಿವೆ.

ಇಲ್ಲಿ ನೀಡಲಾಗಿರುವ ಅನೇಕ ಪದಗಳು ಎಲ್ಲಾ ಚುನಾವಣೆಗಳಲ್ಲೂ ಬಳಕೆಯಾಗುತ್ತವಾದರೂ ಕೆಲವು ಶಬ್ದಗಳು ಮಾತ್ರ ಹೊಸ ಅರ್ಥ, ಹೊಸ ಧ್ವನಿ ಮತ್ತು ಮಹತ್ವವನ್ನು ಗಳಿಸಿಕೊಂಡಿವೆ. ಕರ್ನಾಟಕದ ಸಮಕಾಲೀನ ಇತಿಹಾಸವನ್ನು ಒತ್ತಿ ಒತ್ತಿ ಹೇಳುವ ಈ ಪದಗಳನ್ನು ತದೇಕಚಿತ್ತದಿಂದ ಗಮನಿಸಿ. ನಿಮ್ಮ ಕಣ್ಣಿಗೆ ಬಿದ್ದ, ಕಿವಿಗೆ ಕೇಳಿದ ಹಾಗೂ ನಾಲಗೆಯಲ್ಲಿ, ಕಂಪ್ಯೂಟರ್ ಕೀಲಿಮಣೆಯಲ್ಲಿ ಹೊರಳಾಡಿದ ಶಬ್ದಗಳನ್ನು ನೀವೂ ಸೇರಿಸಬಹುದು, ಪದ ಸಂಪತ್ತು ಮತ್ತು ಪದ ಸಂಸ್ಕೃತಿಯನ್ನು ಹಂಚಿಕೊಳ್ಳಬಹುದು -ಸಂಪಾದಕ.

****

ರಾಜ್ಯಪಾಲರ ಆಡಳಿತ, ರಾಮೇಶ್ವರ್ ಠಾಕೂರ್, ರಾಜಭವನ, ಚುನಾವಣಾ ದಿನಾಂಕ, ಚುನಾವಣಾ ಆಯೋಗ, ಇಲೆಕ್ಷನ್, ಮತದಾರರು, ಮತಪಟ್ಟಿ ಪರಿಷ್ಕರಣೆ, ಗುರುತಿನ ಚೀಟಿ, ನಾಪತ್ತೆ, ಮಿಸ್ಸಿಂಗ್, ವೋಟರ್ಸ್ ಐಡಿ, ಚುನಾವಣಾ ಆಯುಕ್ತ, ಡಿಲಿಮಿಟೇಶನ್, ಕ್ಷೇತ್ರ ಮರುವಿಂಗಡಣೆ, ಸಿಬ್ಬಂದಿ, ಸಿದ್ಧತೆ.

ಪಾರ್ಟಿ, ಬಿಜೆಪಿ, ಕಾಂಗ್ರೆಸ್ಸು, ಜೆಡಿಎಸ್ಸು, ಕಣ, ಪ್ರತಿಷ್ಠೆ, ನಾಯಕತ್ವ, ಪ್ರಚಾರ, ಪಕ್ಷಾಂತರ, ಪ್ರಣಾಳಿಕೆ, ಭರವಸೆ, ಸೋನಿಯಾ, ಯಡ್ಯೂರಪ್ಪ, ಖರ್ಗೆ, ಸಿದ್ದು, ದೇವೇಗೌಡ, ಕುಮಾರಸ್ವಾಮಿ, ಬಂಗಾರಪ್ಪ, ಅನಂತ್ ಕುಮಾರ್, ಸದಾನಂದ ಗೌಡ, ರಾಹುಲ್ ಗಾಂಧಿ, ಮೋದಿ, ಕೃಷ್ಣ, ಶಕುಂತಲ, ಕರಂದ್ಲಾಜೆ, ಕರ್ನಾಟಕ, ಬೆಂಗಳೂರು, ಬಳ್ಳಾರಿ, ಶಿಕಾರಿಪುರ, ರಾಮನಗರ, ಮೈಸೂರು, ಪುತ್ತೂರು, ಹಂತ, ಪಟ್ಟಿ, ಅಭ್ಯರ್ಥಿ, ಉಮೇದುವಾರ, ನೀತಿಸಂಹಿತೆ, ಉಲ್ಲಂಘನೆ, ಅಪಾರ.

ಅಕ್ರಮ, ಹಣ, ಮಧ್ಯ, ಸೀರೆ, ಕಾರು, ದೂರು, ಪೊಲೀಸ್ ಸ್ಟೇಷನ್, ಭದ್ರತಾ ಲಕ್ಷ, ಕೋಟಿ, ವಶ, ವಿಧಾನಸಭೆ, ರಿಯಲ್ ಎಸ್ಟೇಟ್, ಬಿ ಫಾರಂ, ಕೆಪಿಸಿಸಿ, ನಿಷ್ಠಾವಂತ, ಬಂಡಾಯ, ಹೈಕಮಾಂಡ್, ಕೋಮುವಾದಿ, ಕೇಸರಿ, ಯುಪಿಎ, ರೈತ, ನೀರು, ಪಂಪ್ ಸೆಟ್ಟು, ನೀರಾವರಿ, ಮೂಲಭೂತ ಸೌಕರ್ಯ, ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಕರೆಂಟು. ಮೇ 10, ಮೇ 16, ಮೇ 22, ಮೇ 25, ಕೌಂಟಿಂಗು, ಫಲಿತಾಂಶ, ಸರಳ ಬಹುಮತ, ಸ್ಪಷ್ಟ ಬಹುಮತ, ಸಮ್ಮಿಶ್ರ ಸರಕಾರ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸೋಲು, ಗೆಲವು, ಭಾರಿ ಬಹುಮತ, ಅಂತರ, ಪರ್ಸೆಂಟ್, ಡಿಪಾಸಿಟ್, ಜಯಭೇರಿ, ಮುಖಭಂಗ, ಶಾಸಕ, ಒಳಒಪ್ಪಂದ, ಆಡಳಿತ ಪಕ್ಷ, ವಿರೋಧ ಪಕ್ಷ, ಪಕ್ಷೇತರರು, ಬೆಂಬಲ, ರೆಸಾರ್ಟ್.

ಗೌಡ, ಒಕ್ಕಲಿಗ, ಲಿಂಗಾಯತ, ಕುರುಬ, ರೆಡ್ಡಿ, ಎಸ್ ಸಿ ಎಸ್ ಟಿ, ಹಿಂದುಳಿದವರು, ಮುಸ್ಲಿಂ ಮತಗಳು, ಮೈನಾರಿಟಿ ಓಟ್ಸ್, ವಾರ್ಡು, ಬೂತು, ಆಮಿಷ, ಜ್ಯೋತಿಷ್ಯ, ಜ್ಯೋತಿಷಿ, ದೇವಸ್ಥಾನ, ಹೋಮಹವನ, ಸಮೀಕ್ಷೆ, ಎನ್ ಡಿ ಟಿವಿ, ಸಂದರ್ಶನ, ಪಬ್ಲಿಸಿಟಿ, ಕರಪತ್ರ, ಜಾಹಿರಾತು, ಅನಾಲಿಸಿಸ್, ಕ್ಯಾಂಡಿಡೇಟು, ಪೇಪರ್ರು, ಟಿವಿ, ಬಿಕ್ಕಟ್ಟು, ಸಚಿವ ಸಂಪುಟ, ಅತಂತ್ರ, ಕುಲಗೆಟ್ಟ ಮತಗಳು, ಪಕ್ಷಾಂತರ, ಕುಟುಂಬ ರಾಜಕೀಯ, ಪೊಳ್ಳು ಭರವಸೆ, ಆಶ್ವಾಸನೆ, ಪಿತೂರಿ, ಮೊಸಳೆ ಕಣ್ಣೀರು... ಮುಂತಾದವು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X