• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಂಗಳೂರಲ್ಲಿ 'ಕೈ'ತಪ್ಪುತ್ತಿದೆ 'ಕಮಲ' ಅರಳುತ್ತಿದೆ

By Staff
|

ಮಂಗಳೂರು,ಮೇ 14: ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ದಕ್ಷಿಣ ಕನ್ನಡ ಜಿಲ್ಲೆ 2004 ಚುನಾವಣೆ ನಂತರ ಅದರ ವರ್ಚಸ್ಸು ಕಳೆಗುಂದುತ್ತಾ ಬಂದಿದೆ. ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕರಾವಳಿ ಜಿಲ್ಲೆಯಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿದ್ದು, ಜಿಲ್ಲೆಯ 9 ವಿಧಾನಸಭೆ ಕ್ಷೇತ್ರದಲ್ಲಿ ಏಳು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ಪಾರುಪತ್ಯವನ್ನು ಮೆರೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿ ಈ ಕ್ಷೇತ್ರದಲ್ಲಿ ಭದ್ರ ನೆಲೆ ಕಂಡುಕೊಂಡಿದೆ.

2004ರ ಚುನಾವಣೆಯ ನಂತರ ನಡೆದ 60 ತಾಲ್ಲೂಕು ಪಂಚಾಯಿತಿ ಮತ್ತು 36 ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯಿಲ್ಲದಂತೆ ಮಾಡಿದೆ. ಕಾಂಗ್ರೆಸ್ ಮತ್ತೆ ತನ್ನ ಹಳೆಯ ಚರಿಷ್ಮಾವನ್ನು ಪಡೆಯಲು ಹರಸಾಹಸ ಮಾಡುತ್ತಿದೆ. ಆದರೆ ಆ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವ ಕಾರಣ ಅನೇಕರು ಬಂಡಾಯ ಬಾವುಟ ಹಾರಿಸಿದ್ದಾರೆ. ಇದು ಕಾಂಗ್ರೆಸ್ ನಾಯಕರಿಗೆ ಚಿಂತೆಗೀಡು ಮಾಡಿದೆ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯೋಗೀಶ್ ಭಟ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ನಿಂದ ಸಜ್ಜನ ಎನಿಸಿರುವ ವಕೀಲ ಐವನ್ ಡಿಸೋಜ ಕಣಕ್ಕಿಳಿದಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆ ಪರಿಣಾಮ ಕ್ಷೇತ್ರಕ್ಕೆ 94 ಸಾವಿರ ಹೆಚ್ಚುವರಿ ಮತದಾರ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದಾರೆ. ಹಳೆಯ ಮಂಗಳೂರು ವಿಧಾನಸಭೆ ಕ್ಷೇತ್ರವಾಗಿರುವ ಇದು. ಹೊಸ ಮತದಾರರಿಂದ ಕಾಂಗ್ರೆಸ್ ಲಾಭ ಆಗಲಿವೆ ಎನ್ನುವ ಮಾತು ಕೇಳಬರತೊಡಗಿದೆ. ಕಳೆದ ಮೂರು ಬಾರಿ ಬಿಜೆಪಿ ಪಕ್ಷದಿಂದ ಶಾಸಕರಾಗಿರುವ ಯೋಗೀಶ್ ಭಟ್ ಗೆಲುವಿನ ಅಂತರವನ್ನು ಕಡಿಮೆ ಮಾಡಿಕೊಂಡು ಬಂದಿದ್ದಾರೆ. ಇದು ಬಿಜೆಪಿ ಮುಖಂಡರಲ್ಲಿ ಆತಂಕ ಮೂಡಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲ ಸ್ಪರ್ಧೆ ನಡೆಯಲಿದೆ.

ಉಲ್ಲಾಳ ಕ್ಷೇತ್ರ ಈಗ ಮಂಗಳೂರು ಕ್ಷೇತ್ರ ಎಂದು ನಾಮಕರಣಗೊಂಡಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಯು.ಟಿ.ಖಾದರ್ ಇದ್ದಾರೆ. ಈ ಬಾರಿಯೂ ಕಾಂಗ್ರೆಸ್ ವತಿಯಿಂದ ಯು.ಟಿ.ಖಾದರ್, ವಿಟ್ಲದ ಶಾಸಕರಾಗಿದ್ದ ಪದ್ಮನಾಭ ಕೊಠಾರಿ ಬಿಜೆಪಿಯಿಂದ ಆಖಾಡಕ್ಕೆ ಧುಮುಕಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಇಲ್ಲಿ ಬಿಜೆಪಿಗೆ ಗೆಲುವು ಕಷ್ಟಸಾಧ್ಯ.

ಸುರತ್ಕಲ್ ಕ್ಷೇತ್ರ ಇದೀಗ ಮಂಗಳೂರು ಉತ್ತರವಾಗಿ ರೂಪುಗೊಂಡಿದೆ. ಕಾಂಗ್ರೆಸ್ ನಿಂದ ಕ್ಷೇತ್ರವನ್ನು ಕಸಿದುಕೊಂಡಿದ್ದ ಬಿಜೆಪಿ ಕೃಷ್ಣ ಪಾಲೇಮಾರ್ ಶಾಸಕರಾಗಿ ಆಯ್ಕೆಯಾಗಿದ್ದರು. ಪಾಲೇಮಾರ್ ಅವರಿಗೆ ಅವರ ಸಮಾಜ ಕೈಹಿಡಿಯುವುದರಿಂದ ಅವರಿಗೆ ಜಯ ಸುಲಭವಾಗಿದೆ. ಕಾಂಗ್ರೆಸ್ ನಿಂದ ಮೊಯಿದ್ದೀನ್ ಬಾವಾ ಸ್ಪರ್ಧಿಸಿದ್ದಾರೆ.

ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಭಯಚಂದ್ರ ಜೈನ್ ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ.ಬಿಜೆಪಿಯಿಂದ ಕೆ.ಪಿ.ಜಗದೀಶ್ ಅಧಿಕಾರಿ ಸ್ಪರ್ಧಿಸಿದ್ದರೆ. ಜೆಡಿಎಸ್ ನಿಂದ ಅಮರನಾಥ್ ಶೆಟ್ಟಿ ಆಯ್ಕೆ ಬಯಸಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಸುರತ್ಕಲ್ ಕ್ಷೇತ್ರದಿಂದ 72 ಸಾವಿರ ಹೆಚ್ಚುವರಿ ಮತದಾರರು ಈ ಕ್ಷೇತ್ರಕ್ಕೆ ಸೇರ್ಪಡೆಗೊಂಡಿರುವುದರಿಂದ ಈ ಮತಗಳನ್ನು ಸಳೆಯಲು ಎಲ್ಲರೂ ಹರಸಾಹಸ ಮಾಡುತ್ತಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ದಾಯಾದಿ ಕಾಳಗ ಪ್ರತಿಷ್ಠೆ ಪ್ರಶ್ನೆಯಾಗಿದೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ವಸಂತ ಬಂಗೇರಾ ಮತ್ತು ಬಿಜೆಪಿಯಿಂದ ಕಣಕ್ಕಿಳಿದಿರುವ ಪ್ರಭಾಕರ ಬಂಗೇರಾ ನಡುವೆ ನೇರ ಹಣಾಹಣಿ ಎಂದೇ ಭಾವಿಸಲಾಗಿದೆ. ಜೆಡಿಎಸ್ ನಿಂದ ಗಂಗಾಧರಗೌಡ ಕಣದಲ್ಲಿದ್ದಾರೆ. ಇಬ್ಬರ ನಡುವೆ ಗಂಗಾಧರಗೌಡ ಅವರಿಗೆ ಲಾಭವಾಗಲಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.

ಸುಳ್ಯ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಭಾರತೀಯ ಜನತಾ ಪಕ್ಷ ಅಭ್ಯರ್ಥಿ ಮೂರು ಬಾರಿ ಶಾಸಕರಾಗಿರುವ ಎಸ್. ಅಂಗರಾ ಮತ್ತು ಕಾಂಗ್ರೆಸ್ ಡಾ.ರಘು ಬೆಟ್ಟಂಪಾಡಿ ಅವರನ್ನು ಕಣಕ್ಕಿಳಿಸಿದೆ. ಸ್ವತಃ ವೈದ್ಯರಾಗಿರುವ ರಘು ನಿವೃತ್ತಿ ನಂತರ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತಿದೆ ಎಂದು ಕಾದುನೋಡಬೇಕು.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more