• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇರದಾಳದಲ್ಲಿ ಉಮಾಶ್ರೀಗೆ ಅಭೂತಪೂರ್ವ ಸ್ವಾಗತ

By Staff
|

ಬಾಗಲಕೋಟೆ,ಮೇ 14: ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿತ್ರನಟಿ, ಖ್ಯಾತ ರಂಗಭೂಮಿ ಕಲಾವಿದೆ ಉಮಾಶ್ರೀ ಅವರಿಗೆ ಕ್ಷೇತ್ರದಾದ್ಯಂತ ಅಭೂತಪೂರ್ವ ಸ್ವಾಗತ ವ್ಯಕ್ತವಾಗಿದೆ. ಸ್ವಂತ ಕ್ಷೇತ್ರವಿಲ್ಲದೆ ಜಾತಿ ಲೆಕ್ಕಾಚಾರದೊಂದಿಗೆ ಆಖಾಡಕ್ಕೆ ಇಳಿದಿರುವ ಉಮಾಶ್ರೀ ಈ ಚುನಾವಣಾ ಮಹಾಸಮರದಲ್ಲಿ ಗೆಲುವು ಸಾಧಿಸಲಿದ್ದಾರೆ ಎನ್ನುವ ಮಾತು ಕೇಳಿ ಬರತೊಡಗಿದೆ.

ಉಮಾಶ್ರೀ ಚಿತ್ರರಂಗಕ್ಕೆ ಬರುವ ಮೊದಲು ಜಿಲ್ಲೆಯ ವಿವಿಧೆಡೆ ಅನೇಕ ನಾಟಕಗಳನ್ನು ಆಡಿರುವುದರಿಂದ ಇಲ್ಲಿಯ ಮತದಾದರಿಗೆ ಇವರು ಅಚ್ಚುಮೆಚ್ಚು. ಇಂದಿಗೂ ಅವರು ನಟಿಸಿದ ಖಾನಾವಳಿ ಚನ್ನಿ, ಬಸ್ ಕಂಡಕ್ಟರ್, ಗೌಡರ ಗದ್ಲ ಹೀಗೆ ಅನೇಕ ನಾಟಕಗಳು ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಇಂದಿಗೂ ಕೂಡಾ ಉಮಾಶ್ರೀ ಚಿತ್ರವೆಂದರೆ ಅಲ್ಲಿಯ ಜನ ಮುಗಿಬಿದ್ದು ನೋಡುತ್ತಾರೆ. ಈ ಕಾರಣಕ್ಕೆ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿರುವ ಉಮಾಶ್ರೀ ಎಷ್ಟು ಮತಗಳು ಸೆಳೆದುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗಿದೆ.

ಕ್ಷೇತ್ರದಲ್ಲಿ ಕುರುಬರು ಮತ್ತು ನೇಕಾರರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ನೇಕಾರ ಜನಾಂಗಕ್ಕೆ ಸೇರಿರುವ ಉಮಾಶ್ರೀ ಈಗಾಗಲೇ ಮತದಾರರ ಮನವೂಲಿಸುವ ಯತ್ನ ನಡೆಸಿದ್ದಾರೆ. ಕ್ಷೇತ್ರದ ಅರ್ಧದಷ್ಟು ಹಳ್ಳಿಗಳಿಗೆ ಪಾದಯಾತ್ರೆ ಮೂಲಕ ಮತಯಾಚಿಸುತ್ತಿದ್ದಾರೆ. ಕ್ಷೇತ್ರದ ಎಲ್ಲ ಹಳ್ಳಿಗಳ ಮನೆ ಬಾಗಿಲಿಗೂ ತೆರಳಿ ಮತಯಾಚಿಸುವೆ, ಇವರು ನನ್ನ ಜನ, ನನ್ನನ್ನು ಕೈಬಿಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದು ಉಮಾಶ್ರೀ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರಕ್ಕೆ ನಾನು ಹೊಸಬಳು ಎಂದು ಇಲ್ಲಿಯ ಕೆಲವರು ನನ್ನ ಸ್ಪರ್ಧೆಗೆ ಅಡ್ಡಿಪಡಿಸಿದರು. ನಂತರ ವಾಸ್ತವಾಂಶ ತಿಳಿಸಿದ್ದರಿಂದ ಪರಿಸ್ಥಿತಿ ಸಂಪೂರ್ಣ ಅನುಕೂಲವಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನನ್ನ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಉಮಾಶ್ರೀ ಹೇಳಿದರು. ಇಡೀ ಜಿಲ್ಲೆಯಿಂದ ಏಕೈಕ ಮಹಿಳಾ ಅಭ್ಯರ್ಥಿಯಾಗಿರುವ ನನಗೆ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more