ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ಲಕ್ಷ ಚಂದಾದಾರರು : ಟಾಟಾ ಸ್ಕೈ ಸಾಧನೆ

By Staff
|
Google Oneindia Kannada News
Tata Sky CEO Vikram Kaushik receiving award
ಪ್ರಶಸ್ತಿ ಸ್ವೀಕರಿಸುತ್ತಿರುವ ಟಾಟಾ ಸ್ಕೈ ಸಿಇಓ ವಿಕ್ರಮ್ ಕೌಶಿಕ್ (ಎಡಬದಿ)
ಮುಂಬೈ,ಮೇ 13 : ಟಾಟಾ ಸ್ಕೈ ಅವರ ನೇರವಾಗಿ ನಿಮ್ಮ ಮನೆಗೆ(ಡಿಟಿಎಚ್) ಪೇ ಚಾನಲ್ ಕೇವಲ 20 ತಿಂಗಳ ಅವಧಿಯಲ್ಲಿ ದೇಶಾದ್ಯಂತ 20 ಲಕ್ಷ ಚಂದಾದಾರರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ.

ಡಿಜಿಟಲ್ ಪೇ ಚಾನಲ್ ಗಳಿಗೆ ತಂತ್ರಜ್ಞಾನವನ್ನು ಒದಗಿಸುವ ಎನ್‌ಡಿಎಸ್ ಸಂಸ್ಥೆ ಈ ವಿಷಯವನ್ನು ಪ್ರಕಟಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಟಾಟಾ ಸ್ಕೈ ಪೇ ಚಾನಲ್ ತನ್ನ ವಿಸ್ತಾರವನ್ನು ಬಾರೀ ಪ್ರಮಾಣದಲ್ಲಿ ವಿಸ್ತರಿಸಿಕೊಂಡಿದೆ. ಕೇವಲ 20 ತಿಂಗಳಲ್ಲಿ 20 ಲಕ್ಷ ಚಂದಾದಾರರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ. ಈ ಸಾಧನೆ ಮಾಡಿರುವ ಟಾಟಾ ಸ್ಕೈ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಕ್ರಮ ಕೌಶಿಕ್ ಅವರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

ಟಾಟಾ ಸ್ಕೈ ಅವರ ಗುಣಮಟ್ಟದ ಪ್ರಸಾರದಿಂದ ಈ ಸಾಧನೆ ಲಭ್ಯವಾಗಿದ್ದು, ಮುಖ್ಯವಾಗಿ ಇದರಲ್ಲಿ ಎನ್‌ಡಿಎಸ್ ತಂತ್ರಜ್ಞಾನದಿಂದ ನಿರ್ಮಿತವಾಗಿರುವ ಉತ್ತಮ ವಿಡಿಯೋ ಗಾರ್ಡ್, ಮಿಡಿಯಾ ಹೈವೇ, ಮತ್ತು ಮುಂದುವೆರೆದ ಎಲೆಕ್ಟ್ರಾನಿಕ್ ಗೈಡ್ ಹೊಂದಿರುವುದರಿಂದ ದೇಶಾದ್ಯಂತ ಇದಕ್ಕೆ ಬಾರೀ ಬೇಡಿಕೆ ವ್ಯಕ್ತವಾಗಿದೆ. ಎನ್‌ಡಿಎಸ್‌ನ ದೆಹಲಿ, ಬೆಂಗಳೂರು ಮತ್ತು ಮುಂಬೈಯಲ್ಲಿರುವ ಕಚೇರಿಗಳು ಟಾಟಾ ಸ್ಕೈನೊಂದಿಗೆ ಕೈಜೋಡಿಸಿವೆ.

ಟಾಟಾಸ್ಕೈ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಣಾಧಿಕಾರಿ ವಿಕ್ರಮ ಕೌಶಿಕ್ ಮಾತನಾಡಿ, ಟಾಟಾ ಸ್ಕೈ ಅತೀ ಕಡಿಮೆ ಅವಧಿಯಲ್ಲಿ ದೇಶಾದ್ಯಂತ ತನ್ನ ಮಾರುಕಟ್ಟೆ ಸ್ಥಾಪಿಸಿರುವುದಕ್ಕೆ ಅತೀವ ಸಂತಸವಾಗಿದೆ. ನಮ್ಮ ಕಾರ್ಯಕ್ಷಮತೆ ಹಾಗೂ ಬದ್ಧತೆಯೇ ಈ ಸಾಧನೆಗೆ ಮುಖ್ಯ ಕಾರಣವಾಗಿದೆ ಎಂದರು. ತಂತ್ರಜ್ಞಾನ ಸಂಸ್ಥೆಯಾದ ಎನ್‌ಡಿಎಸ್ ಸೇವೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು ಎಂದ ಅವರು, ಗುಣಮಟ್ಟದ ತಂತ್ರಜ್ಞಾನ ಒದಗಿಸಿದ್ದರಿಂದ ಈ ಸಾಧನೆ ಮಾಡಲು ಪೂರಕವಾಯಿತು ಎಂದು ಪ್ರಶಂಸಿಸಿದರು.

ಎನ್‌ಡಿಎಸ್ ಏಷಿಯಾ ಫೆಸಿಪಿಕ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಶೋ ಟೇಲರ್ ಮಾತನಾಡಿ, ಟಾಟಾ ಸ್ಕೈ ಮಾಡಿರುವ ಮಾಡಿರುವ ಸಾಧನೆಗೆ ಹೆಮ್ಮೆ ಏನಿಸುತ್ತದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X