ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀ ಡಿಶ್ ಟಿವಿಯಿಂದ ಉಚಿತ ಸೆಟ್ ಅಪ್ ಬಾಕ್ಸ್

By Staff
|
Google Oneindia Kannada News

ನವದೆಹಲಿ, ಮೇ 11: ಜೀ ಸಮೂಹದ ಡಿಟಿಎಚ್ (Direct-to-home)ಡಿಶ್ ಟಿವಿ ತನ್ನ ಚಂದಾದಾರರಿಗೆ ಸೆಟ್ ಅಪ್ ಬಾಕ್ಸ್ ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. ಡಿಟಿಎಚ್ ಮಾರುಕಟ್ಟೆಯಲ್ಲಿ ರಿಲಯನ್ಸ್ ,ಭಾರ್ತಿ ಹಾಗೂ ಟಾಟಾ ಸಂಸ್ಥೆಗಳಿಂದ ತೀರ್ವ ಸ್ಪರ್ಧೆ ಎದುರಿಸುತ್ತಿರುವ ಜೀ ಸಮೂಹದ ಡಿಶ್ ಟಿವಿ ಈ ನಿರ್ಧಾರಕ್ಕೆ ಬಂದಿದೆ.

ಚಂದಾದಾರರು ತಾವು ಆಯ್ಕೆ ಮಾಡಿಕೊಳ್ಳುವ ಯೋಜನೆಗಳಿಗೆ ಅನುಗುಣವಾಗಿ ಪ್ರಸಕ್ತ 2500 ರು ಬೆಲೆ ಇರುವ ಸೆಟ್ ಅಪ್ ಬಾಕ್ಸ್ ಅನ್ನು ಉಚಿತವಾಗಿ ಇಲ್ಲವೆ, ಅತಿ ಕಡಿಮೆ ಬೆಲೆಗೆ ಪೂರೈಸಲಾಗುವುದು. ಪ್ರತಿ ತಿಂಗಳಲು 90 ಸಾವಿರ ಹೊಸ ಚಂದಾದಾರರು ಸೇರ್ಪಡೆಯಾಗುತ್ತಿದ್ದು, ಪ್ರಸ್ತುತ 31ಲಕ್ಷ ಚಂದಾದರನ್ನು ಜೀ ಸಮೂಹದ ಡಿಶ್ ಟಿವಿ ಹೊಂದಿದೆ. ಈ ಹೊಸ ಸೌಲಭ್ಯದಿಂದ ಚಂದಾದಾರರ ಸಂಖ್ಯೆ ದ್ವಿಗುಣವಾಗಲಿದೆ ಎಂದು ಡಿಶ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಜವಾಹರ ಗೋಯಲ್ ತಿಳಿಸಿದರು.

ಮುಂಬರುವ ದಿನಗಳಲ್ಲಿ ಈಗಿರುವ 185 ಚಾನೆಲ್ ಗಳ ಜತೆಗೆ 200 ಅಧಿಕ ಚಾನೆಲ್ ಗಳನ್ನು ನೀಡಲಾಗುವುದು. ವರ್ಷಾಂತ್ಯಕ್ಕೆ ಚಾನೆಲ್ ಗಳ ಸಂಖ್ಯೆಯನ್ನು 400 ಕ್ಕೆ ಹೆಚ್ಚಿಸಲಾಗುವುದು . ನಟ ಶಾರುಖ್ ಖಾನ್ ಹೊಸ ಸೌಲಭ್ಯದ ಕುರಿತು ಪ್ರಚಾರ ಮಾಡಲಿದ್ದಾರೆ. ಹೊಸ ಸೌಲಭ್ಯಗಳು ಇನ್ನೆರಡು ತಿಂಗಳಲ್ಲಿ ಚಂದಾದಾರರಿಗೆ ಲಭ್ಯವಾಗಲಿದೆ ಎಂದು ಗೋಯಲ್ ಹೇಳಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X