ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಟಾನುಘಟಿಗಳ ಜುಟ್ಟು ಮತದಾರರ ಕೈಯಲ್ಲಿ

By Staff
|
Google Oneindia Kannada News

Former CM H.D.Kumarswamyಬೆಂಗಳೂರು, ಮೇ 10 : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್), ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ(ಕಾಂಗ್ರೆಸ್) ಸೇರಿದಂತೆ 953 ಅಭ್ಯರ್ಥಿಗಳ ಹಣೆಬರಹವನ್ನು 11 ಜಿಲ್ಲೆಯ 1,72,88,358 ಮತದಾರರು ಇಂದು ನಡೆದಿರುವ ಮೊದಲ ಹಂತದ ಮತದಾನದಲ್ಲಿ ನಿರ್ಧರಿಸಲಿದ್ದಾರೆ.

ರಾಮನಗರದಿಂದ ಕುಮಾರಸ್ವಾಮಿ, ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ, ಮಾಜಿ ಸಚಿವರಾದ ಆರ್. ಅಶೋಕ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿ.ಟಿ. ದೇವೇಗೌಡ (ಎಲ್ಲರೂ ಬಿಜೆಪಿ), ಕಾಂಗ್ರೆಸ್‌ನ ಮಹದೇವ ಪ್ರಸಾದ್, ರೋಶನ್ ಬೇಗ್, ಜೆಡಿಎಸ್‌ನ ಚೆಲುವರಾಯಸ್ವಾಮಿ, ವಾಟಾಳ್ ನಾಗರಾಜ್ ಮೊದಲಾದ ಘಟಾನುಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜನ ತಮ್ಮ ಪ್ರತಿನಿಧಿಗಳನ್ನು ಆರಿಸಲಿದ್ದಾರೆ.

ಅತ್ಯಂತ ಪಾರದರ್ಶಕ ಮತ್ತು ಮುಕ್ತ ರೀತಿಯಲ್ಲಿ ಮತದಾನ ನಡೆಸುವ ನಿಟ್ಟಿನಲ್ಲಿ ಪ್ಯಾರಾ ಮಿಲಿಟರಿ ಪಡೆ, ಸಿಆರ್‌ಪಿಎಫ್, ಕೆಎಸ್ಆರ್‌ಪಿ ಸೇರಿದಂತೆ 53 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಜಿಲ್ಲೆಗಳಲ್ಲಿ ಇರುವ 18,562 ಮತಗಟ್ಟೆಗಳಲ್ಲಿ 3,500 ಸೂಕ್ಷ್ಮ ಮತ್ತು 6,252 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ವಿಭಾಗಿಸಲಾಗಿದೆ. ಅದರಲ್ಲೂ, ಬೆಂಗಳೂರಿನ 28 ಕ್ಷೇತ್ರಗಳಲ್ಲಿ ತಲಾ 2000 ಸಾವಿರ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮವೆಂದು ವಿಭಾಗಿಸಲಾಗಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X