ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪರ್ಧೆ ಒಂದು ಕಡೆ ಓಟು ಮತ್ತೊಂದು ಕಡೆ!

By Staff
|
Google Oneindia Kannada News

ಬೆಂಗಳೂರು, ಮೇ 10: ಮೊದಲ ಹಂತದ ಚುನಾವಣೆ ಕಣದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಮತಾ ನಿಚ್ಚಾನಿ, ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು, ಎಚ್.ಎಸ್.ಮಹದೇವ ಪ್ರಸಾದ್, ಚನ್ನಿಗಪ್ಪ ಹಾಗೂ ಡಿ.ಟಿ.ಜಯಕುಮಾರ್ ತಮ್ಮ ಮತ ತಮಗೆ ಹಾಕಿಕೊಳ್ಳುವಂತಿಲ್ಲ!

ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ ಹಾಗೂ ಜಾತಿ ಲೆಕ್ಕಾಚಾರ ಹಾಕಿ ತಾವು ಮತ ಹೊಂದಿರುವ ಕ್ಷೇತ್ರದಿಂದ ಬೇರೆ ಕ್ಷೇತ್ರಕ್ಕೆ ವಲಸೆ ಹೋಗಿರುವ ಕಾರಣ ಹೀಗಾಗಿದೆ. ಕುಮಾರಸ್ವಾಮಿ ಹೆಸರು ಬೆಂಗಳೂರಿನ ಜಯನಗರ ಕ್ಷೇತ್ರದ ಮತದಾರರಪಟ್ಟಿಯಲ್ಲಿ ಹಾಗೂ ಕಾಂಗ್ರೆಸ್‌ನ ಮಮತಾ ನಿಚ್ಚಾನಿ ಮಲ್ಲೇಶ್ವರದಲ್ಲಿ ಮತ ಚಲಾಯಿಸುವುದು ಅನಿವಾರ್ಯವಾಗಿದೆ.

ಹಾಗೆಯೇ ವಿಜಯನಗರದಲ್ಲಿ ಕಣಕ್ಕಿಳಿದಿರುವ ಪ್ರಮೀಳಾ ನೇಸರ್ಗಿ ಶಾಂತಿನಗರದಲ್ಲಿ, ಹೆಬ್ಬಾಳದಲ್ಲಿ ಸ್ಪರ್ಧಿಸಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಲ್ಲೇಶ್ವರದಲ್ಲಿ, ಮಹದೇವಪುರ ಕಣಕ್ಕಿಳಿದಿರುವ ಅರವಿಂದ ಲಿಂಬಾವಳಿ ಸಿ.ವಿ.ರಾಮನ್‌ನಗರ, ಶಿವಾಜಿನಗರದಲ್ಲಿ ಸ್ಪರ್ಧಿಸಿರುವ ರೋಷನ್ ಬೇಗ್ ಪುಲಕೇಶಿನಗರ, ಬಿಟಿಎಂ ಬಡಾವಣೆಯ ಅಭ್ಯರ್ಥಿ ರಾಮಲಿಂಗಾರೆಡ್ಡಿ ಚಿಕ್ಕಪೇಟೆ, ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಭೈರೇಗೌಡ ಕೋಲಾರದಲ್ಲಿ, ಗಾಂಧಿನಗರದಲ್ಲಿ ಸ್ಪರ್ಧಿಸಿರುವ ಪಿ.ಸಿ.ಮೋಹನ್ ಜಯನಗರ, ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ಮತ ಚಲಾಯಿಸಬೇಕಾಗಿದೆ.

ಇನ್ನು ಯಶವಂತಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶೋಭಾ ಕರಂದ್ಲಾಜೆ ಹೆಸರು ಪುತ್ತೂರಿನ ಮತದಾರರ ಪಟ್ಟಿಯಲ್ಲಿದೆ. ಇವರು ಇಂದೇ ಮತ ಚಲಾಯಿಸಬೇಕಾಗಿಲ್ಲ ಕಾರಣ, ಪುತ್ತೂರಿನಲ್ಲಿ ಚುನಾವಣೆ ಇರುವುದು ಎರಡನೇ ಹಂತದಲ್ಲಿ. ಆದರೆ ಬಸವನಗುಡಿಯ ಜೆಡಿಎಸ್ ಅಭ್ಯರ್ಥಿ ಎಚ್.ಎಂ.ವಿಶ್ವನಾಥ್ ಪರಿಸ್ಥಿತಿ ಭಿನ್ನವಾಗಿದೆ. ಅವರು ದೂರದ ಹಾಸನ ಜಿಲ್ಲೆಯ ಸಕಲೇಶಪುರಕ್ಕೆ ಹೋಗಿ ಮತ ಹಾಕಿ ಪುನಃ ಬೆಂಗಳೂರಿಗೆ ಹಿಂತಿರುಗಬೇಕಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X