ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ನಿಂದ ಭಾರತೀಯ ಯೂಟ್ಯೂಬ್

By Staff
|
Google Oneindia Kannada News

ನವದೆಹಲಿ, ಮೇ 8: ಗೂಗಲ್‌ ಒಡೆತನದ ಪ್ರಪಂಚ ಪ್ರಸಿದ್ಧ ವಿಡಿಯೋ ಹಂಚಿಕೆ ಅಂತರ್ಜಾಲ ತಾಣ ಯೂಟ್ಯೂಬ್ ಭಾರತದಲ್ಲಿ ತನ್ನ ಸ್ಥಳೀಯ ಅಂತರ್ಜಾಲ ತಾಣ www.youtube.co.in ವನ್ನು ಬುಧವಾರ ಬಿಡುಗಡೆ ಮಾಡಿದೆ. ಇದರಿಂದ ಸ್ಥಳೀಯ ವಿಡಿಯೋಗಳನ್ನು ಜಾಲಾಡಲು, ಅಂತರ್ಜಾಲದಲ್ಲಿ ವಿಡಿಯೋಗಳನ್ನು ತುಂಬಲು ಅನುಕೂಲವಾಗಲಿದೆ.

ವಿಡಿಯೋಗಳನ್ನು ಅಂತರ್ಜಾಲದಲ್ಲಿ ತುಂಬಲು ಹಾಗೂ ಅವುಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಯೂಟ್ಯೂಬ್ ಇಂಡಿಯಾ ಉತ್ತಮ ವೇದಿಕೆಯಾಗಲಿದೆ . ಬಹಳಷ್ಟು ಜನಪ್ರಿಯವಾದ ಹಾಗೂ ಭಾರತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಇದರಲ್ಲಿ ಪತ್ತೆಹಚ್ಚಬಹುದು. ಜೊತೆಗೆ ಭಾರತೀಯ ಹಾಗೂ ಜಾಗತಿಕ ಬಳಕೆದಾರರನ್ನು ಯೂಟ್ಯೂಬ್ ಮೂಲಕ ಸಂಪರ್ಕಿಸಬಹುದು. ಯುಟ್ಯೂಬ್ ಇಂಡಿಯಾ ಶುದ್ಧ ಸ್ಥಳೀಯ ಅನುಭವವನ್ನು ಕೊಡಲಿದೆ. ಹಾಗೆಯೇ ಇದರ ಕಾರ್ಯವಿಧಾನ ಹಾಗೂ ಇದರಲ್ಲಿನ ವಿಡಿಯೋಗಳು ಭಾರತೀಯ ಬಳಕೆದಾರರನ್ನು ತಪ್ಪದೆ ಆಕರ್ಷಿಸುತ್ತವೆ ಎಂಬ ವಿಶ್ವಾಸವನ್ನು ಯೂಟ್ಯೂಬ್‌ನ ಅಂತಾರಾಷ್ಟ್ರೀಯ ವ್ಯವಸ್ಥಾಪಕ ಸಕಿನ ಅರ್ಸಿವಾಲಾ ವ್ಯಕ್ತಪಡಿಸಿದ್ದಾರೆ.

ಯೂಟ್ಯೂಬ್ ಇಂಡಿಯಾ ಕೇವಲ ಭಾರತೀಯ ಬಳಕೆದಾರರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ವಿಭಿನ್ನ ಸಂಸ್ಕೃತಿಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಹಾಗೂ ತರಹೇವಾರಿ ಜೀವನಶೈಲಿಗಳಿಗೆ ವಿಶ್ವದ ಅತಿದೊಡ್ಡ ಆನ್‌ಲೈನ್ ವಿಡಿಯೋ ಸಮುದಾಯ ಇದಾಗಲಿದೆ. ನಿಮ್ಮಲ್ಲಿ ಸರಳವಾದ ವೆಬ್‌ ಕ್ಯಾಮೆರ ಅಥವಾ ಮೊಬೈಲ್ ಫೋನ್ ಇದ್ದರೆ ಸಾಕು ನಿಮ್ಮ ನೆಚ್ಚಿನ ವಿಡಿಯೋಗಳನ್ನು ಸೆರೆಹಿಡಿದು ಯೂಟ್ಯೂಬ್‌ಗೆ ತುಂಬಿಸಿ ಹಲವರೊಂದಿಗೆ ಅದನ್ನು ಹಂಚಿಕೊಂಡು ಖುಷಿಪಡಬಹುದು. ತಮ್ಮನ್ನು ತಾವು ನಿರೂಪಿಸಿಕೊಳ್ಳಲು ಇದಕ್ಕಿಂತಲೂ ಶಕ್ತಿಶಾಲಿ ಮಾಧ್ಯಮ ಮತ್ತೊಂದಿಲ್ಲ ಎನ್ನುತ್ತಾರೆ ಅರ್ಸಿವಾಲಾ.

ಯೂಟ್ಯೂಬ್ ಇಂಡಿಯಾದಿಂದ ಭಾರತೀಯ ಅಂತರ್ಜಾಲಿಗರು ತಮ್ಮ ಸಮುದಾಯ ಹಾಗೂ ಭಾರತಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಸುಲಭವಾಗಿ ಹುಡುಕ ಲು ಸಹಾಯಕವಾಗಲಿದೆ ಎಂಬ ವಿಶ್ವಾಸ ಯೂಟ್ಯೂಬ್‌ಗಿದೆ. ಪ್ರಚಾರ, ನುಡಿಚಿತ್ರದ ವಿಡಿಯೋಗಳೊಂದಿಗೆ ಬಳಕೆದಾರರಿಗೆ ಸಹಾಯದಂತಹ ಇನ್ನೂ ಹತ್ತು ಹಲವಾರು ವೈಶಿಷ್ಟ್ಯಗಳನ್ನು ಯೂಟ್ಯೂಬ್ ಇಂಡಿಯಾ ಒದಗಿಸಲಿದೆ.

ಈ ಒಂದು ಸ್ಥಳೀಯ ವಿಡಿಯೋ ಅಂತರ್ಜಾಲ ತಾಣ ಅನಿವಾಸಿ ಭಾರತೀಯರನ್ನು ಸಂಪರ್ಕಿಸಲು ಬಹಳಷ್ಟು ಉಪಯುಕ್ತ ತಾಣವಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಅಚ್ಚುಮೆಚ್ಚಿನ ಟಾಪ್ ವಿಡಿಯೋಗಳು ಹಾಗೂ ಅಂಗೀಕಾರಾರ್ಹವಾದ ವಿಡಿಯೋಗಳು ಭಾರತೀಯ ಯೂಟ್ಯೂಬ್‌ನಲ್ಲಿ ನೋಡಿ ಸಂತೋಷಿಸಬಹುದು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X