ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರ ಹೊತ್ತೊಯ್ಯುವ 'ಅಗ್ನಿ' ಪರೀಕ್ಷೆ ಯಶಸ್ವಿ

By Staff
|
Google Oneindia Kannada News

Agni III test successfulಬಾಲಾಸೂರ್,ಮೇ7: ಪರಮಾಣು ಮತ್ತು ಕ್ಷಿಪಣಿ ಶಸ್ತ್ರಾಗಾರ ವಿಷಯದಲ್ಲಿ ಚೀನಾ ಜತೆಗೆ ತೀವ್ರ ಪೈಪೋಟಿ ನಡೆಸುವ ಉದ್ದೇಶದಿಂದ ಮಹತ್ವಾಕಾಂಕ್ಷಿ ಅಗ್ನಿ-3 ಕ್ಷಿಪಣಿಯ ಪರೀಕ್ಷಾರ್ಥವಾಗಿ ನಡೆಸಿದ ಉಡಾವಣೆ ಯಶಸ್ವಿಯಾಗಿದೆ. ಒರಿಸ್ಸಾದ ವ್ಹೀಲರ್ ದ್ವೀಪದ ಸಂಘಟಿತ ಪರೀಕ್ಷಾ ವಲಯದಲ್ಲಿ ಬುಧವಾರ ಬೆಳಗ್ಗೆ 9.56ಕ್ಕೆ ಉಡಾವಣೆ ಮಾಡಲಾಯಿತು.

16 ಮೀಟರ್ ಉದ್ದ ಮತ್ತು 1.8 ಮೀಟರ್ ಅಗಲದ ಅಗ್ನಿ-3 ಕ್ಷಿಪಣಿ ಬೆಂಕಿಯನ್ನು ಚಿಮ್ಮುತ್ತ ಆಕಾಶದಡೆಗೆ ಪ್ರಯಾಣ ಬೆಳಸಿದ ದೃಶ್ಯವನ್ನು ನೋಡಿ ಭಾರಿ ರೋಮಾಂಚನ ಉಂಟಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಗಂಟೆಗೆ 3000 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ ಕ್ಷಿಪಣಿಯು 48 ಟನ್ ಗಳಷ್ಟು ಸರಕುಗಳನ್ನು, 1.5 ಟನ್ ಸಿಡಿ ತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಅಗ್ನಿ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು 2006ರ ಜುಲೈ ತಿಂಗಳಲ್ಲಿ ನಡೆಸಲಾಗಿತ್ತು. ಉಡಾವಣೆಯಾದ 65 ಸೆಕೆಂಡ್ ಗಳಲ್ಲಿ ವಿಜ್ಞಾನಿಗಳು ಕ್ಷಿಪಣಿ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ ಅದು ವಿಫಲವಾಗಿತ್ತು. ಆದರೆ ಈ ಭಾರಿ ಎಚ್ಚರಿಕೆಯಿಂದ ಉಡಾವಣೆಗೊಳಿಸಲಾಗಿದ್ದು, ಯಶಸ್ವಿಯಾಗಿ ಪ್ರಯೋಗಿಸಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X