ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಲೆ: ಸಮೀಕ್ಷೆ

By Staff
|
Google Oneindia Kannada News

Saffron party lead in Karnataka: prepoll surveyಬೆಂಗಳೂರು,ಮೇ6: ಕರ್ನಾಟಕದ ಮತದಾರರು ಭಾರತೀಯ ಜನತಾ ಪಕ್ಷದ ಕಡೆಗೆ ಹೆಚ್ಚು ಒಲವು ತೋರಿಸಿದ್ದಾರೆ ಎಂದು ಚೆನ್ನೈ ಮೂಲದ ಲೊಯೆಲಾ ಕಾಲೇಜಿನ ಪೀಪಲ್ಸ್ ಸ್ಟಡೀಸ್ ಸಂಸ್ಥೆಯು ನಡೆಸಿದ ಚುನಾವಣೆ ಪೂರ್ವ ಸಮೀಕ್ಷೆ ತಿಳಿಸುತ್ತದೆ. ಸಮೀಕ್ಷೆಯಲ್ಲಿ ಶೇ. 36.1 ರಷ್ಟು ಜನರು ಬಿಜೆಪಿ, ಶೇ.31 ರಷ್ಟು ಜನರು ಕಾಂಗ್ರೆಸ್ ಹಾಗೂ ಶೇ.14.7 ರಷ್ಟು ಜನರು ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ.

ಕಳೆದ ವಾರ ಖಾಸಗಿ ವಾಹಿನಿಯೊಂದರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದ್ದು, ಬಿಜೆಪಿ ಗಮನಾರ್ಹ ಕುಸಿತ ಕಂಡಿತ್ತು. ಆದರೆ ಈ ಸಮೀಕ್ಷೆಯಲ್ಲಿ ಬಿಜೆಪಿ ಹೆಚ್ಚು ಮತಗಳನ್ನು ಗಳಿಸುತ್ತದೆ ಎನ್ನುವ ಮೂಲಕ ಜನರಲ್ಲಿ ತೀವ್ರ ಕುತೂಹಲ ಉಂಟು ಮಾಡಿದೆ.

ರಾಜ್ಯದ 28 ಜಿಲ್ಲೆಗಳ ಸುಮಾರು 75 ವಿಧಾನಸಭೆ ಕ್ಷೇತ್ರಗಳಲ್ಲಿ 3669 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಕಳೆದ ಏಪ್ರಿಲ್ 18 ರಿಂದ 27ರ ತನಕ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಬಿಜೆಪಿ ತನ್ನ ಎದುರಾಳಿ ಪಕ್ಷಕ್ಕಿಂತ ಮುಂದಿದ್ದರೂ ಜನವರಿ ನಂತರ ಈ ಪಕ್ಷದ ಜನಪ್ರಿಯತೆ ಕಡಿಮೆಯಾಯಿತು ಎಂದು ಸಮೀಕ್ಷೆ ತಿಳಿಸಿದೆ.

ಅಧಿಕಾರ ಹಸ್ತಾಂತರದಿಂದ ವಂಚಿತರಾದಾಗ ಬಿಜೆಪಿಗೆ ಭಾರಿ ಅಲೆ ಇತ್ತು. ಆದರೆ ಜನವರಿ ನಂತರ ಆ ಅನುಕಂಪದ ಅಲೆ ಕ್ರಮೇಣ ಮಾಯವಾಯಿತು. ಈ ಅವಧಿಯಲ್ಲಿ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರೂ, ಅಧಿಕಾರ ಹಿಡಿಯುವ ಮಟ್ಟಕ್ಕೆ ಏರಲು ಸಾಧ್ಯವಾಗಿಲ್ಲ. ಜೆಡಿಎಸ್ ಕೂಡಾ ಸ್ವಲ್ಪ ಮಟ್ಟಿಗೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.

ರಾಜ್ಯದ ಒಟ್ಟಾರೆ ಚಿತ್ರಣವನ್ನು ಗಣನೆಗೆ ತೆಗೆದುಕೊಂಡಾಗ ಬಿಜೆಪಿ ಬಗ್ಗೆ ಜನರಲ್ಲಿ ಒಲವಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಭಾರಿ ಪೈಪೋಟಿ ನಡೆಯಲಿದೆ. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಆಗಬೇಕೆಂದು ಅಭಿಲಾಷೆ ವ್ಯಕ್ತಪಡಿಸಿ ಶೇ.37.8 ರಷ್ಟು ಜನರು ಅವರಿಗೆ ಒಲವು ತೋರಿದ್ದಾರೆ. ಶೇ.20.1ರಷ್ಟು ಜನ ಎಸ್.ಎಂ.ಕೃಷ್ಣ ಅವರ ಕಡೆ ಒಲವು ತೋರಿಸಿದ್ದಾರೆ.ಶೇ.18. 4 ರಷ್ಟು ಜನಪ್ರಿಯತೆಯನ್ನು ಎಚ್.ಡಿ. ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಒಂದೇ ಪಕ್ಷ ಆಡಳಿತದಲ್ಲಿರಬೇಕು ಎನ್ನುವುದು ಶೇ.68 ಜನರ ಅನಿಸಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X