ನೇತಾಜಿಯ ಫಾರ್ವರ್ಡ್ ಬ್ಲಾಕ್ ಚುನಾವಣೆ ಆಖಾಡಕ್ಕೆ
ಬೆಂಗಳೂರು, ಮೇ 3 : ಸ್ವಾತಂತ್ರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ 1939ರಲ್ಲಿ ಸ್ಥಾಪಿಸಿದ್ದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಸಂಘಟನೆ ಈ ಬಾರಿ ರಾಜ್ಯದಲ್ಲಿ ಚುನಾವಣಾ ಆಖಾಡಕ್ಕಿಳಿದಿದೆ. ರಾಜ್ಯದ ವಿವಿಧೆಡೆ ಸುಮಾರು 16 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವುದರೊಂದಿಗೆ ರಾಜ್ಯ ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಫಾರ್ವರ್ಡ್ ಬ್ಲಾಕ್ ಸಂಘಟನೆಯ ಸಂಚಾಲಕ ಕೆ.ಸಿ.ವೆಂಕಟೇಶ್, ನೇತಾಜಿ ಆಶಯದಂತೆ ನಾವು ಕೂಡಾ ಸಮಾಜ ದೀನ ದಲಿತರು, ಮಕ್ಕಳು, ಮಹಿಳೆಯರ ಅಭಿವೃದ್ಧಿಗೋಸ್ಕರ ರಾಜಕೀಯ ರಂಗಕ್ಕೆ ಇಳಿದಿದ್ದೇವೆ ಎಂದರು.
ತಾವು ರಾಜರಾಜೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿರುವುದಾಗಿ ಹೇಳಿದ ವೆಂಕಟೇಶ್, ಸ್ವಾತಂತ್ರ ಹೋರಾಟಗಾರರು, ಹಿತೈಷಿಗಳು ಹಾಗೂ ಅಪಾರ ಬೆಂಬಲಿಗರು ಬೆಂಬಲ ವ್ಯಕ್ತಪಡಿಸಿದ್ದರಿಂದ ತಾವು ರಾಜಕೀಯಕ್ಕೆ ಧುಮುಕಿದ್ದೇವೆ. ಸಮಾಜದ ಮೂಲಭೂತ ಸೌಕರ್ಯದಿಂದ ವಂಚಿರಾಗಿರುವ ಜನರಿಗಾಗಿ ಶ್ರಮಿಸುತ್ತೇವೆ ಎಂದು ವೆಂಕಟೇಶ್ ಭರವಸೆ ನೀಡಿದರು.
ವೆಂಕಟೇಶ್ ಈಗಾಗಲೇ ಪರಸ್ಪರ ಎನ್ನುವ ಎನ್ ಜಿಓ ನಡೆಸುತ್ತಿದ್ದು, ಕೊಳಚೆ ಪ್ರದೇಶ ನಿರ್ಮೂಲನೆ, ಮೂಲಭೂತ ಸೌಕರ್ಯಗಳಂತಹ ಕೆಲಸಗಳಲ್ಲಿ ತೊಡಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಫಾರ್ವರ್ಡ್ ಬ್ಲಾಕ್ ಚುನಾವಣೆಗೆ ಇಳಿದಿರುವುದು ಇದೇ ಮೂದಲೇನಲ್ಲ. ಈಗಾಗಲೇ ಪಶ್ಚಿಮ ಬಂಗಾಲದಲ್ಲಿ 36 ಜನ ಶಾಸಕರಿದ್ದಾರೆ. 3 ಮಂದಿ ಲೋಕಸಭೆ ಸದಸ್ಯರಿದ್ದಾರೆ. ಪಾರ್ವರ್ಡ್ ಬ್ಲಾಕ್ ಸಂಘಟನೆ ಎಡರಂಗ ಪಕ್ಷಗಳೊಂದಿಗೆ ಗುರುಸಿತಿಕೊಂಡಿದೆ.
(ದಟ್ಸ್ ಕನ್ನಡ ವಾರ್ತೆ)