ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 2 ರಂದು ಪಿಯೂಸಿ ಪರೀಕ್ಷೆ ಫಲಿತಾಂಶ

By Staff
|
Google Oneindia Kannada News

2008ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ಕಿಸಿ
2008ನೇ ಸಾಲಿನ ಪಿಯುಸಿ ಪರೀಕ್ಷೆ ಫಲಿತಾಂಶ ತಿಳಿಯಲು ಇಲ್ಲಿ ಕ್ಲಿಕ್ಕಿಸಿ

Karnataka second PUC results ( 2008) on 2 Mayಬೆಂಗಳೂರು, ಮೇ.1: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮೇ. 2 ರ ಶುಕ್ರವಾರ ಮಧ್ಯಾನ್ಹದ ನಂತರ ವೆಬ್ ಸೈಟ್ ಗಳಲ್ಲಿ ಹಾಗೂ ಮೇ. 3 ರ ಶನಿವಾರ ಮಧ್ಯಾಹ್ನ 3:30 ರ ನಂತರ ಆಯಾ ಕಾಲೇಜುಗಳಲ್ಲಿ ಪ್ರಕಟಗೊಳ್ಳಲಿದೆ. ಫಲಿತಾಂಶ ಪ್ರಕಟವಾಗುವ ವೆಬ್ ಸೈಟಿನ ವಿಳಾಸಗಳನ್ನು ಮೇ 2 ರಂದು ಪತ್ರಿಕೆ, ಟಿವಿ ಮತ್ತು ವೆಬ್ ಸೈಟ್ ಗಳಲ್ಲಿ ಪ್ರಕಟಿಸಲಾಗುವುದು ಎಂದು ಪದವಿಪೂರ್ವಶಿಕ್ಷಣ ಇಲಾಖೆ ಆಯುಕ್ತ ಎಸ್ .ಜಿ. ಹೆಗಡೆ ಅವರು ತಿಳಿಸಿದ್ದಾರೆ.

ದಟ್ಸ್ ಕನ್ನಡ ಡಾಟ್ ಕಾಮ್ ಹಾಗೂ ಒನ್ ಇಂಡಿಯಾ ವೆಬ್ ತಾಣಗಳು ಎಸ್ ಎಸ್ ಎಲ್ ಸಿ ಹಾಗೂ ಎರಡನೆ ಪಿಯೂಸಿ ಫಲಿತಾಂಶಗಳನ್ನು ಎಂದಿನಂತೆ ಪ್ರಕಟಿಸಲು ಮುಂದಾಗಿವೆ. ಫಲಿತಾಂಶಗಳ ಪುಟ ನೋಡಲು ಈ ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿರಿ.

ಪಿಯೂಸಿ ಮಂಡಳಿ ಫಲಿತಾಂಶಗಳನ್ನು ವೆಬ್ ಸೈಟಿಗೆ ಶುಕ್ರವಾರ ಸಂಜೆ 4 ಗಂಟೆ ಸಮಯಕ್ಕೆ ನೀಡುತ್ತದೆ. ಸುಮಾರು 6 ಲಕ್ಷ ಫಲಿತಾಂಶದ ಅಂಕಿಅಂಶಗಳನ್ನು ಅಪ್ ಲೋಡ್ ಮಾಡುವುದಕ್ಕೆ 2 ಗಂಟೆಗಳ ಕಾಲ ಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಸಂಜೆ 6 ರ ನಂತರ ನಮ್ಮ ವೆಬ್ ಸೈಟ್ ನೋಡಿ ಫಲಿತಾಂಶಗಳನ್ನು ತಿಳಿದುಕೊಳ್ಳಬಹುದು. ಯಾವುದೇ ಕಾರಣಕ್ಕೂ ಪಿಯೂಸಿ ಫಲಿತಾಂಶಗಳು ಸೆಬ್ ಸೈಟಿನಲ್ಲಿ ಶುಕ್ರವಾರ ಸಂಜೆಗೆ ಮುಂಚೆ ಲಭ್ಯವಿರುವುದಿಲ್ಲ. ವಿದ್ಯಾರ್ಥಿಗಳು ತಾಳ್ಮೆವಹಿಸಬೇಕಾಗಿ ವಿನಂತಿ.

ಎಸ್ಸೆಸ್ಸೆಲ್ಸಿ ಫಲಿತಾಂಶ:

ಮೇ. 5 ರಂದು ಭಾನುವಾರ ಎಸ್ ಎಸ್ ಎಲ್ ಸಿ ಫಲಿತಾಂಶ ವೆಬ್ ಸೈಟ್ ಗಳಲ್ಲಿ ಪ್ರಕಟಗೊಳ್ಳುವ ಮುನ್ಸೂಚನೆಯಿದೆ.ಮೇ. 6 ರಂದು ಸಂಬಂಧಪಟ್ಟ ಶಾಲೆಗಳಲ್ಲಿ ಪ್ರಕಟಗೊಳ್ಳಲಿದೆ ಎಂದು ಪರೀಕ್ಷಾ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧದ ಇತ್ತೀಚಿನ ಮಾಹಿತಿಗಳಿಗೆ ನಮ್ಮ ವೆಬ್ ಸೈಟ್ ನೋಡುತ್ತಿರಿ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X