ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ವಿಮಾನ ನಿಲ್ದಾಣ ಕಾರ್ಯಾರಂಭ ವಿಳಂಬ

By Staff
|
Google Oneindia Kannada News

ನವದೆಹಲಿ,ಏ.30: ಬೆಂಗಳೂರಿನ ನೂತನ ವಿಮಾನ ನಿಲ್ದಾಣವು ಕಾರ್ಯಾರಂಭ ಮಾಡಬೇಕಾದ ದಿನಾಂಕ ಮತ್ತೊಮ್ಮೆ ಮುಂದಕ್ಕೆ ಹೋಗಿದ್ದು, ಮೇ ಕೊನೆಯ ವಾರದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ. ಇದೇ ವೇಳೆ ಈಗಿರುವ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸಣ್ಣ ವಿಮಾನಗಳ ಹಾರಾಟ ನಡೆಸುವ ಸಾಧ್ಯತೆಯೂ ಹೆಚ್ಚಾಗಿದೆ.

ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಪುಲ್ ಪಟೇಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಗೆ(ಬಿಐಎಎಲ್) ಈಗಿರುವ ವಿಮಾನ ನಿಲ್ದಾಣದಲ್ಲಿ 80 ಸೀಟುಗಳಿಗಿಂತ ಚಿಕ್ಕ ವಿಮಾನಗಳನ್ನು ಹಾರಾಟಕ್ಕೆ ಅವಕಾಶ ಕೊಡುವುದು ಸಹಿತ ಹಲವು ಆಯ್ಕೆಗಳನ್ನು ನಾವು ನೀಡಿದ್ದೇವೆ ಎಂದು ಹೇಳಿದರು.

ನೂತನ ವಿಮಾನ ನಿಲ್ದಾಣ ಆರಂಭದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನ ಸಲಹೆಗಳ ಅನುಸಾರ ವಿಮಾನ ನಿಲ್ದಾಣದ ನಿರ್ವಾಹಕರಾದ ಬಿಐಎಎಲ್ ಜತೆಗೆ ಧೀರ್ಘ ಚರ್ಚೆ ನಡೆಸಲಾಗಿದೆ ಎಂದು ಪಟೇಲ್ ಸ್ಪಷ್ಟಪಡಿಸಿದರು. ಈಗಿರುವ ವಿಮಾನ ನಿಲ್ದಾಣ ಮುಂದುವರೆಯುವಂತೆ ನೋಡಿಕೊಳ್ಳಲು ಇರುವ ಅವಕಾಶಗಳನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಈ ಮೊದಲು ನಿರ್ದೇಶನ ನೀಡಿತ್ತು. ಇಲ್ಲಿ ಕಾನೂನು ವಿಚಾರಗಳಿವೆ, ಒಪ್ಪಂದಕ್ಕೆ ಸಂಬಂಧಿಸಿದ ಬದ್ಧತೆಗಳಿವೆ, ನಾವು ಅವೆಲ್ಲದರ ಬಗ್ಗೆ ಚರ್ಚೆಸಿದ್ದೇವೆ. ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಮೇ ಕೊನೆಯ ವಾರದಲ್ಲಿ ನೂತನ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ ಎಂದು ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.ಮೇ 12 ರಂದು ನಾವು ಮತ್ತೆ ಸಭೆ ಸೇರಲಿದ್ದು, ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X