• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

70 ಸಾವಿರ ಪೊಲೀಸರು ಮತದಾನದಿಂದ ವಂಚಿತರು!

By Staff
|

ಬೆಂಗಳೂರು,ಏ.26: ಮತದಾನ ಎಲ್ಲ ಮಾಡುವುದು ಜನ್ಮಸಿದ್ಧ ಹಕ್ಕು, ಮತದಾನ ಮಾಡುವುದನ್ನು ಯಾರು ಮರೆಯಬಾರದು ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುತ್ತದೆ, ಆದರೆ ಸಮಾಜಕ್ಕೆ ಭದ್ರತೆಯನ್ನು ಒದಗಿಸುವ ಪೊಲೀಸರು ಮಾತ್ರ ಪ್ರತಿ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶದಿಂದ ವಂಚಿತರಾಗುತ್ತಾರೆ.

ಈ ಸಲದ ಚುನಾವಣೆಯಲ್ಲಿ ಸುಮಾರು 70 ಸಾವಿರ ಪೊಲೀಸ್ ಸಿಬ್ಬಂದಿ ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ. ಕಾರಣ ಪೊಲೀಸ್ ಕೆಲಸವೇ ಅಂತದ್ದು, ಗಲಭೆ, ದೊಂಬಿ, ಗೋಲಿಬಾರ್ ಪ್ರತಿ ಹಂತದಲ್ಲಿ ಅವರು ಬೇಕೆಬೇಕು. ಸಮಾಜಕ್ಕೆ ಭದ್ರತೆ ಒದಗಿಸುವುದು ಇವರ ಕಾಯಕ. ಅದರಲ್ಲೂ ಚುನಾವಣೆಯಲ್ಲಿ ಪೊಲೀಸರಿಲ್ಲದಿದ್ದರೆ ಪರಿಣಾಮವನ್ನು ಊಹಿಸಲು ಅಸಾಧ್ಯ. ಈ ಕಾರಣಕ್ಕೆ ಪೊಲೀಸ್ ಸೇವೆಯಲ್ಲಿರುವ ರಾಜ್ಯ ಸುಮಾರು 70 ಸಾವಿರ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ.

ಬದಲಿ ವ್ಯವಸ್ಥೆ:

ಕಳೆದ 30 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿರುವ ಜನರಂತೂ, ಈ ಕುರಿತು ಬಾರಿ ನಿರಾಶೆ ವ್ಯಕ್ತಪಡಿಸುತ್ತಾರೆ. ಇಲ್ಲಿಯವರೆಗೂ ಇಲಾಖೆಯಾಗಲೀ, ಹಿರಿಯ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮತದಾನ ಎಲ್ಲರ ಹಕ್ಕು ಎಂದು ಪ್ರತಿಪಾದಿಸುವ ಸರ್ಕಾರ, ತಮಗೆ ರಕ್ಷಣೆ ನೀಡುವ ಜನರು ಮತದಾನದಿಂದ ವಂಚಿತರಾದರೂ ಅಷ್ಟಾಗಿ ಗಮನ ಹರಿಸಿಲ್ಲ.

ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿ ಶ್ರೀಕುಮಾರ್ ಅವರು, ಈ ಸಲ ಚುನಾವಣೆಯಲ್ಲಿ ಅಂಚೆ ಮೊಲಕ ಮತದಾನ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟ ಅರ್ಜಿಗಳು ಇದುವರೆವಿಗೂಯಾವ ಸಿಬ್ಬಂದಿ ಕೈಗೂ ದೊರೆತಿಲ್ಲ. ಇದರಿಂದ ಸಿಬ್ಬಂದಿ ಈ ಬಾರಿಯೂ ಮತದಾನದಿಂದ ವಂಚಿತರಾಗುವ ಸಾಧ್ಯತೆಗಳು ಹೆಚ್ಚಾಗಿವೆ.ಅವಧಿ ಮುಗಿದ ನಂತರ ಮತದಾನದ ಹಕ್ಕು ಸಿಗುವುದಿಲ್ಲ. ಹೀಗಾಗಿ ಪೊಲೀಸರು ಕರ್ತ್ಯವ್ಯದ ಕರೆಗೆ ಓಗೊಟ್ಟು, ಮತದಾನದ ಕರ್ತ್ಯವ್ಯದಿಂದ ವಂಚಿತರಾಗಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more