ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಪಾಲಕರ ನಕಾರ : ವಿಷ ಸೇವಿಸಿದ ಪ್ರೇಮಿಗಳು

By Staff
|
Google Oneindia Kannada News

ಗುಲಬರ್ಗಾ, ಏ. 22 : ಬೇರೆ ಬೇರೆ ಜಾತಿಗೆ ಸೇರಿದ ಇಬ್ಬರು ಯುವ ಪ್ರೇಮಿಗಳು ಹಿರಿಯರು ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ್ದರಿಂದ ವಿಷ ಸೇವಿಸಿರುವ ಘಟನೆ ಜಿಲ್ಲೆಯ ಜೇವರ್ಗಿಯಲ್ಲಿ ನಡೆದಿದೆ.

22ರ ಹರೆಯದ ಯಲ್ಲಪ್ಪ ಸತ್ತಿದ್ದು, 18 ವಯಸ್ಸಿನ ಶಾಲಾ ಬಾಲಕಿ ರಾಜೇಶ್ವರಿ ಸಾವು ಬದುಕಿನ ನಡುವೆ ಹುಯ್ದಾಡುತ್ತಿದ್ದಾಳೆ. ಆಕೆಯನ್ನು ಗುಲಬರ್ಗಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಘಟನೆಯ ವಿವರ : ಹತ್ತನೇ ಕ್ಲಾಸಿನಲ್ಲಿ ಓದುತ್ತಿರುವ ಬಾಲಕಿ ರಾಜೇಶ್ವರಿ ಮತ್ತು ಪದವಿಯ ಕೊನೇ ವರ್ಷದಲ್ಲಿರುವ ಯಲ್ಲಪ್ಪನೊಂದಿಗೆ ಗಾಢವಾಗಿ ಪ್ರೀತಿಸುತ್ತಿದ್ದಳು. ಇಬ್ಬರದೂ ಬೇರೆ ಬೇರೆ ಜಾತಿ. ಇನ್ನೂ ಓದುತ್ತಿರುವಾಗಲೇ, ಇಬ್ಬರೂ ಮದುವೆ ಪ್ರಸ್ತಾವನೆಯನ್ನು ಎರಡೂ ಕುಟುಂಬಗಳ ಮುಂದಿಟ್ಟರು. ಇನ್ನೂ ಓದುತ್ತಿರುವ ಕಾರಣ ಮತ್ತು ಇಬ್ಬರ ಜಾತಿಯೂ ಬೇರೆಬೇರೆಯಾಗಿದ್ದರಿಂದ ಇಬ್ಬರ ಪಾಲಕರು ಮದುವೆಯ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಇದರಿಂದ ತೀವ್ರ ನಿರಾಶೆಗೊಂಡ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಸೋಮವಾರ ಸಾಯಂಕಾಲ ಗುಲಬರ್ಗಾಕ್ಕೆ ಬಂದ ಇಬ್ಬರೂ ರೈಲು ನಿಲ್ದಾಣದ ಬಳಿ ವಿಷ ಸೇವಿಸಿದ್ದಾರೆ. ಯಲ್ಲಪ್ಪ ಸ್ಥಳದಲ್ಲೇ ಸಾವಿಗೀಡಾದರೆ, ದಾರಿಹೋಕರು ರಾಜೇಶ್ವರಿಯನ್ನು ಆಸ್ಪತ್ರೆಗೆ ಸಾಗಿಸಿದರು. ಒಟ್ಟಿಗೆ ಬದುಕಲು ಬಿಡದ ಪಾಲಕರು ಸತ್ತಮೇಲಾದರೂ ಇಬ್ಬರನ್ನೂ ಒಗ್ಗೂಡಿಸಬೇಕು, ತಮ್ಮನ್ನು ಒಟ್ಟಿಗೆ ಹೂಳಬೇಕೆಂದು ಮರಣಪತ್ರದಲ್ಲಿ ಬರೆದಿದ್ದಾರೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X