• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣಾ ಕಣಕ್ಕೆ ಧುಮುಕುತ್ತಿರುವ ಐಐಟಿ 'ಬುದ್ಧಿವಂತರು'

By Staff
|

ಬೆಂಗಳೂರು, ಏ.21 : ವಿದ್ಯಾವಂತ ಮತದಾರರನ್ನು ಸೆಳೆಯುವ ಉದ್ದೇಶದಿಂದ 'ಬುದ್ಧಿವಂತ' ಯುವಕರ ಪಡೆಯೊಂದು ಕರ್ನಾಟಕದಲ್ಲಿ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿದಿದೆ.

ಐಐಟಿಯ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಸ್ಥಾಪಿಸಿರುವ 'ಲೋಕ ಪರಿತ್ರಣ' ಪಕ್ಷವೇ ಬೆಂಗಳೂರನ್ನು ಮೊದಲು ಮಾಡಿಕೊಂಡು ರಾಷ್ಟ್ರದಲ್ಲಿ ರಾಜಕೀಯ ರಂಗದಲ್ಲಿ ಅಸ್ತಿತ್ವವನ್ನು ಕಂಡುಕೊಳ್ಳಲು ಮುಂದಡಿಯಿಟ್ಟಿದೆ.

ಜಿಡ‌್ಡುಹಿಡಿದಿರುವ ರಾಜಕೀಯ ವ್ಯವಸ್ಥೆಯನ್ನು ತೊಳೆಯುವ ಹುಮ್ಮಸ್ಸಿನಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ಜಾಣರ ಪಕ್ಷ ಬೆಂಗಳೂರಿನ 28 ಕ್ಷೇತ್ರಗಳಲ್ಲಿ 20ರಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಪಕ್ಕಾ 'ರಾಜಕಾರಣಿ'ಗಳ ಹಣ, ಪ್ರಭಾವದ ಮುಂದೆ ತಮ್ಮ ಆಟವೇನೂ ನಡೆಯುವುದಿಲ್ಲವೆಂಬ ಕಟುಸತ್ಯವನ್ನು ಗಮನದಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಾಗಿದೆ.

ಈ ವಿಷಯವನ್ನು ಜನತೆಗೆ ಮುಟ್ಟಿಸಲು ಲೋಕ ಪರಿತ್ರಣ ಪಕ್ಷದ ಅಧ್ಯಕ್ಷ ಬಿ.ಟಿ. ನಾಗಣ್ಣ ಇಂದು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ನಮ್ಮ ಪಕ್ಷ ಸ್ಥಿರತೆ ಕಂಡುಕೊಳ್ಳಲು ಕನಿಷ್ಠ 10ರಿಂದ 15 ವರ್ಷಗಳಾದರೂ ಬೇಕೆಂಬ ಅರಿವು ನಮಗಿದೆ. ಒಂದೆರಡು ವರ್ಷಗಳಲ್ಲಿ ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಕಾಯಬೇಕು ಮತ್ತು ಪ್ರಾಕ್ಟಿಕಲ್ಲಾಗಿರಬೇಕು ಎಂದು ನಾಗಣ್ಣ ತಮ್ಮ ಪಕ್ಷದ ಮುಂದಿನ ಕಾರ್ಯಾಚರಣೆಯ ಬಗ್ಗೆ ವಿವರಿಸಿದರು.

ಚುನಾವಣಾ ಆಯೋಗದಿಂದ ಗುರುತಿಸಲ್ಪಡುತ್ತೇವೆಂಬ ಆಶಾಭಾವನೆ ಹೊಂದಿದ್ದೇವೆ. ನಾಲ್ಕು ಬೇರೆ ರಾಜ್ಯಗಳಲ್ಲಿ ಕನಿಷ್ಠ 6ರಷ್ಟಾದರೂ ಮತ ನಾವು ಗಳಿಸಬೇಕು. ಬೆಂಗಳೂರು ನಮ್ಮ ಉದ್ದೇಶ ಈಡೇರಿಕೆಗಾಗಿ ನಾವು ಇಟ್ಟಿರುವ ಮೊದಲ ಹೆಜ್ಜೆ ಎಂದು ಅವರು ಹೇಳಿದರು.

ಭ್ರಷ್ಟಾಚಾರದ ಹಂಗಿಲ್ಲ, ಉದ್ದುದ್ದ ಭರವಸೆಗಳಿಲ್ಲ, ಗೆದ್ದೇ ಗೆಲ್ಲುತ್ತೇವೆಂಬ ವಿಪರೀತ ವಿಶ್ವಾಸವೂ ಇಲ್ಲ. ಆದರೆ ಈ ಯುವಕರಿಗೆ ಇರುವುದು ಮುಂದೊಂದು ದಿನ ಬದಲಾವಣೆಯನ್ನು ತರುತ್ತೇವೆಂಬ ಆತ್ಮವಿಶ್ವಾಸ ಮತ್ತು ಆಶಾಭಾವನೆ.

ಬಿಇ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ನಾಗಣ್ಣ ಕೆ.ಆರ್.ಪುರಂನಿಂದ ಸ್ಪರ್ಧಿಸುತ್ತಿದ್ದಾರೆ. ಸಾರ್ವಜನಿಕ ಆಡಳಿತದಲ್ಲಿ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಗಳಿಸಿರುವ ಎನ್.ವಿ.ಕೃಷ್ಣಕುಮಾರ್ ಗೋವಿಂದರಾಜನಗರದಿಂದ ಸ್ಪರ್ಧೆಗಿಳಿಯಲಿದ್ದಾರೆ. ಪಕ್ಷದ ಮತ್ತೊಬ್ಬ ನಾಯಕ ದಂತ ವೈದ್ಯರಾಗಿರುವ ಡಾ.ಜೆ.ಎಸ್. ಕೇಶವ ಕುಮಾರ್ ಶಾಂತಿನಗರದಿಂದ ಅದೃಷ್ಟಪರೀಕ್ಷೆ ಮಾಡಲಿದ್ದಾರೆ.

ರಾಜಕೀಯ ರಂಗದಲ್ಲಿ ಬದಲಾವಣೆ ತರಲು ಇತ್ತೀಚೆಗೆ ಉನ್ನತ ಶಿಕ್ಷಣ ಪಡೆದ ಅನೇಕ ಯುವಕರು ಚುನಾವಣೆಗಿಳಿಯುತ್ತಿದ್ದಾರೆ. ಬೆಂಗಳೂರು ಮೂಲದ ಕ್ಯಾಲಿಫೋರ್ನಿಯಾ ನಿವಾಸಿ ರವಿ ಕೃಷ್ಣಾ ರೆಡ್ಡಿ ಕೂಡ ಜಯನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

(ಏಜೆನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more