ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಐದು ಕೋಟಿ ಕನ್ನಡಿಗರ ಗಮನಕ್ಕೆ

By Staff
|
Google Oneindia Kannada News

ಬೆಂಗಳೂರು,ಏ.17: ಕರ್ನಾಟಕದಲ್ಲಿನ ಅನ್ಯಭಾಷಿಕರಲ್ಲಿ ತೆಲುಗು,ಮರಾಠಿ ಮತ್ತು ತಮಿಳು ಭಾಷಿಗರು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ. ಹಾಗಂತ ಹೇಳುತ್ತದೆ 2001ರ ಜನಗಣತಿ ಅಂಕಿ-ಅಂಶಗಳು.

ರಾಜ್ಯದಲ್ಲಿ ಅನ್ಯಭಾಷಿಕರ ಹಾವಳಿ ಹೆಚ್ಚಾಗಿದೆ ಎನ್ನುವುದು ಎಲ್ಲರೂ ಒಪ್ಪುವ ಮಾತು. ಅನ್ಯಭಾಷಿಕರಿಗೆ ಹೋಲಿಸಿದರೆ ತಮಿಳರು ಅಧಿಕ ಸಂಖ್ಯೆಯಲ್ಲಿದ್ದಾರೆ ,ಜೊತೆಗೆ ಇಲ್ಲಿಯ ಉದ್ಯಮ ಮತ್ತು ಉದ್ಯೋಗದಲ್ಲಿ ಸಿಂಹಪಾಲು ಅವರದೇ ಎಂದು ಕನ್ನಡಿಗರು ತಮಿಳರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವುದು ಸಾಮಾನ್ಯ . ಆದರೆ 2001ರ ಜನಗಣತಿ ಪ್ರಕಾರ ಕರ್ನಾಟಕದಲ್ಲಿ ತಮಿಳರಗಿಂತ ತೆಲುಗು ಭಾಷಿಗರು ಅಧಿಕ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಎನ್ನುವ ಮಹತ್ವದ ಅಂಶ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರೂ ಕೂಡಾ ಒಟ್ಟಾರೆ ರಾಜ್ಯದಲ್ಲಿ ತೆಲುಗರ ಆಧಿಕ್ಯ ಅಧಿಕವಾಗಿದೆ.

2001ರ ಜನಗಣತಿ ಪ್ರಕಾರ ರಾಜ್ಯದಲ್ಲಿ 22 ಅನುಚ್ಛೇದಿತ ಭಾಷೆಗಳನ್ನು ಮಾತನಾಡುವವರಿದ್ದಾರೆ. ರಾಜ್ಯದ 5.28 ಕೋಟಿ ಜನರಲ್ಲಿ 3.48 ಕೋಟಿ ಜನರು ಕನ್ನಡ ಮಾತನಾಡುತ್ತಾರೆ. ಉರ್ದು ಮಾತನಾಡುವವರ ಸಂಖ್ಯೆ 55.39 ಲಕ್ಷ. 36.98 ಲಕ್ಷ ಮಂದಿ ತೆಲುಗು ಭಾಷಿಗರಿದ್ದಾರೆ. 18.74 ಲಕ್ಷದಷ್ಟು ತಮಿಳರಿದ್ದಾರೆ. 18.92 ಲಕ್ಷ ಜನ ಮರಾಠಿಗರಿದ್ದಾರೆ.

ಕರಾವಳಿಯ ತುಳು ಭಾಷೆಯನ್ನು 17 ಲಕ್ಷದಷ್ಟು ಜನ ಮಾತನಾಡುತ್ತಾರೆ. ಐಟಿ-ಬಿಟಿ ಕ್ರಾಂತಿಯಿಂದಾಗಿ ಹಿಂದಿ ಭಾಷಿಕರು ರಾಜ್ಯದಲ್ಲಿ ನೆಲೆಯೂರಿದ್ದು, ಅವರ ಸಂಖ್ಯೆ 13.44 ಲಕ್ಷದಷ್ಟಿದೆ. ಕೊಂಕಣಿಗಳು 7.68 ಮತ್ತು ಮಲೆಯಾಳಿಗಳು ಬರೀ 7 ಲಕ್ಷ ಮಾತ್ರ ಇದ್ದಾರೆ. ಒಟ್ಟಿನಲ್ಲಿ ಕನ್ನಡದ ನೆಲದಲ್ಲಿ ಎಲ್ಲ ಭಾಷಿಕರು ಬೀಡುಬಿಟ್ಟಿದ್ದಾರೆ. ಆದರೆ ಹೊರನಾಡ ಕನ್ನಡಿಗರ ಸಂಖ್ಯೆ ಮಾತ್ರ ಕಡಿಮೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X