• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಗದಿತ ಸಮಯದಲ್ಲೇ 'ಹೊಗೆ' ಯೋಜನೆ: ಸ್ಟಾಲಿನ್

By Staff
|

M K Stalinಚೆನ್ನೈ, ಏ.17: ಹೊಗೇನಕಲ್ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದಾಗಿ ತಮಿಳುನಾಡು ಪೌರಾಡಳಿತ ಸಚಿವ ಎಂ.ಕೆ.ಸ್ಟಾಲಿನ್ ಬುಧವಾರ ತಮಿಳುನಾಡು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ಡಿಸೆಂಬರ್ ತಿಂಗಳ 2012ರ ವೇಳೆಗೆ 1,334 ಕೋಟಿ ರು.ಗಳ ಈ ಯೋಜನೆಯನ್ನು ಒಂದೇ ಒಂದು ದಿನ ಸಹ ತಡ ಮಾಡದೆ ನಿಗದಿತ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಗಡುವಿಗೆ ಸರ್ಕಾರ ಬದ್ಧವಾಗಿರುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಫ್ಲೋರೈಡ್ ಪೀಡಿತ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆಯೇ ವಿನಃ ಮತ್ತಿನ್ಯಾವುದೇ ಉದ್ದೇಶಕ್ಕೆ ಅಲ್ಲ ಎಂಬುದು ತಮಿಳುನಾಡು ಸರ್ಕಾರದ ವಾದ. ಕನ್ನ್ನಡದ ನೆಲ,ಜಲ ಕಬಳಿಸುವ ಹೊಗೇನಕಲ್ ಯೋಜನೆಯನ್ನು ಕನ್ನಡಪರ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದವು.

ಕನ್ನಡಿಗರ ಚಳುವಳಿ ತೀವ್ರಗೊಂಡ ಹಿನ್ನಲೆಯಲ್ಲಿ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿಯುವವರೆಗೆ ಹೊಗೇನಕಲ್ ಯೋಜನೆಗೆ ತಡೆ ನೀಡುವುದಾಗಿ ಕರುಣಾನಿಧಿ ಪ್ರಕಟಿಸಿದ್ದರು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ವಿವಾದವನ್ನು ಸರಿಪಡಿಸಬೇಕು ಎಂದು ತಮಿಳುನಾಡು ಆಗ್ರಹಿಸಿತ್ತು. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ತಮಿಳು ಚಿತ್ರರಂಗ ಒಂದು ದಿನ ಉಪವಾಸ ಸತ್ಯಾಗ್ರಹವನ್ನು ಆಚರಿಸಿತ್ತು.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ:

ರಜನಿಯ ಪ್ರತ್ಯುತ್ತರ ಉಡಾಫೆ ಮಾತು:ಚಂಪಾ

ಕನ್ನಡ ನೆಲ,ಜಲ,ಭಾಷೆಗಾಗಿ ಬೀದಿಗಿಳಿದ ಕಲಾವಿದರು

ತಮಿಳರ ಪ್ರತಿಭಟನೆಗೆ ರಜನಿ, ಕಮಲ್ ಸೇರ್ಪಡೆ

ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

ಏ.4ರಂದು ತಮಿಳು ಚಿತ್ರೋದ್ಯಮ ಭಾರೀ ಪ್ರತಿಭಟನೆ

ಕರುಣಾನಿಧಿ ಹೇಳಿಕೆಗೆ ರಕ್ಷಣಾ ವೇದಿಕೆ ಆಕ್ರೋಶ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more