ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ನಿರಾಕರಣೆ : ಬಿಜೆಪಿಯಲ್ಲಿ ಭುಗಿಲೆದ್ದ ಅಕ್ರೋಶ

By Staff
|
Google Oneindia Kannada News

BJP activists stage dharna in front of Ananthkumar's residenceಬೆಂಗಳೂರು, ಏ.14: ಬಿಜೆಪಿ ಪಕ್ಷದಲ್ಲಿ ಟಿಕೆಟ್ ವಂಚಿತರ ಆಕ್ರೋಶ ಮುಗಿಲು ಮುಟ್ಟಿದೆ. ಗೋವಿಂದರಾಜನಗರ ಹಾಗೂ ಕೆಜಿಎಫ್ ವಿಧಾನಸಭೆ ಕ್ಷೇತ್ರಗಳಲ್ಲಿ ನಿಷ್ಠಾವಂತರಿಗೆ ಟಿಕೆಟ್ ಸಿಕ್ಕಿಲ್ಲ ಎಂದು ಆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತ್ಯೇಕವಾಗಿ ಪ್ರತಿಭಟಿಸಿದ್ದಾರೆ.

ಬಿಜೆಪಿ ಪ್ರಕಟಿಸಿರುವ ದ್ವಿತೀಯ ಪಟ್ಟಿಯಲ್ಲಿ ಗೋವಿಂದರಾಜನಗರ ವಿಧಾನಸಭೆ ಕ್ಷೇತ್ರಕ್ಕೆ ನಿಷ್ಠಾವಂತರಿಗೆ ಟಿಕೆಟ್ ಕೊಟ್ಟಿಲ್ಲ, ಅವರಿಗೆ ಅನ್ಯಾಯವಾಗಿದೆ ಎಂದು ಆಗ್ರಹಿಸಿ ಆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಮನೆ ಮುಂದೆ ಧರಣಿ ನಡೆಸಿದರು. ಪ್ರಸ್ತುತ ಗೋವಿಂದರಾಜನಗರದಲ್ಲಿ ರವೀಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ.

ಕೆಜಿಎಫ್ ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತರಿಗೆ ಅನ್ಯಾಯವಾಗಿದೆ. ಅವರಿಗೆ ಟಿಕೆಟ್ ಕೊಡುವಲ್ಲಿ ಹಸ್ತಕ್ಷೇಪ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಮಲ್ಲೇಶ್ವರಂ ಕಚೇರಿ ಎದಿರು ಪ್ರತಿಭಟನೆ ನಡೆಸಿದರು. ಅಭ್ಯರ್ಥಿಯನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಗೆ ಬೆಲೆಕೊಡದಿದ್ದಾಗ ಆಕ್ರೋಶಗೊಂಡ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದರು. ಕೆಜಿಎಫ್ ಮೀಸಲು ಕ್ಷೇತ್ರದಲ್ಲಿ ಪ್ರಸ್ತುತ ವೈ.ಸಂಪಂಗಿ ಎಂಬವರಿಗೆ ಟಿಕೆಟ್ ನೀಡಲಾಗಿದೆ.

ಒಟ್ಟಿನಲ್ಲಿ ಬಿಜೆಪಿಯಲ್ಲಿನ ಆಂತರಿಕ ವಿವಾದ ಬೀದಿಗೆ ಬಿದ್ದಿದೆ. ಪಕ್ಷದಲ್ಲಿನ ಭಿನ್ನಮತ ಮತ್ತಷ್ಟು ಸ್ಫೋಟಗೊಂಡಿದೆ. ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿದಾಗಲೂ ಟಿಕೆಟ್ ಹಂಚಿಕೆ ವಿವಾದ ತಲೆದೋರಿತ್ತು. ಪ್ರಥಮ ಪಟ್ಟಿಗೆ ಸಾಕಷ್ಟು ರಿಪೇರಿ ಮಾಡಿ ಪರಿಷ್ಕೃತ ಪಟ್ಟಿಯನ್ನು ದ್ವಿತೀಯ ಪಟ್ಟಿಯ ಜೊತೆಗೆ ಪ್ರಕಟಿಸಿತು. ಈಗ ದ್ವಿತೀಯ ಪಟ್ಟಿಯಲ್ಲಿ ನಿಷ್ಠಾವಂತರಿಗೆ ಸ್ಥಾನ ನೀಡಿಲ್ಲ, ಇದರಲ್ಲಿ ಕಾಣದ ಕೈಗಳು ಮಸಲತ್ತು ಮಾಡಿವೆ ಎಂದು ಆರೋಪಿಸಿ ಬಿಜೆಪಿಯಲ್ಲಿ ಭಿನ್ನಮತ ಉಲ್ಬಣಗೊಂಡಿದೆ.

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ
ಎರಡರ ಜೊತೆ ಮೂರನೆಯದಂತಿರುವ ಬಿಜೆಪಿ ಕುರಿತು...
ಬಿಜೆಪಿ ಕಚೇರಿಗೆ ಬೀಗ ಜಡಿದ ಕಾರ್ಯಕರ್ತರು
ಬಿಜೆಪಿ ಪ್ರಥಮ ಪಟ್ಟಿಯಿಂದ 15 ಮಂದಿಗೆ ಕೊಕ್
ಬಿಜೆಪಿ ಎರಡನೇ ಪಟ್ಟಿಯಲ್ಲಿ ಮಹಿಳೆಯರಿಗೆ ಆದ್ಯತೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X