ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಅತೀ ಕುಳ್ಳಿ ನಾಗ್ಪುರದ ಜ್ಯೋತಿ ಅಮ್ಗೆ

By Staff
|
Google Oneindia Kannada News

(ಚಿತ್ರ: ತನ್ನ ಹೈಸ್ಕೂಲ್ ಸಹಪಾಠಿಗಳೊಂದಿಗೆ ಜ್ಯೋತಿ)

ಮುಂಬೈ.ಏ.09: ಸೃಷ್ಟಿಯ ವೈಚಿತ್ರ್ಯವೇ ವಿಚಿತ್ರ. ವಯಸ್ಸು ಹದಿನೈದಾಗಿದೆ, ಎತ್ತರ ಮಾತ್ರ ಒಂದು ಅಡಿ ಹನ್ನೊಂದು ಅಂಗುಲ. ಅದು ಹೇಗೆ ಎನ್ನುತ್ತಿರಾ?.......ಹೌದು ಇದು ನಿಜ, ನಂಬಲೇಬೇಕು.

ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ ಮಹಾರಾಷ್ಟ್ರದ ನಾಗ್ಪುರದ ಜ್ಯೋತಿ ಅಮ್ಗೆ ಈ ವೈಚಿತ್ರ್ಯಕ್ಕೆ ಕಾರಣಿಕರ್ತಳು. ವಯಸ್ಸು 15 ತುಂಬಿದ್ದರೂ ಒಂದು ವಷದ ಮಗುವಿನಂತೆ ಕಾಣುತ್ತಾಳೆ. ಚಿಕ್ಕ ಮಗುವಿನಂತೆ ಕಾಣುವ ಜ್ಯೋತಿ ಅಕೋಂಡ್ರೋಪ್ಲೇಸಿಯಾ ಎಂಬ ಶಾರೀರಿಕ ನೂನ್ಯತೆಯಿಂದ ಬಳಲುತ್ತಿದ್ದಾಳೆ.

ಜಗತ್ತಿನ ಅತೀ ಕುಳ್ಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಜ್ಯೋತಿ ಹೆಮ್ಮೆಪಡುತ್ತಾಳೆ. ಕುಳ್ಳಗಿರುವುದು ಸಮಸ್ಯಯೇ ಅಲ್ಲ ಎನ್ನುವ ಈಕೆ, ಎಲ್ಲರಂತೆ ಊಟ ಮಾಡುತ್ತೇನೆ. ಎಲ್ಲರಂತೆ ಕನಸು ಕಾಣುತ್ತೇನೆ. ನಾನು ಬೇರೆ ತರಹದವಳು ಎಂದು ನನಗೆ ಯಾವತ್ತೂ ಅನಿಸಿಯೇ ನನ್ನ ಪುಟ್ಟ ಶರೀರವೆಂದರೆ ನನಗೆ ತುಂಬಾ ಇಷ್ಟ. ನನ್ನ ಬಗ್ಗೆ ಎಲ್ಲರೂ ಗಮನಹರಿಸುವುದು ನೋಡಿದರೆ ಬಹಳ ಸಂತೋಷವಾಗುತ್ತದೆ.ಇಲ್ಲ ಎನ್ನುತ್ತಾಳೆ.

(ಚಿತ್ರ: ನೆರೆಮನೆಯ 13 ತಿಂಗಳ ಮಗುವಿನೊಂದಿಗೆ15 ರ ಹರೆಯದ ಜ್ಯೋತಿ)

(ಚಿತ್ರಗಳನ್ನು ಕಳಿಸಿದ್ದು: ಸುನೀಲ್ ಕುಮಾರ್)

ಜ್ಯೋತಿ ಈಗ ಪ್ರೌಢ ಶಾಲೆಯಲ್ಲಿ ಓದುತ್ತಿದ್ದು, ಎಲ್ಲರಷ್ಟೇ ಚುರುಕಾಗಿದ್ದಾಳೆ. ಶಾಲೆಯ ಬ್ಯಾಗ್ ಹೊತ್ತೊಯ್ಯುವುದು ಆಕೆಗೆ ಕಷ್ಟವಾದರೂ, ಪಾಠ ಅರ್ಥ ಮಾಡಿಕೊಳ್ಳುವುದರಲ್ಲಿ ಎಲ್ಲರಗಿಂತ ಮುಂದೆಯೇ ಎನ್ನುವುದು ಆಕೆಯ ಶಿಕ್ಷಕರ ಅಭಿಪ್ರಾಯವಾಗಿದೆ. ಶಾಲೆಯಲ್ಲಿ ಅವಳಿಗೆಂದೇ ಪ್ರತ್ಯೇಕವಾದ ಸಣ್ಣದೊಂದು ಡೆಸ್ಕ್ ನೀಡಲಾಗಿದೆ.

ಹುಟ್ಟುವಾಗ ಸಹಜವಾಗಿದ್ದಳು. ಐದಾರು ವರ್ಷ ಕಳೆದ ಮೇಲೆ ಆಕೆಯ ಬೆಳವಣಿಗೆ ನಿಂತುಹೋಯಿತು.ಜ್ಯೋತಿಗೆ ಸಂಗೀತವೆಂದರೆ ಪ್ರಾಣ. ಪಾಪ್ ಗಾಯಕ ಮಿಕಾ ಜತೆ ಅಲ್ಬಂ ನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾಳೆ ಎಂದು ಜ್ಯೋತಿಯ ತಾಯಿ ರಂಜನಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X