ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ನೆಲ,ಜಲ,ಭಾಷೆಗಾಗಿ ಬೀದಿಗಿಳಿದ ಕಲಾವಿದರು

By Staff
|
Google Oneindia Kannada News

KFI hunger strikeಬೆಂಗಳೂರು, ಏ. 4 : ಹೊಗೇನಕಲ್ ಜಲವಿವಾದದ ಪರ ವಿರೋಧ ಚಳವಳಿಗಳು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶುಕ್ರವಾರ ಮುಂದುವರೆದಿದೆ. ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರು ಇವತ್ತಿನ ಚಳವಳಿಯ ಮಂಚೂಣಿಯಲ್ಲಿ ಮಿಂಚುತ್ತಿದ್ದು ಉಪವಾಸ ಸತ್ಯಾಗ್ರಹಗಳು ಆರಂಭವಾಗಿವೆ.

ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದ ಮುಂದೆ ಕನ್ನಡ ಚಿತ್ರರಂಗದ ಉಪವಾಸ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು. ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ನಟರಾದ ರವಿಚಂದ್ರನ್, ರಾಘವೇಂದ್ರ ರಾಜ್‌ಕುಮಾರ್, ಸುಂದರ್ ರಾಜ್, ಥ್ರಿಲ್ಲರ್ ಮಂಜು ಮತ್ತಿತರ ಹಿರಿ ಕಿರಿ ತೆರೆಯ ಕಲಾವಿದರು ಪುರಭವನದ ಮುಂದೆ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ್ದಾರೆ. ಅತ್ತ ಚೆನ್ನೈ ನಗರಗ ಚಿಪಾಕ್ ಬಳಿ ಇದು ಬೆಳಗ್ಗೆ 8 ಗಂಟೆಗೆ ತಮಿಳು ಚಿತ್ರರಂಗದ ಉಪವಾಸ ಸತ್ಯಾಗ್ರಹ ಆರಂಭವಾಗಿದೆ. ತಮಿಳು ಸಿನಿಮಾ ತೆರೆಯ ಖ್ಯಾತನಾಮರೇನಕರು ಉಪವಾಸ ಚಳವಳಿಗೆ ಆಗಮಿಸಿದ್ದಾರೆ. ಉಪವಾಸ ಸತ್ಯಾಗ್ರಹ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

ಜೆ.ಸಿ ರಸ್ತೆ ಹಾಗೂ ಸಿಟಿ ಮಾರುಕಟ್ಟೆಯಿಂದ ಕಾರ್ಪೋರೇಷನ್ ಕಚೇರಿಯವರೆಗಿನ ಮಾರ್ಗಗಳಲ್ಲಿ ಕನ್ನಡ ಕಾರ್ಯಕರ್ತರು, ಚಲನಚಿತ್ರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ರಾಜ್ ಕುಮಾರ್ ಅವರ ಕಟ್ ಔಟ್ ಮತ್ತು ಕನ್ನಡ ಪರ ಘೋಷಣೆಗಳ ಬ್ಯಾನರುಗಳು ದಾರಿಯುದ್ದಕ್ಕೂ ರಾರಾಜಿಸುತ್ತಿವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಕಾರ್ಪೋರೇಷನ್, ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ಜೆ.ಸಿ.ರಸ್ತೆಗಳಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಕನ್ನಡ ಚಿತ್ರೋದ್ಯಮದ ಉಪವಾಸ ಸತ್ಯಾಗ್ರಹದ ಚಿತ್ರಸಂಪುಟ

(ದಟ್ಸ್‌ಕನ್ನಡ ವಾರ್ತೆ)

ಪೂರಕ ಓದಿಗೆ:
ನೆಲ,ಜಲ,ಭಾಷೆಗಾಗಿ ಸಂರಕ್ಷಣೆಗೆ ಚಿತ್ರರಂಗ ಕಂಕಣ
ಹೊಗೇನಕಲ್ : ಕನ್ನಡದ ಮಕ್ಕಳೆಲ್ಲ ಒಂದಾಗಬನ್ನಿ
ಬಂದ್‌ಗೆ ಕನ್ನಡ ಚಿತ್ರೋದ್ಯಮದ ಪೂರ್ಣಬೆಂ'ಬಲ'
ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ
ತಮಿಳುನಾಡಿನಲ್ಲಿ ಕನ್ನಡ ಚಾನೆಲ್‌ ಪ್ರಸಾರ ಬಂದ್
ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕ ಬಂದ್
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X