• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂದಿರಾಗಾಂಧಿಗಿಂತ ಬುದ್ದಿವಂತೆ, ಬಲೆ ಐನಾತಿ

By Staff
|

This is Jayalalitha for youಚೆನ್ನೈ, ಏ.2 :ಜಯಲಲಿತಾ ಎಂಥ ಕಲಾವಿದೆ, ಎಂಥ ರಾಜಕಾರಣಿ, ಎಂಥ ವ್ಯಕ್ತಿ ಎನ್ನುವುದು ನಮಗೆಲ್ಲ ಗೊತ್ತು. ತಮಿಳರಿಗೂ ಗೊತ್ತು, ಕನ್ನಡಿಗರಿಗೂ ಗೊತ್ತು. ರಾಷ್ಟ್ರೀಯ ಪಕ್ಷಗಳ ಮುಖಂಡರಿಗೂ ಗೊತ್ತು. ಪ್ರಪಂಚದ ನಾನಾ ಭಾಗಗಳಲ್ಲಿ ನೆಲೆಸಿ ಅಲ್ಲಿ ಕುಳಿತು ಇಂಟರ್ ನೆಟ್ ಮೂಲಕ ಸುದ್ದಿಗಳನ್ನು ಓದಿ ಪ್ರತಿಕ್ರಿಯಿಸುವ ಅನಿವಾಸಿ ಕನ್ನಡಿಗರು ಮತ್ತು ಬಿಕನಾಸಿ ತಮಿಳರಿಗೂ ಗೊತ್ತು. ಆಯಮ್ಮ ಇಂದಿರಾಗಾಂಧಿಗಿಂತ ಬುದ್ದಿವಂತೆ, ಚಾಣಾಕ್ಷೆ. ಬಲೆ ಐನಾತಿ.

ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ತಮಿಳುನಾಡು ಸರಕಾರದ ಹೊಗೇನಕಲ್ ಕುಡಿಯುವ ನೀರು ಯೋಜನೆ ನೆನೆಗುದಿಗೆ ಬಿದ್ದಿರುವುದು ಆಕೆಗೆ ಗೊತ್ತಿದೆ. ಎಲ್ಲೋ ಒಂದು ಕಡೆ ತಾಳ ತಪ್ಪಿದರೆ ಉಭಯ ರಾಜ್ಯಗಳಲ್ಲಿ ಬೆಂಕಿ ಹತ್ತಿ ಉರಿಯುತ್ತದೆ ಎನ್ನುವುದು ಜಯಾಗೆ ಚೆನ್ನಾಗಿ ಗೊತ್ತಿದೆ. ತಮಿಳುನಾಡಿನ ಸಿನಿಮಾ ಮಂದಿ ಮತ್ತು ಡಿಎಂಕೆ ಪಕ್ಷದ ಕಾರ್ಯಕರ್ತರು ಯೋಜನೆಯನ್ನು ಬೆಂಬಲಿಸುವುದಲ್ಲದೆ, ಅದನ್ನು ವಿರೋಧಿಸುತ್ತಿರುವ ಕರ್ನಾಟಕ ರಾಜ್ಯವನ್ನು ಸತತ ನಿಂದಿಸುತ್ತಿರುವುದೂ ಆಕೆಗೆ ಗೊತ್ತಿದೆ. ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಹೇಳಿಕೆ ಮೇಲೆ ಹೇಳಿಕೆಗಳು ಇಲ್ಲಿಂದ ಹೊರಬರುತ್ತಲೇ ಇರುವುದು ಆಕೆಗೆ ಗೊತ್ತಿಲ್ಲದೆ ಇನ್ನಾರಿಗೆ ಗೊತ್ತಿದೆ?

ಆದರೆ, ಜಯಲಲಿತಾ ಮಾತ್ರ ಈ ವಿಚಾರದಲ್ಲಿ ಇದುವರೆವಿಗೂ ತುಟಿ ಪಿಟಕ್ ಎಂದಿಲ್ಲ. ಒಂದು ಸ್ಟೇಟ್ಮೆಂಟೂ ಕೊಟ್ಟಿಲ್ಲ ಯಾಕೆ? ತಮಿಳು ಚಿತ್ರಗಳಿಗೆ, ತಮಿಳು ಟಿವಿ ವಾಹಿನಿಗಳಿಗೆ ಅಡ್ಡಿಪಡಿಸುತ್ತಿರುವ ಕನ್ನಡಿಗರನ್ನು ಆಕೆ ಟೀಕಿಸುವ ಗೋಜಿಗೆ ಹೋಗುವುದಿಲ್ಲ. ಯಾಕೆಂದರೆ, ಹಾಗೆ ಮಾಡಿದರೆ ಅದು ಪರೋಕ್ಷವಾಗಿ ಕರುಣಾನಿಧಿ ಮತ್ತು ಡಿಎಂಕೆ ನಿಲುವುಗಳನ್ನು ಬೆಂಬಲಿಸಿದಂತಾಗುತ್ತದೆ. ಎರಡು ರಾಜ್ಯಗಳ ನಡುವಿನ ಇವತ್ತಿನ ಪರಸ್ಪರ ದ್ವೇಷ ಅಸೂಯೆಗಳ ಸಂದರ್ಭದಲ್ಲಿ ಜಯಲಲಿತಾ ಕರುಣಾನಿಧಿಯವರನ್ನೂ ಟೀಕಿಸುವುದಕ್ಕೆ ಮುಂದಾಗುವುದಿಲ್ಲ. ಅದು ಯಾಕೆಂದರೆ, ಹಾಗೆ ಮಾಡಿದರೆ ಅದು ಪರೋಕ್ಷವಾಗಿ ಕರ್ನಾಟಕವನ್ನು ಬೆಂಬಲಿಸಿದಂತಾಗುತ್ತದೆ.

ಆದ್ದರಿಂದಲೇ ಆಕೆ ಇವತ್ತು ಗಪ್ ಚುಪ್. ಆಕೆಯ ತವರು ಕರ್ನಾಟಕ ಎಂದು ಯಾವುದೋ ದಾಖಲೆಗಳು ಹೇಳಿದರೂ ಮನಃಪೂರ್ವಕವಾಗಿ ಆಕೆ ಕನ್ನಡತಿಯೇ ಅಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ. ಕರುಣಾನಿಧಿ ಮತ್ತು ಡಿಎಂಕೆಯ ಅಧಃಪತನವೇ ಆಕೆಯ ಕನಸು ಮತ್ತು ವ್ಯವಹಾರ. ತಮಿಳುನಾಡಿನ ಅನಭಿಷಿಕ್ತ ದೊರೆಯಾಗಿ ಮೆರೆಯಬೇಕೆನ್ನುವುದೇ ಆಕೆಯ ಜೀವಮಾನದ ಮಹತ್ವಾಕಾಂಕ್ಷೆ. ಹೀಗಿರುವಾಗ ಸುಮ್ಮನೆ ಇರುವುದೇ ಜಾಣ್ಮೆ. ಅದೇ ರಾಜಕಾರಣದ ಮೊದಲ ಪಾಠ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more