ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಸಾಚಾರಕ್ಕಿಳಿಯದಂತೆ ಕನ್ನಡ ಚಳವಳಿಗಾರರಿಗೆ ಎಚ್ಚರಿಕೆ

By Staff
|
Google Oneindia Kannada News

ಬೆಂಗಳೂರು, ಏ.02 : ತಮಿಳುನಾಡಿನ ಹೊಗೇನಕಲ್ ಯೋಜನೆಯ ವಿರುದ್ಧ ನಡೆಸುತ್ತಿರುವ ಹೋರಾಟದಲ್ಲಿ ಹಿಂಸಾಚಾರಕ್ಕಿಳಿಯದಂತೆ ರಾಜ್ಯ ಪೊಲೀಸ್ ಮಹಾವಿರ್ದೇಶಕ ಕೆ.ಶ್ರೀನಿವಾಸನ್ ಕನ್ನಡಪರ ಹೋರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಪೊಲೀಸ್ ಧ್ವಜದಿನಾಚರಣೆಯ ಸಂದರ್ಭದಲ್ಲಿ ಮಾತನಾಡುತ್ತಿದ್ದ ಅವರು, ಪ್ರತಿಭಟನೆ ನೆಪದಲ್ಲಿ ಹಿಂಸಾಚಾರಕ್ಕಿಳಿದು ರಾಜ್ಯದಲ್ಲಿ ಶಾಂತಿ ಕದಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯಾದ್ಯಂತ ತಮಿಳುನಾಡು ಸರ್ಕಾರದ ಧೋರಣೆಯ ವಿರುದ್ಧ ಕನ್ನಡ ಚಳವಳಿಗಾರರ ಹೋರಾಟ ಮುಂದುವರೆದಿದ್ದರೂ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ. ಇಂದು ಕೂಡ ಬೆಂಗಳೂರು ಸೇರಿದಂತೆ ಬಿಜಾಪುರ, ದಾವಣಗೆರೆ, ಬೀದರ್‌ಗಳಲ್ಲಿ ಹೊಗೇನಕಲ್ ಯೋಜನೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಕರುಣಾನಿಧಿ ಪ್ರತಿಕ್ರಿತಿಯನ್ನು ಚಳವಳಿಗಾರರು ದಹಿಸಿದ್ದಾರೆ.

ರಾಜ್ಯದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಗಳು ನಡೆಯುತ್ತಿವೆ. ಚುನಾವಣಾ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ಇಂಥ ಸಂದರ್ಭದಲ್ಲಿ ಹಿಂಸಾಚಾರಕ್ಕಿಳಿದು ಸಾರ್ವಜನಿಕರಿಗೆ ತೊಂದರೆ ನೀಡಬಾರದು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರಬಾರದು ಎಂದು ಅವರು ಹೋರಾಟಗಾರರಿಗೆ ಮನವಿ ಮಾಡಿಕೊಂಡರು.

ನಗರದೆಲ್ಲೆಡೆ ತಮಿಳು ಚಲನಚಿತ್ರ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿ ಪ್ರದರ್ಶನಗಳನ್ನು ಕನ್ನಡಪರ ಚಳವಳಿಗಾರರು ನಿಲ್ಲಿಸಿರುವ ಮತ್ತು ತಮಿಳ್ ಸಂಘಂ ಕಚೇರಿಯ ಮೇಲೂ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಸಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಪುತ್ರಿ ಸೆಲ್ವಿ ಅವರ ನಿವಾಸಕ್ಕೆ ಮುಂಜಾಗ್ರತಾ ಕ್ರಮವಾಗಿ ಭದ್ರತೆಯನ್ನು ಒದಗಿಸಲಾಗಿದೆ.

(ಯುಎನ್ಐ)

ಪೂರಕ ಓದಿಗೆ
ಸೂಪರ್ ಸ್ಟಾರ್ ರಜನಿಗೆ ಸಿಇಟಿ ಪರೀಕ್ಷೆ
ತಮಿಳುನಾಡಿನಲ್ಲಿ ಕನ್ನಡ ಚಾನೆಲ್‌ ಪ್ರಸಾರ ಬಂದ್
ಹೊಗೇನಕಲ್ ಯೋಜನೆ ವಿರುದ್ಧ ಕರ್ನಾಟಕ ಬಂದ್
ರಜನಿ ಸಹ ಪ್ರತಿಭಟನೆಯಲ್ಲಿ ಭಾಗವಹಿಸಬೇಕು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X