ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕಲಿ ಛಾಪಾಕಾಗದ ಕೇಸಿನಲ್ಲಿ ತೆಲಗಿಗೆ ಖುಲಾಸೆ

By Staff
|
Google Oneindia Kannada News

ಬೆಂಗಳೂರು, ಮಾ.29: 1998ರಲ್ಲಿ ಕೆ .ಆರ್. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲೆಯಾಗಿದ್ದ ಒಂದು ಪ್ರಕರಣದಲ್ಲಿ ನಕಲಿ ಛಾಪಾಕಾಗದ ರುವಾರಿ ತೆಲಗಿ ಆರೋಪಮುಕ್ತರಾಗಿದ್ದಾರೆ.

ಆದರೆ ಈಗಾಗಲೇ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಸುಮಾರು ಕೇಸ್ ಗಳ ವಿಚಾರಣೆ ನಡೆಯಬೇಕಾಗಿದ್ದು, ಸದ್ಯ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ತೆಲಗಿಯ ಮೇಲೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 9 ಕೇಸ್ ಗಳನ್ನು ದಾಖಲಿಸಲಾಗಿದೆ.ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಒಟ್ಟು 35 ಕ್ಕೂ ಅಧಿಕ ಕೇಸುಗಳ ವಿಚಾರಣೆ ಇನ್ನೂ ಬಾಕಿಯಿದೆ

2004ರನಂತರಸಿಬಿಐ ತಂಡ ನಕಲಿ ಛಾಪಾ ಕಾಗದ ಪ್ರಕರಣಕ್ಕೆ ಮತ್ತೆ ಜೀವ ನೀಡಿದ ನಂತರ, ಕೇಸು ವಿಚಾರಣೆ ಹಂತ ತಲುಪಿತ್ತು.ಇಂದು ಸಿಬಿಐ ನ ವಿಶೇಷ ನ್ಯಾಯಾಲಯ ಸರಿಯಾದ ಸಾಕ್ಷ್ಯಾಧಾರಗಳು ಸಿಗದೇ ಅಬ್ದುಲ್ ಕರೀಂಲಾಲ ತೆಲಗಿ ಸೇರಿದಂತೆ ಪಾಷಾ ಎಂಬುವವರನ್ನು ಸದರಿ ಪ್ರಕರಣದಿಂದ ಖುಲಾಸೆಗೊಳಿಸಿದೆ.


ಮತದಾರರ ಪಟ್ಟಿ ಪ್ರಕಟ ನಿಮ್ಮ ಹೆಸರನ್ನು ಹುಡುಕಿರಿ
ಕ್ಷೇತ್ರ ಪುನರ್ ವಿಗಂಡಣೆ ಆಧಾರದ ಮೇಲೆ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಅಂತಿಮಗೊಳಿಸಿದೆ. ರಾಜ್ಯದಲ್ಲಿ ಒಟ್ಟು 4ಕೋಟಿ ಮತದಾರರಿದ್ದಾರೆ. ಇವರಲ್ಲಿ 1.97 ಕೋಟಿ ಮಹಿಳಾ ಮತದಾರರು, 2.03 ಕೋಟಿಪುರುಷ ಮತದಾರರಿದ್ದಾರೆ.

ಇಂದು ಸಂಜೆ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ. ರಾಜ್ಯದಲ್ಲಿ ಒಟ್ಟು 39,758ಮತಗಟ್ಟೆಗಳಿವೆ. ಬೆಂಗಳೂರು ನಗರಜಿಲ್ಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚಿನ ಮತದಾರರಿದ್ದಾರೆ.

ಹೆಚ್ಚಿನ ವಿವರಗಳಿಗೆ ಹೆಲ್ಪ್ ಲೈನ್ : 42017240

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X