ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದೇ ತಿಂಗಳಲ್ಲಿ ಕುಸಿದ ಫಟಾಫಟ್ ಅಂಡರ್‌ಪಾಸ್

By Staff
|
Google Oneindia Kannada News

BMC Cauvery junction under pass sinksಬೆಂಗಳೂರು, ಮಾ.27: ಬಳ್ಳಾರಿ ರಸ್ತೆ ಕಾವೇರಿ ಜಂಕ್ಷನ್ ಬಳಿ ನಿರ್ಮಿಸಲಾಗಿದ್ದ ಫಟಾಫಟ್ಅಂಡರ್ ಪಾಸ್ ಗುರುವಾರ ಮಧ್ಯಾಹ್ನ 1.30ರ ಸಮಯದಲ್ಲಿ ಕುಸಿದುಬಿದ್ದಿದೆ. ಫಟಾಫಟ್ಅಂಡರ್‌ಪಾಸ್ ಕಾಮಗಾರಿ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರಿಗೆ ಇದ್ದ ಅನುಮಾನಗಳು ನಿಜವಾಗಿವೆ.

ಅಂಡರ್‌ಪಾಸ್ ನಿರ್ಮಾಣದಲ್ಲಿ ಬಳಸಲಾಗಿರುವ ಎಲಿಮೆಂಟ್‌ಗಳ ಜೋಡಣೆಯಲ್ಲಿ ದೋಷ ಕಂಡುಬಂದಿದ್ದು, ಕಳೆದ ರಾತ್ರಿ ಸುರಿದ ಮಳೆಗೆ ನೀರು ಸೋರುತ್ತಿತ್ತು. ಆದರೂ ಪಾಲಿಕೆ ಈ ಕಡೆ ಗಮನಹರಿಸದೇ ಇರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಅಂಡರ್‌ಪಾಸ್ ಕುಸಿದ ಸುದ್ದಿ ತಿಳಿದ ತಕ್ಷಣ ಪಾಲಿಕೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದರು. ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. 72 ಗಂಟೆಗಳ ನಿಗದಿತ ಸಮಯದಲ್ಲಿ ಮುಗಿಯಬೇಕಾಗಿದ್ದ ಕಾಮಗಾರಿ 744 ಗಂಟೆಗಳಾದರೂ ಮುಗಿಯದೆ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಹೆಚ್ಚುವರಿಯಾಗಿ 40 ಲಕ್ಷ ರೂ. ಖರ್ಚು ಮಾಡಲಾಗಿತ್ತು.

ಶುಕ್ರವಾರ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆಯಾಗಲಿದೆ. ಅಧಿಕಾರಿಗಳು ಮುಜುಗರಕ್ಕ್ಕೆ ಸಿಲುಕುವಂತಾಗಿದೆ. ಇದರೊಂದಿಗೆ ಪಾಲಿಕೆಯ ಉಳಿದ ಪಟಾಪಟ್ ಅಂಡರ್‌ಪಾಸ್‌ಗಳ ನಿರ್ಮಾಣ ತೂಗುಯ್ಯಾಲೆಯಲ್ಲಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X