ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿನ್ನಿಸ್ ದಾಖಲೆ ಎತ್ತರಕ್ಕೆ ಜಮ್ಮುವಿನ ಗುಲಾಬಿ ಗಿಡ

By Super
|
Google Oneindia Kannada News

ಜಮ್ಮು ಕಾಶ್ಮೀರ, ಮಾ. 25 : ಮನೆಯಂಗಳದಲ್ಲಿ 21 ಅಡಿ ಎತ್ತರದ ಗುಲಾಬಿ ಗಿಡ! ಹೌದು. ಜಮ್ಮು ಮತ್ತು ಕಾಶ್ಮೀರದ ನಿವಾಸಿ ನರೇಶ್ ಮಹಾಜನ್ ಎಂಬುವವರ ಮನೆಯಲ್ಲಿ ಮೂರೂವರೆ ಆಳೆತ್ತರದ ಗುಲಾಬಿ ಹಬ್ಬಿ ನಿಂತಿದೆ. ನರೇಶ್ ಅವರ ಪ್ರಕಾರ ಇಷ್ಟು ಎತ್ತರದ ಗುಲಾಬಿ ಗಿಡ ಪ್ರಪಂಚದಲ್ಲಿ ಬೇರೆಲ್ಲೂ ಇಲ್ಲ. ಕ್ಯಾಲಿಫೋರ್ನಿಯಾದಲ್ಲಿರುವ ರೋಸ್ ಬುಷ್‌ಗಿಂತ ಎತ್ತರವಾಗಿರುವ ಈ ಗಿಡದ ಮಹಿಮೆಯನ್ನು ಗಿನ್ನಿಸ್ ದಾಖಲೆಗೆ ಭರ್ತಿ ಮಾಡಲು ಅವರು ಮುಂದಾಗಿದ್ದಾರೆ. ಗಿನ್ನಿಸ್ ದಾಖಲೆಗಾಗಿ ಈ ಗಿಡದ ವಿವರಗಳನ್ನು ಅವರು ನೊಂದಾಯಿಸಿದ್ದಾರೆ ಕೂಡ. ಜಮ್ಮು ಕಾಶ್ಮೀರದ ಪುಷ್ಪೋದ್ಯಮ ಇಲಾಖೆಯವರು ನರೇಶ್ ಅವರ ಹೇಳಿಕೆಯನ್ನು ದೃಢೀಕರಿಸಿದ್ದಾರೆ.

(ಪಾಕ್ ಭಯೋತ್ಪಾದಕರ ಹಾವಳಿಗೆ ಈ ಭಾಗದಲ್ಲಿ ಈವರೆಗೆ ಅದೆಷ್ಟು ಗುಲಾಬಿಗಳು ತತ್ತರಿಸಿ, ಕೊನೆಯುಸಿರೆಳದವೋ ಲೆಕ್ಕವಿಟ್ಟರಿಲ್ಲ. ಅಗಲಿದ ಆತ್ಮಗಳು ಈ ಗುಲಾಬಿ ಗಿಡ ಜೀವಂತ ಸ್ಮಾರಕ ಎನ್ನೋಣವೆ ?)

English summary
Naresh Mahajan of India's northern state of Jammu and Kashmir is the proud owner of a 21-feet high rose creeper grown at his residence, which he claims is taller than the rose bush of California, registered in Guinness Book of World Records.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X