ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿಗಿರಿರಂಗನ ಬೆಟ್ಟಕ್ಕೆ ಹಾರಿದ ರಾಹುಲ್ ಗಾಂಧಿ

By Staff
|
Google Oneindia Kannada News

Rahul Gandhi Arrives, takes off to B.R. Hillsಬೆಂಗಳೂರು, ಮಾ. 25: ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಇಂದು ಬೆಳಗ್ಗೆ ಕರ್ನಾಟಕಕ್ಕೆ ಆಗಮಿಸಿದರು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಹುಲ್ ಅವರನ್ನು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅತ್ಯುತ್ಸಾಹದಿಂದ ಬರಮಾಡಿಕೊಂಡರು. ಆನಂತರ, ರಾಹುಲ್ ಗಾಂಧಿ, ರಾಜ್ಯ ಕಾಂಗ್ರೆಸ್ ನ ಉಸ್ತಪವಾರಿ ನೋಡಿಕೊಳ್ಳುತ್ತಿರುವ ಪೃಥ್ವಿರಾಜ್ ಚವ್ಹಾಣ್ ಮತ್ತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೆಲಿಕಾಪ್ಟರ್ ನಲ್ಲಿ ಬಿಳಿಗಿರಿರಂಗನ ಬೆಟ್ಟಕ್ಕೆ ಹಾರಿದರು.

ಒಟ್ಟು ಐದು ದಿವಸಗಳ ಕಾಲ ಏಳು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ರಾಹುಲ್ ಭೇಟಿಕೊಡಲಿರುವ ಸ್ಥಳಗಳ ಹೆಸರುಗಳು ಇಂತಿವೆ. (ಮಂಗಳವಾರ..) ಬಿ. ಆರ್. ಹಿಲ್ಸ್, ಸಂತೇಮಾರಹಳ್ಳಿ, ಕವಲಂದೆ, ನಂಜನಗೂಡು, ಬೇಗೂರು, ಎಚ್. ಡಿ. ಕೋಟೆ, ನಾಗರಹೊಳೆ. (ಬುಧವಾರ..) ಮಂಗಳೂರು, ಹುಬ್ಬಳ್ಳಿ ( ಗುರುವಾರ..)ಧಾರವಾಡ ನಗರ,ಗದಗ, ರೋಣ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ (ಶುಕ್ರವಾರ..)ಕೂಡಲಸಂಗಮ, ಹುನಗುಂದ, ಲಿಂಗಸೂಗೂರು, ರಾಯಚೂರು.

ದಿನಾಂಕ 29ರ ಶನಿವಾರ ಬೆಳಗ್ಗೆ 10. 30 ಗಂಟೆಗೆ ಬೆಂಗಳೂರಿನಲ್ಲಿ ಬೃಹತ್ ಕಾಂಗ್ರೆಸ್ ಮೆರವಣಿಗೆ, ಸಾರ್ವಜನಿಕ ಸಭೆ. ಎಪಿಎಂಸಿ ಮೈದಾನ, ಜಕ್ಕೂರು, ಬಳ್ಳಾರಿ ರಸ್ತೆ. ರಾಹುಲ್ ಗಾಂಧಿ ಅವರು ರಾಜ್ಯದ ಜನತೆಯೊಂದಿಗೆ ಬೆರೆತು, ಅವರ ನೋವು ನಲಿವುಗಳಲ್ಲಿ ಸಹಭಾಗಿಯಾಗಿ, ಅವರ ಕುಂದುಕೊರತೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳಲೋಸುಗ ಈ ಪ್ರವಾಸ ಕೈಗೊಂಡಿದ್ದಾರೆಂದು ರಾಜ್ಯ ಕಾಂಗ್ರೆಸ್ಸಿನ ಮುಖಂಡರು ಹೇಳಿದ್ದಾರೆ. ಆದರೆ, ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಮತಗಿಟ್ಟಿಸಿಕೊಳ್ಳುವ ಉದ್ದೇಶದಿಂದ ರಾಹುಲ್ ಅವರ ರಾಜ್ಯ ಪ್ರವಾಸವನ್ನು ರೂಪಿಸಲಾಗಿದೆ ಎಂದು ಜನ ಹೇಳುತ್ತಾರೆ.

( ದಟ್ಸ್ ಕನ್ನಡ ವಾರ್ತೆ)
ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾರ್ಚ್ 25ಕ್ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X