ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಕೊಂದು ನೇಣು ಹಾಕಿಕೊಂಡ ಇನ್ಫಿ ಉದ್ಯೋಗಿ

By Staff
|
Google Oneindia Kannada News

ಬೆಂಗಳೂರು, ಮಾ.23 : ಅನೈತಿಕ ಸಂಬಂಧವಿರಿಸಿಕೊಂಡ ಆರೋಪದ ಮೇಲೆ ಹೆಂಡತಿಯನ್ನು ಕೊಂದು ಇನ್ಫೋಸಿಸ್ ಉದ್ಯೋಗಿ ಶನಿವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ಫೋಸಿಸ್ ಉದ್ಯೋಗಿಯಾಗಿದ್ದ ದೆಹಲಿ ಮೂಲದ ಅಮಿತ್ ಪೃಥ್ವಿರಾಜ್ ಹೆಂಡತಿ ರಿಂಕು ಸಚ್‌ದೇವ್ ತನ್ನ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧವಿಟ್ಟಕೊಂಡಿದ್ದೇ ಅವಳನ್ನು ಕೊಲ್ಲಲು ಕಾರಣವೆಂದು ಬರೆದಿಟ್ಟು ಕೋರಮಂಗಲ 8ನೇ ಬ್ಲಾಕ್‌ನಲ್ಲಿರುವ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಅಮಿತ್ ಮತ್ತು ಮುಂಬೈ ಮೂಲದ ರಿಂಕು ಕೇವಲ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಅಮಿತ್ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸುತ್ತಿದ್ದರು.

ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕಿನಲ್ಲಿ ಅಕೌಂಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಮಿತ್ ಪತ್ನಿ ರಿಂಕು ಸಚ್‌ದೇವ್ ಮತ್ತೊಂದು ಕೋಣೆಯಲ್ಲಿ ಸಾವನ್ನಪ್ಪಿದ್ದರು. ರಿಂಕು ಅವರ ಸಾವಿನ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ರಿಂಕು ಅವರ ಮಖದ ಮೇಲೆ ಗಾಯದ ಗುರುತುಗಳಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ರಿಂಕುವನ್ನು ಮೊದಲು ಅಮಿತ್ ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದರು. ಹೆಚ್ಚಿನ ವಿಚಾರಣೆ ಮತ್ತು ಅಮಿತ್ ಬರೆದಿಟ್ಟ ಟೆತ್‌ನೋಟ್‌ನಿಂದಾಗಿ ಅವರ ಸಂಶಯ ಈಗ ನಿಜವಾಗಿದೆ.

ಇಬ್ಬರೂ ಸಹಬಾಳ್ವೆ ನಡೆಸುತ್ತಿದ್ದರು ಮತ್ತು ಜಗಳ ನಡೆದ ಘಟನೆ ಹಿಂದೆಯೂ ನಡೆದಿರಲಿಲ್ಲ ಎಂದು ಸುತ್ತಲಿನ ಮನೆಯವರು ತಿಳಿಸಿದ್ದಾರೆ. ಇಬ್ಬರೂ ಉನ್ನತ ಹುದ್ದೆಯಲ್ಲಿದ್ದರಿಂದ ಹದತಪ್ಪಿದ ಜೀವನಶೈಲಿ ಜೀವನ ಅಂತ್ಯ ಹಾಡಲು ಕಾರಣವಾಗಿರಲೂಬಹುದು ಎಂದು ಹೇಳಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X