• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾರ್ಚ್ 25ಕ್ಕೆ

By Staff
|

' Discover India Compaign' to enter Karnataka on Mar 25ಬೆಂಗಳೂರು, ಮಾ.19: ಡಿಸ್ಕವರ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಾರ್ಚ್ 25 ರಿಂದ ಐದು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಕೃಷ್ಣಭೈರೇಗೌಡ ಹೇಳಿದ್ದಾರೆ.

ಹೋಳಿ ಹಬ್ಬ, ಗುಡ್ ಫ್ರೈಡೆ ಹಾಗೂ ಈದ್ ಮಿಲಾದ್ ರಜಾ ಪ್ರಯುಕ್ತ ಮಾ. 23 ರಂದು ನಿಗದಿಯಾಗಿದ್ದ ರಾಹುಲ್ ಅವರ ಪ್ರವಾಸ ಕಾರ್ಯಕ್ರಮವನ್ನು ಮುಂದೂಡಲಾಗಿದೆ.ಮೊದಲು ಚಾಮರಾಜನಗರದಿಂದ ಪ್ರವಾಸ ಆರಂಭಗೊಳ್ಳಲಿದೆ.ಅಲ್ಲಿಂದ ರಾಯಚೂರಿಗೆ ತೆರಳಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿಗೆ ಭೇಟಿ ಕೊಡುವರು.ಕಡೆಗೆ ನಗರದಲ್ಲಿ ನಡೆಯುವ ಯುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.

ಬಳ್ಳಾರಿ ಪ್ರವಾಸ ಕಾರ್ಯವನ್ನು ಕೈಬಿಟ್ಟು ಕರಾವಳಿ ಕಡೆಗೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಇದು ರಾಜಕೀಯ ಉದ್ದೇಶಿತ ಪ್ರವಾಸವಲ್ಲ.ಜನಸಾಮಾನ್ಯರ ಸಮಸ್ಯೆ ಅರಿಯಲು ಸಂವಾದ ನಡೆಸುವ ಉದ್ದೇಶದಿಂದ ಕೈಗೊಂಡ ಯಾತ್ರೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಹಿರಿಯ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್, ಸಂಸದ ಸಚಿನ್ ಪೈಲೆಟ್ ಹಾಗೂ ಕೆಲ ಯುವ ಕಾಂಗ್ರೆಸ್ ಮುಖಂಡರು ರಾಹುಲ್ ಪ್ರವಾಸ ಕಾರ್ಯಕ್ರಮವನ್ನು ರೂಪಿಸಿದ್ದಾರೆ.

(ಏಜೆನ್ಸೀಸ್)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more