ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಸಾಲು :ಮೂರು ದಿವಸ ಬ್ಯಾಂಕ್, ಕೋರ್ಟ್ ರಜಾ

By Staff
|
Google Oneindia Kannada News

Happy colorful weekendಬೆಂಗಳೂರು, ಮಾ. 20 : 2008 ಮಾರ್ಚ್ 21ರ ಶುಕ್ರವಾರ ಭಾರತದಲ್ಲಿ ಒಂದು ಅಪರೂಪದ ದಿನ. ಹಿಂದೂ ಕ್ರೈಸ್ತ ಮುಸಲ್ಮಾನ ಧರ್ಮಾನುಯಾಯಿಗಳಿಗೆ ಧಾರ್ಮಿಕ ದಿನಾಚರಣೆಯ ದಿನ. ಹಿಂದೂಗಳಿಗೆ ಹೋಳಿ (ಕಾಮನ ಹಬ್ಬ), ಇಂಸ್ಲಾಮೀಯರಿಗೆ ಈದ್ ಮಿಲಾದ್ ಮತ್ತು ಕ್ರೈಸ್ತ ಬಾಂಧವರಿಗೆ ಶುಭ ಶುಕ್ರವಾರ. ಈ ಕಾರಣಗಳಿಂದಾಗಿ ಶುಕ್ರವಾರದಿಂದ ಭಾನುವಾರದವರೆಗೆ ರಾಜ್ಯ ಸರಕಾರ, ಕೇಂದ್ರ ಸರಕಾರದ ಕಚೇರಿಗಳಿಗೆ ಮೂರು ದಿವಸ ರಜಾ.

ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ ಪ್ರಕಾರ ಶುಕ್ರವಾರ ಮತ್ತು ಶನಿವಾರ , ಎರಡೂ ದಿವಸ ಮತ್ತು ಎಂದಿನಂತೆ ಭಾನುವಾರ ರಾಷ್ಟ್ರೀಕೃತ ಬ್ಯಾಂಕುಗಳಿಗೆ ರಜಾ ಘೋಷಿಸಲಾಗಿದೆ. ಖಾಸಗಿ ಬ್ಯಾಂಕ್ ಗಳು ಶುಕ್ರವಾರ ರಜೆ ಘೋಷಿಸಿವೆ, ಆದರೆ ಶನಿವಾರ ತೆರೆದಿರುತ್ತದೆ. ಕರ್ನಾಟಕದ ನ್ಯಾಯಾಲಯಗಳಿಗೂ ದೀರ್ಘ ವಾರಾಂತ್ಯದ ರಜಾ ಅನ್ವಯವಾಗುತ್ತದೆ. ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಮಾರ್ಚ್ 17ರಿಂದ 22 ರವರೆಗೆ ರಜಾ ಇರುವುದು.

ಕರ್ನಾಟಕ ಎರಡನೆ ಪದವಿ ಪೂರ್ವ ಪರೀಕ್ಷೆಗಳು ಈಗ ನಡೆಯುತ್ತಿವೆ. ಪರೀಕ್ಷೆಯ ವೇಳಾಪಟ್ಟಿ ಪ್ರಕಾರ ಶುಕ್ರವಾರ ಪರೀಕ್ಷೆಗಳು ಇರುವುದಿಲ್ಲ. ಐಟಿ ಕಂಪನಿಗಳಲ್ಲಿ ಕೆಲವಕ್ಕೆ ರಜಾ, ಕೆಲವಕ್ಕಿಲ್ಲ. ಸಾಮಾನ್ಯವಾಗಿ ವರ್ಷಕ್ಕೆ ಒಟ್ಟು 12 ದಿವಸ ರಜಾಗಳಿರುತ್ತವೆ. ಅವರವರ ಅನುಕೂಲ ಮತ್ತು ಸಂತೋಷಕ್ಕೆ ತಕ್ಕಂತೆ ಕಂಪನಿಗಳು ತಮ್ಮತಮ್ಮ ರಜಾ ದಿನಗಳನ್ನು ವಿಂಗಡಿಸಿಕೊಳ್ಳುತ್ತವೆ. ಬೆಂಗಳೂರು ಒರಾಕಲ್ ಗೆ ಶುಕ್ರವಾರ ರಜಾ ಇಲ್ಲ, ಇಂಟೆಲ್ ಗೆ ಗುಡ್ ಪ್ರೈಡೆ ನಿಮಿತ್ತ ರಜೆ. ಸಿಸ್ಕೊಗೆ ಕಾಮನಹಬ್ಬಕ್ಕಾಗಿ ರಜೆ, ಮೈನ್ಡ್ ಟ್ರೀಗೆ ಶುಕ್ರವಾರ ದುಡಿಮೆಯ ದಿವಸ, ವಿಪ್ರೊಗೆ ಗುಡ್ ಪ್ರೈಡೆ ಮತ್ತು ಈದ್ ಮಿಲಾದ್ ನಿಮಿತ್ತ ಜಂಟಿ ರಜೆ, ಎಚ್ ಪಿಗೂ ರಜೆ, ಇಂಡಿಯಾ 3i-ಇನ್ ಫೊಟೆಕ್ ರಜಾಇಲ್ಲ, ಎಚ್ ಸಿ ಎಲ್ ಗೆ ಆರ್ ಎಚ್ (restricted Holiday ಬೇಕಿದ್ದವರು ರಜಾ ತೊಗೋಬಹುದು). ಕ್ಲೂಬರ್ ಮತ್ತು ಬೆಕೆಮ್ ಕಂಪನಿಗಳಿಗೆ ಆಫೀಸಿನಲ್ಲೇ ಹೋಳಿ ಹಬ್ಬ.

ಎಮ್‌ಫಾಸಿಸ್, ಇನ್ಫೋಸಿಸ್ ಮತ್ತು ಒನ್‌ಇಂಡಿಯಾ ಕೂಡ ಹೋಳಿ, ಈದ್ ಮಿಲಾದ್ , ಗುಡ್ ಫ್ರೈಡೆ ನಿಮಿತ್ತ ರಜಾ ಘೋಷಿಸಿವೆ. (ದಟ್ಸ್‌ಕನ್ನಡಕ್ಕೆ ಇಲ್ಲ!) ಹೇಗೂ ಇರಲಿ. ದಟ್ಸ್ ಕನ್ನಡವು ತನ್ನೆಲ್ಲ ಓದುಗರಿಗೆ ದೀರ್ಘ ಮತ್ತು ಚುಟುಕು ವಾರಾಂತ್ಯದ ರಜಾದಿನಗಳ ಶುಭಾಶಯಗಳನ್ನು ಕೋರುತ್ತದೆ.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X