ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ಪ್ರಶ್ನೆಪತ್ರಿಕೆ ಬಯಲಾಗಿದ್ದರೆ ಈ ಸಂಖ್ಯೆಗೆ ಕರೆ ಮಾಡಿ

By Staff
|
Google Oneindia Kannada News

ಬೆಂಗಳೂರು, ಮಾ.20: ಬುಧವಾರ ನಡೆದ ದ್ವಿತೀಯ ಪಿಯುಸಿಯ ನಾನಾ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಮಾಡುತ್ತಿದ್ದ42 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ. ಡಿಬಾರ್ ಆದ ವಿದ್ಯಾರ್ಥಿಗಳಲ್ಲಿ ಬೀದರ್ ಮತ್ತುಬಾಗಲಕೋಟೆ ಜಿಲ್ಲೆಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನದಲ್ಲಿವೆ.

ಬುಧವಾರ(ಮಾ.19)ರಂದು ನಡೆದ ದ್ವಿತೀಯ ಪಿಯುಸಿ ಭೌತಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ವಿಷಯಗಳ ಪರೀಕ್ಷೆಗಳಲ್ಲಿ ಡಿಬಾರ್ ಆದ ಜಿಲ್ಲಾವಾರು ವಿದ್ಯಾರ್ಥಿಗಳ ವಿವರ ಹೀಗಿದೆ.ಬೀದರ್-13, ಬಾಗಲಕೋಟೆ-06, ರಾಯಚೂರು-05, ಬಳ್ಳಾರಿ-02, ಬೆಳಗಾವಿ-02, ಗದಗ-01, ಕೋಲಾರ-01, ಬೆಂಗಳೂರು ಗ್ರಾಮಾಂತರ-01, ಬೆಂಗಳೂರು ದಕ್ಷಿಣ-02, ಚಿಕ್ಕಬಳ್ಳಾಪುರ-01, ಕೊಪ್ಪಳ-01, ಶಿವಮೊಗ್ಗ-01, ತುಮಕೂರು-02, ವಿಜಾಪುರ-04.

ಭೌತಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳು ಬಯಲಾಗಿವೆ ಎಂಬುದು ಕೇವಲ ವದಂತಿ. ಈ ರೀತಿಯ ವದಂತಿಗಳನ್ನು ವಿದ್ಯಾರ್ಥಿಗಳು, ಪೋಷಕರು ನಂಬಬೇಡಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಮನವಿ ಮಾಡಿದೆ. ಪ್ರಶ್ನೆಪತ್ರಿಕೆಗಳ ಸುರಕ್ಷತೆಗೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಅವು ಬಯಲಾಗುವ ಸಾಧ್ಯತೆಯೇ ಇಲ್ಲ ಎಂದು ಪಿಯು ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್.ಜಿ.ಹೆಗಡೆ ತಿಳಿಸಿದರು.

ಪ್ರಶ್ನೆಪತ್ರಿಕೆ ಬಯಲಾಗಿದೆ ಎಂಬ ವದಂತಿ ಹಬ್ಬಿಸುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಶ್ನೆಪತ್ರಿಕೆ ಬಯಲಾದ ಮಾಹಿತಿ ದೊರೆತಲ್ಲಿ ತಕ್ಷಣ ಪಿಯು ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

ದೂರವಾಣಿ ಸಂಖ್ಯೆಗಳು:
ಎಲ್.ಎಂ.ಕಾನಡೆ, ಜಂಟಿ ಆಯುಕ್ತ-98867 79636
ಟಿ.ಎಸ್.ತುಳಸೀಕುಮಾರ್, ಸಹಾಯಕ ನಿರ್ದೇಶಕರು-94496 46888
ಕಚೇರಿ ದೂರವಾಣಿ ಸಂಖ್ಯೆಗಳು-080-2356 2033 ಅಥವಾ 2356 1944 ಅಥವಾ 2336 1857 ಅಥವಾ 2336 1858

(ದಟ್ಸ್‌ಕನ್ನಡ ವಾರ್ತೆ)

ಪೂರಕ ಮಾಹಿತಿಗಾಗಿ:
ದ್ವಿತೀಯ ಪಿಯುಸಿ ವೇಳಾಪಟ್ಟಿ
ಈ ಬಾರಿ ಪರೀಕ್ಷೆಯ ವಿಶೇಷಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X