• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮರೋಪಾದಿಯಲ್ಲಿ ಚುನಾವಣೆಗೆ ಆಯೋಗದ ಸಿದ್ಧತೆ

By Staff
|

ಬೆಂಗಳೂರು, ಮಾ.20 : ರಾಜ್ಯ ವಿಧಾನಸಭೆಗೆ ಚುನಾವಣೆ ಮೇ ಕೊನೆ ವಾರದಲ್ಲಿ ನಿಗದಿಯಾಗಿರುವ ಸುದ್ದಿ ಹೊರಬಿದ್ದಿರುವ ಬೆನ್ನಹಿಂದೆಯೇ ವಿವಿಧ ಜಿಲ್ಲೆಗಳಲ್ಲಿ ಕ್ಷೇತ್ರ ಪುನರ್‌ವಿಂಗಡನಾ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ನಗರದಲ್ಲಿ ಬೀಡುಬಿಟ್ಟಿರುವ ಕೇಂದ್ರ ಉಪ ಚುನಾವಣಾಯುಕ್ತ ಭಟ್ಟಾಚಾರ್ಯ ಅವರು ಚುನಾವಣಾ ತಯಾರಿಗೆ ಸಂಬಂಧಿಸಿದ ಕಾರ್ಯದ ಪರಿಶೀಲನೆ ನಡೆಸಿದರು. ಎರಡು ದಿನಗಳ ಭೇಟಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಕರೆಸಿ ದೀರ್ಘ ಮಾತುಕತೆ ನಡೆಸಿದರು.

ಗುರುವಾರ ಅವರು ಬೆಳಗಾವಿ ಮತ್ತು ಗುಲಬರ್ಗಾ ವಿಭಾಗದ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಧಾನಸಭಾ ಕ್ಷೇತ್ರಗಳ ಪುನರ್‌ವಿಂಗಡನೆ ಮತ್ತು ಮತದಾರರ ಅಂತಿಮ ಪಟ್ಟಿಯ ಪರೀಕ್ಷಣ ನಡೆಸಿದರು. ಬುಧವಾರ ಅವರು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅಂತಿಮಗೊಳಿಸಿದ್ದಾರೆ.

ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಬೇಕಾಗಿರುವ ಮತಗಟ್ಟೆಗಳು, ಸುಸೂತ್ರವಾಗಿ ಮತದಾನ ನಡೆಸಲು ಅಗತ್ಯವಿರುವ ಪೊಲೀಸ್ ಸಿಬ್ಬಂದಿ, ಮತಪೆಟ್ಟಿಗೆಗಳನ್ನು ಸುರಕ್ಷಿತವಾಗಿ ಸಾಗಿಸಲು ಬೇಕಾದ ಅಗತ್ಯ ವ್ಯವಸ್ಥೆಗಳ ಬಗ್ಗೆ ಪೊಲೀಸ್ ಇಲಾಖಾ ಗುಪ್ತವಿಭಾಗದ ಜೊತೆ ವಿಸ್ತೃತವಾಗಿ ಮಾತುಕತೆ ನಡೆಸಿದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾಧಿಕಾರಿಗೆ ಭಟ್ಟಾಚಾರ್ಯ ಅವರು ವರದಿ ಸಲ್ಲಿಸಲಿದ್ದಾರೆ. ಈ ವರದಿ ಸಲ್ಲಿಕೆಯ ನಂತರ ಇನ್ನೆರಡು ದಿನಗಳಲ್ಲಿ ಚುನಾವಣಾ ದಿನಾಂಕ ಹೊರಬೀಳುವ ಸಾಧ್ಯತೆಯಿದೆ. ಇದರೊಂದಿಗೆ ಎಲ್ಲ 224 ಕ್ಷೇತ್ರಗಳಲ್ಲಿ ಯಾವ ಮತದಾರ ಪುನರ್‌ವಿಂಗಡನೆಗೊಂಡ ಯಾವ ಕ್ಷೇತ್ರದ ಪಟ್ಟಿಯಲ್ಲಿ ಬರಲಿದ್ದಾನೆ ಎಂಬ ವಿವರ ದೊರೆಯಲಿದೆ.

ಮೇ 28ರಂದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಕೊನೆಗೊಳ್ಳುತ್ತಿರುವುದರಿಂದ ಸಂವಿಧಾನದ ಪ್ರಕಾರ ಮೇ ತಿಂಗಳೊಳಗೆ ಚುನಾವಣೆ ನಡೆಸುವ ತುರ್ತು ಕೇಂದ್ರ ಚುನಾವಣಾ ಆಯೋಗಕ್ಕಿತ್ತು. ಇದರಿಂದಾಗಿ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಚುನಾವಣಾ ಆಯೋಗ ದಾಖಲೆಯ ಎರಡು ವಾರಗಳಲ್ಲಿ ಕ್ಷೇತ್ರ ಪುನರ್‌ವಿಂಗಡನೆ ಮತ್ತು ಪರಿಷ್ಕೃತ ಮತದಾರರ ಪಟ್ಟಿಯನ್ನು ತಯಾರಿಸಿದೆ. ಕೇಂದ್ರ ಕ್ಷೇತ್ರ ಪುನರ್‌ವಿಂಗಡನಾ ಆಯೋಗದ ಶಿಫಾರಸಿನಂತೆ ಕ್ಷೇತ್ರ ಮರುವಿಂಗಡನೆ ಕಾರ್ಯವನ್ನು ರಾಜ್ಯ ಆಯೋಗ ಕೈಗೆತ್ತಿಕೊಂಡಿತ್ತು.

ಗಡಿಬಿಡಿಯಿಂದ ಮತದಾರರ ಪಟ್ಟಿ ತಯಾರಿಸಿರುವುದರಿಂದ ಸುಮಾರು 58 ಲಕ್ಷಕ್ಕೂ ಹೆಚ್ಚಿನ ನಕಲಿ ಮತದಾರರು ಮಟ್ಟಿಯಲ್ಲಿ ಸೇರಿರಬಹುದೆಂದು ಮತ್ತು ಅಸಲಿ ಮತದಾರರು ಪಟ್ಟಿಯಿಂದ ಹೊರಬಿದ್ದಿರಬಹುದೆಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ಮೇ ತಿಂಗಳಿನಲ್ಲಿಯೇ ಚುನಾವಣೆ ನಡೆಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಆಯೋಗಕ್ಕೆ ದುಂಬಾಲು ಬಿದ್ದಿದ್ದವು.

ಮತಪಟ್ಟಿಯ ಪರಿಷ್ಕರಣೆಯ ನಂತರ ಅಂತಿಮವಾಗಿ ರಾಜ್ಯದಲ್ಲಿ 3.98 ಕೋಟಿ ಜನರಿಗೆ ಮತಹಾಕುವ ಅರ್ಹತೆ ಪಡೆದಿದ್ದಾರೆ. ಒಟ್ಟು 52 ಲಕ್ಷ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಮತ್ತು 20 ಲಕ್ಷದಷ್ಟು ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ಮೇ ಅಂತ್ಯದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಖಚಿತ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more