ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಂಗಳೂರು ವಿ. ನಿಲ್ದಾಣ ವರ್ಷಾಂತ್ಯಕ್ಕೆ ಪೂರ್ಣ
ಮಂಗಳೂರು, ಮಾ.18: ಬಜ್ಪೆ ಸಮೀಪದ ಕೆಂಜಾರಿ ನಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣ ಡಿಸೆಂಬರ್ ಅಂತ್ಯದೊಳಗೆ ಜನರ ಸೇವೆಗೆ ಮುಕ್ತವಾಗಲಿದೆ.
ಬಜ್ಪೆ ವಿಮಾನ ನಿಲ್ದಾಣವನ್ನು 70 ಎಕರೆ ಪ್ರದೇಶದಲ್ಲಿ 750ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಂಜಾರಿನಲ್ಲಿ 147 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣ ಸಿದ್ಧಗೊಳ್ಳುತ್ತಿದೆ. 86 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಕಟ್ಟಡದ ಕಾಮಗಾರಿ ನಡೆಯುತ್ತಿದೆ. 55 ಕೋಟಿ ರೂ. ವೆಚ್ಚ ದಲ್ಲಿ ನೂತನ ರನ್ ವೇ ಪೂರ್ಣಗೊಂಡಿದೆ.
ಅರೈವಲ್ ಸಭಾಂಗಣಕ್ಕೆ 3.85 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 3.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ನೂತನ ಟ್ಯಾಕ್ಸಿ ವೇ ಸೇವೆ ಆರಂಭ ಗೊಂಡಿದೆ. ಸಂಪೂರ್ಣ ಕಾಮಗಾರಿ ಮುಗಿ ದರೆ ಒಟ್ಟು ಒಂಬತ್ತು ವಿಮಾನ ಮತ್ತು ಒಂದು ಹೆಲಿಕಾಪ್ಟರ್ ಪಾರ್ಕ್ ಮಾಡುವ ಸೌಲಭ್ಯ ದೊರೆಯಲಿದೆ ಎಂದು ವಿಮಾನ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡವಾರ್ತೆ)
Comments
Story first published: Tuesday, March 18, 2008, 11:40 [IST]