ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷ್ಕೃತ 'ನಿಕಾಹ್‌ನಾಮ' ಏನು ಹೇಳುತ್ತದೆ?

By Staff
|
Google Oneindia Kannada News

Shaista Amberಲಕ್ನೊ, ಮಾ.17: ಮುಸ್ಲಿಂ ಪುರುಷರು ಇನ್ನ್ನು ಮುಂದೆ ಮುನಿಸಿಕೊಂಡು, ಮದ್ಯಪಾನದ ಮತ್ತಿನಲ್ಲಿ, ಅರೆ ನಿದ್ರಾವಸ್ಥೆಯಲ್ಲಿ ಅಥವಾ ದೂರವಾಣಿ, ಎಸ್‌ಎಂಎಸ್, ಇಂಟರ್ನೆಟ್ ಮೂಲಕ 'ತಲಾಕ್, ತಲಾಕ್, ತಲಾಕ್" ಎನ್ನುವಂತಿಲ್ಲ. ಅಖಿಲ ಭಾರತ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿ ಸಿದ್ಧಪಡಿಸಿರುವ ಪರಿಷ್ಕೃತ 'ನಿಕಾಹ್‌ನಾಮ'(ವಿವಾಹ ವಿಚ್ಛೇದನೆ ಘೋಷಣೆ) ಹೀಗೆನ್ನುತ್ತದೆ.

ಎರಡು ವರ್ಷಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಅಖಿಲ ಭಾರತೀಯ ಮುಸ್ಲಿಂ ಮಹಿಳೆಯರ ವೈಯಕ್ತಿಕ ಕಾನೂನು ಮಂಡಳಿಯ ನಿಕಾಹ್‌ನಾಮದ ಪರಿಷ್ಕೃತ ರೂಪವನ್ನು ಭಾನುವಾರ ಪ್ರಕಟಿಸಿದೆ. ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಲಾಗಿದೆ. ಪವಿತ್ರ ಕುರಾನ್ ಹಾಗೂ ಶರಿಯತ್ ಕಾನೂನಿನ ಆಧಾರದಲ್ಲಿ ಮೂವತ್ತು ಮಂದಿಯ ಸಮಿತಿ ಹಳೆ ಕಾನೂನಿಗೆ ಹೊಸ ವ್ಯಾಖ್ಯಾನ ಬರೆದಿದೆ ಎಂದು ಮಡಳಿ ಅಧ್ಯಕ್ಷೆ ಶೈಸ್ತಾ ಅಂಬರ್ ಭಾನುವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಪ್ರಸ್ತುತ ಅನುಸರಿಸುತ್ತಿರುವ ನಿಕಾಹ್‌ನಾಮ ಪುರುಷ ಪ್ರಧಾನವಾಗಿದೆ. ಅದು ಉರ್ದು ಲಿಪಿಯಲ್ಲಿದೆ. ಇದು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲ. ಆದರೆ ಪರಿಷ್ಕೃತ ಕಾನೂನನ್ನು ಹಿಂದಿ ಭಾಷೆಯಲ್ಲಿ ಸರಳವಾಗಿ ರಚಿಸಲಾಗಿದೆ. ಇದರಲ್ಲಿ ಪತಿ-ಪತ್ನಿಯರ ಪಾತ್ರ ಏನು ಎಂಬುದನ್ನು ಸುಲಭವಾಗಿ ಅರ್ಥೈಸಬಹುದು. ಮದುವೆಯ ದಾಖಲಾತಿಯ ಉದ್ದೇಶ, ಶಾಸ್ತ್ರೋಕ್ತವಾಗಿ ವಿವಾಹ ಕರ್ಮ ನೆರವೇರಿಸುವ ಖಾಜಿಗಳು ಮತ್ತು ವಧು, ವರರ ಜವಾಬ್ದಾರಿಗಳ ಬಗ್ಗೆ ವಿವರಗಳಿವೆ ಎನ್ನುತ್ತಾರೆ ಅಂಬರ್.

ಒಂದು ವರ್ಷಕ್ಕಿಂತಲೂ ಅಧಿಕ ಸಮಯ ತನ್ನ ಪತಿಯ ದೈಹಿಕ ಸಂಬಂಧ ಸರಿ ಇಲ್ಲದಿದ್ದ ಪಕ್ಷ, ಏಡ್ಸ್ ರೋಗಕ್ಕೆ ತುತ್ತಾದರೆ, ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರೆ, ಚಿತ್ರಹಿಂಸೆ ಕೊಡುತ್ತಿದ್ದರೆ ತನ್ನ ಪತಿಗೆ ತಲಾಖ್ ನೀಡುವ ಅಧಿಕಾರ ಮುಸ್ಲಿಂ ಮಹಿಳೆಯರಿಗಿದೆ ಎಂದು ಅಂಬರ್ ಹೊಸ ನಿಕಾಹ್‌ನಾಮದ ಬಗ್ಗೆ ವಿವರ ನೀಡಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X