ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೇ ಇಲಾಖೆಯ 'ರೈಲ್ ಟೆಲ್' ಇಂಟರ್ ನೆಟ್ ಸೇವೆ

By Staff
|
Google Oneindia Kannada News

ಬೆಂಗಳೂರು, ಮಾ. 17 : ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕದ ಕೆಲವೆಡೆ ಪ್ರಾಯೋಗಿಕವಾಗಿ ಬ್ರಾಡ್ ಬ್ಯಾಂಡ್ ಸೇವೆ ನೀಡಲು ಉದ್ದೇಶಿಸಿದೆ.

ರಾಜ್ಯದ ಬಳ್ಳಾರಿ , ತುಮಕೂರು ಹಾಗೂ ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಅತಿ ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಸೇವೆ ನೀಡಲು ರೈಲ್ವೆ ಇಲಾಖೆಯ ರೈಲ್ ಟೆಲ್ ಮುಂದಾಗಿದೆ. ಇದಲ್ಲದೆಎಲ್ಲೆಡೆಯಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಲಿ ಎಂಬ ಉದ್ದೇಶದಿಂದ ಕೇವಲ 3 ರಿಂದ 5 ಸಾವಿರ ರೂಪಾಯಿ ಬೆಲೆಯಲ್ಲಿ ಚಿಕ್ಕದಾದ ಕಂಪ್ಯೂಟರ್ ನೀಡುವ ಯೋಜನೆ ಕೂಡ ಹಾಕಿಕೊಂಡಿದೆ.

ಸ್ಥಳೀಯ ಕೇಬಲ್ ದಾರರೊಡನೆ ಈ ಬಗ್ಗೆ ಮಾತುಕತೆ ನಡೆಸಲಾಗಿದ್ದು, ಮಾಸಿಕ 200 ರು ಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಸೇವೆಯನ್ನು ಹೊಂದಬಹುದಾಗಿದೆ. ರೈಲ್ ಟೆಲ್ ವೆಬ್ ಸೈಟ್ ರೂಪಿಸಿ ಅದರಲ್ಲಿ ಇದರಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು. ಇನ್ನು ಎರಡು ತಿಂಗಳಲ್ಲಿ ಈ ಯೋಜನೆ ಕಾರ್ಯಗತವಾಗುವ ಸಾಧ್ಯತೆಯಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X