ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿಓ ಮಹಿಳಾ ಕಾರ್ಮಿಕರಿಗೆ ನಾಸ್ಕಾಂ ಶ್ರೀರಕ್ಷೆ

By Staff
|
Google Oneindia Kannada News

Self defence training to women BPO employeesನವದೆಹಲಿ, ಮಾ.14 : ವಿದೇಶಿ ಗ್ರಾಹಕರಿಗೆ ಅನುಕೂಲವಾಗುವಂತೆ ರಾತ್ರಿಪಾಳಿಗಳಲ್ಲಿ ಕೆಲಸ ನಿರ್ವಹಿಸುವ ಬಿಪಿಓ ಮಹಿಳಾ ಉದ್ಯೋಗಿಗಳಿಗೆ ಒಂದು ಸಂತಸದ ಸುದ್ದಿ. ಒಂಟಿಯಾಗಿ ರಾತ್ರಿಪಾಳಿ ಮುಗಿಸಿ ಮನೆಗೆ ಹೋಗುವಾಗ ಇನ್ನು ಮುಂದೆ ಅತ್ಯಾಚಾರಿ ಚಾಲಕರಿಂದ ಆತಂಕ ಎದುರಿಸುವ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಹಿಳಾ ಉದ್ಯೋಗಿಗಳಿಗೆ ಸ್ವರಕ್ಷಣಾ ತಂತ್ರಗಳನ್ನು ಕಲಿಸಲು ನಾಸ್ಕಾಂ ಮುಂದಾಗಿದೆ.

ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕನಿಂದ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಯಾದ ಎಚ್‌ಪಿ ಉದ್ಯೋಗಿ ಪ್ರತಿಭಾ ಪ್ರಕರಣ ಮಹಿಳಾ ಉದ್ಯೋಗಿಗಳನ್ನು ಇನ್ನೂ ಕಾಡುತ್ತಿದೆ. ಕಳೆದ ನವೆಂಬರ್‌ನಲ್ಲಿ ಪುಣೆಯ 22ರ ಹರೆಯದ ವಿಪ್ರೋ ಉದ್ಯೋಗಿ ಜ್ಯೋತಿ ಚೌಧರಿ ಕೂಡ ಕ್ಯಾಬ್ ಡ್ರೈವರ್‌ನಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದಳು. ತೀವ್ರ ಕಂಗೆಡಿಸಿರುವ ಈ ಪ್ರಕರಣಗಳು ನಾಸ್ಕಾನನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿವೆ. ನಾಸ್ಕಾಂ ಮಹಿಳಾ ಉದ್ಯೋಗಿಗಳ ರಕ್ಷಣೆಗಾಗಿ ಪ್ರಾಂತೀಯ ಸಮಿತಿಗಳನ್ನು ರಚಿಸಲು ನಿರ್ಧರಿಸಿದೆ.

ಬಿಪಿಓ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪುಣೆ ನಗರದಲ್ಲಿ ರಾಷ್ಟ್ರದ ಎಲ್ಲಾ ಬಿಪಿಓ ಕಂಪನಿಗಳಿಗೆ ನಡವಳಿಕೆ ನಿಯಮಾವಳಿಗಳನ್ನು ತಿಳಿಸಲು ಸಮಿತಿ ರಚಿಸಲಾಗುವುದು. ನಂತರ, ಮಹಿಳಾ ಉದ್ಯೋಗಿಗಳಿಗೆ ಸ್ವರಕ್ಷಣೆಯ ಬಗ್ಗೆ ಕಾರ್ಯಾಗಾರ ನಡೆಸಲಾಗುವುದು ಎಂದು ನಾಸ್ಕಾಂ ಅಧ್ಯಕ್ಷ ಸೋಮ್ ಮಿಟ್ಟಲ್ ಹೇಳಿದ್ದಾರೆ.

ಕಚೇರಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ಭದ್ರತೆ ಒದಗಿಸುವುದು, ವಾಹನ ಮತ್ತು ಭದ್ರತಾ ಸಿಬ್ಬಂದಿಯ ಆಯ್ಕೆ, ಉದ್ಯೋಗಿಗಳ ಸಂಪರ್ಕ ವ್ಯವಸ್ಥೆ, ಹಾಗು ಕಚೇರಿಯಲ್ಲಿನ ಭದ್ರತೆ ಮುಂತಾದ ನಾಲ್ಕು ಬಗೆಗಿನ ಪ್ರಮುಖ ಅಂಶಗಳತ್ತ ಹೆಚ್ಚಿನ ಗಮನ ನಾಸ್ಕಾಂ ಹರಿಸಲಿದೆ. ಸ್ವರಕ್ಷಣೆ ಕುರಿತಂತೆ ಮಹಿಳಾ ಉದ್ಯೋಗಿಗಳಿಗೆ ತಿಳಿವಳಿಕೆ ಮಾತ್ರವಲ್ಲ ಸ್ವರಕ್ಷಣೆಗೆ ಬೇಕಾಗುವ ಎಲ್ಲ ತರಬೇತಿಗಳನ್ನೂ ನೀಡಲಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X