ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೋಹಿಣಿ ನಿಲೇಕಣಿ ಸೇರಿ 12ಮಂದಿಗೆ ಚೆನ್ನಮ್ಮ ಪ್ರಶಸ್ತಿ

By Staff
|
Google Oneindia Kannada News

Rohini Nilekani, Jayamala among Rani Chennammaasಬೆಂಗಳೂರು, ಮಾ.7: ಅಕ್ಷರ ಪ್ರತಿಷ್ಠಾನದ ಅಧ್ಯಕ್ಷರಾದ ರೋಹಿಣಿ ನಿಲೇಕಣಿ ಹಾಗೂ ಚಿತ್ರನಟಿ ಡಾ.ಜಯಮಾಲಾ ರಾಮಚಂದ್ರ ಸೇರಿದಂತೆ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 12 ಮಂದಿಯನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಮಾ.8ರ ವಿಶ್ವ ಮಹಿಳಾ ದಿನಾಚರಣೆಯ ದಿನ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಬಾಲ ಭವನದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ರಾಜ್ಯಪಾಲರ ಸಲಹೆಗಾರರಾದ ಪಿ.ಕೆ.ಎಚ್.ತಾರಕನ್ ತಿಳಿಸಿದ್ದಾರೆ. ಸಾಹಸ ಮೆರೆದ ಮಹಿಳೆಯೊಬ್ಬರಿಗೆ ವೀರ ಮಹಿಳೆ ಪ್ರಶಸ್ತಿ ನೀಡಲಾಗುವುದು ಎಂದು ತಾರಕನ್ ಹೇಳಿದರು. ವಿಜೇತರಿಗೆ 10 ಸಾವಿರ ರೂ. ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಪ್ರಶಸ್ತಿ ವಿಜೇತರು:

*ಬೆಂಗಳೂರಿನ ಎಂ.ಆರ್.ಪ್ರಶಾಂತಾ, ಡಾ.ಜಯಮಾಲಾ ರಾಮಚಂದ್ರ, ರೋಹಿಣಿ ನಿಲೇಕಣಿ, ನಂದಿನಿ ಹಾಗೂ ವಿನುತಾ ರವೀಂದ್ರ.
*ಚಿತ್ರದುರ್ಗದ ಶಶಿರೇಖಾ ಶಂಕರ್.
*ಕೊಪ್ಪಳದ ಸರೋಜಾ ಬಾಕಳೆ.
*ಉತ್ತರ ಕನ್ನಡ ಜಿಲ್ಲೆಯ ಲಲಿತಾ ಶಾನಭಾಗ್.
*ಗದಗಿನ ಜಯಶ್ರೀ ಬಿ.ಹಿರೇಮಠ್.
*ಉಡುಪಿಯ ಆಶಾ ರಮೇಶ್.
*ಬಿಜಾಪುರದ ಯಶೋಧ ಪಂಡಿತರಾವ್ ಪಾಟೀಲ್, ಸವಿತಾ ಅಣ್ಣೆಪ್ಪನವರ ಮತ್ತು ನಿರ್ಮಲ ಶಿರಗುಪ್ಪ.

ಪ್ರಶಸ್ತಿ ಪಡೆದ ಸಂಸ್ಥೆಗಳು:

*ಬೆಂಗಳೂರು ಮಹಿಳಾ ಅಭಯ ಕೇಂದ್ರ ಹಾಗೂ ಸಿಎಸ್‌ಎ‍ಎ‍ಎ‍ಡಬ್ಲ್ಯು.
*ಕೊಡಗಿನ ಮಹಿಳೋದಯ ಒಕ್ಕೂಟ.
*ಧಾರವಾಡದ ವರ್ಲ್ಡ್ ವಿಷನ್ ಇಂಡಿಯಾ.
*ಬೆಳಗಾವಿ ಜಿಲ್ಲೆ ಅಥಣಿಯ ವಿಮೋಚನಾ ದೇವದಾಸಿಯರ ಪುನರ್ವಸತಿ ಸಂಘ.
*ಹಾಸನದ ಪ್ರಚೋದನಾ ಸಂಸ್ಥೆ.

ಪ್ರಶಸ್ತಿ ಪಡೆದ ಸ್ತ್ರೀಶಕ್ತಿ ಗುಂಪುಗಳು:

ಪ್ರಥಮ ಅತ್ಯುತ್ತಮ ಸಂಸ್ಥೆ: ಹಾವೇರಿ ಜಿಲ್ಲೆ ದೇವಗಿರಿ ಗ್ರಾಮದ ದ್ಯಾವಮ್ಮ ದೇವಿ ಸ್ತ್ರೀಶಕ್ತಿ ಸ್ವಸಹಾಯ ಗುಂಪು.ದ್ವಿತೀಯ ಅತ್ಯುತ್ತಮ ಸಂಸ್ಥೆ: ಕುಂದಾಪುರ ತಾಲೂಕಿನ ಮೇಲ್ ಗಂಗೋಳ್ಳಿ ಗ್ರಾಮದ ವಿಶ್ವಾಸ್ ಸ್ತ್ರೀಶಕ್ತಿ ಸ್ವಸಹಾಯ ಗುಂಪು.ತೃತೀಯ ಅತ್ಯುತ್ತಮ ಸಂಸ್ಥೆ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಗುಂಡೇಗಲ್ ಗ್ರಾಮದ ಅಮೃತೇಶ್ವರ ಸ್ತ್ರೀಶಕ್ತಿ ಸಂಘ.

ಪ್ರಥಮ, ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಸ್ತ್ರೀಶಕ್ತಿ ಗುಂಪುಗಳಿಗೆ ಕ್ರಮವಾಗಿ 50 ಸಾವಿರ ರೂ., 30 ಸಾವಿರ ರೂ., ಹಾಗೂ 20 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X