ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಪ್ಪಾಣಿ: ಕರವೇ ಆಕ್ರೋಶಕ್ಕೆ ಪೀಠೋಪಕರಣ ಧ್ವಂಸ

By Staff
|
Google Oneindia Kannada News

ನಿಪ್ಪಾಣಿ, ಮಾ.7: ಕರ್ನಾಟಕದಲ್ಲಿದ್ದೂ ಹೆಚ್ಚಾನುಹೆಚ್ಚು ಮರಾಠಿಗರಿಂದ ತುಂಬಿರುವ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಗಡಿವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದೆ.

ಮರಾಠಿಗಲು ಬಹುಸಂಖ್ಯಾತರಿರುವ ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ನಗರಸಭೆಯಲ್ಲಿ ಕೈಗೊಂಡ ವಿವಾದಾತ್ಮಕ ನಿರ್ಣಯಗಳ ವಿರುದ್ಧ ಆಕ್ರೋಶಗೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರಸಭೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಂಬಂಧ 20 ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಕನ್ನಡ ಮತ್ತು ಮರಾಠಿಗರ ಜಟಾಪಟಿಯಲ್ಲಿ ಮತ್ತೆ ತ್ವೇಷ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ.

ಪ್ರತಿಭಟನೆಯ ವೇಳೆ ಮರಾಠಿಗರು ಮಾಧ್ಯಮದರ ಮೇಲೆ ಹಲ್ಲೆ ಮಾಡಿ ಮೊಬೈಲ್‍ಗಳನ್ನು ಕಸಿದುಕೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಕ್ಯಾಮರಾಗಳು ಜಖಂಗೊಂಡಿವೆ. ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗಿ ರಾಜ್ಯದ ಗಡಿಭಾಗದ ತಾಲೂಕುಗಳಾದ ನಿಪ್ಪಾಣಿ, ಬೀದರ್, ಭಾಲ್ಕಿ, ಕಾರವಾರ, ಬೆಳಗಾವಿ, ಖಾನಾಪುರಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಪ್ರಸ್ತಾವನೆ ಮಂಡಿಸಿದ ಸದಸ್ಯರ ಕ್ರಮವೇ ಕರವೇ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಹಿನ್ನಲೆ : ನಿಪ್ಪ್ಪಾಣಿ ನಗರಸಭೆಯ ಪ್ರಥಮ ಸಾಮಾನ್ಯ ಸಭೆಯಲ್ಲಿ ಗುರುವಾರ ನಗರಾಧ್ಯಕ್ಷೆ ಶುಭಾಂಗಿ ಜೋಶಿ ಮರಾಠಿ ಧ್ವಜವನ್ನು ಹಾರಿಸಿ ಪೂಜೆ ಸಲ್ಲಿಸಿದ್ದರು. ನಂತರ ಸದಸ್ಯರು ಸರ್ವಾನುಮತದಿಂದ 'ಗಡಿ ಠರಾವು' ಅಂಗೀಕರಿಸಿದ್ದರು. ಸಭೆಯಲ್ಲಿ 'ಸಂಯುಕ್ತ ಮಹಾರಾಷ್ಟ್ರ ಝಾಲಾಸ್ ಪಾಹಿಜೆ' ಎಂದು ಘೋಷಣೆ ಕೂಗಿ ಸಭಾಗೃಹವನ್ನು ಪ್ರವೇಶಿಸಿದ್ದರು.

ಸಭೆಯಲ್ಲಿ ಪ್ರತಿಪಕ್ಷದ ಸದಸ್ಯ ರಾಜ ಪಠಾಣ ಬೆಳಗಾವಿ, ನಿಪ್ಪಾಣಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದರು. ಎಲ್ಲ ಸದಸ್ಯರು ಚಪ್ಪಾಳೆ ತಟ್ಟಿ ಈ ಮಾತನ್ನು ಅನುಮೋದಿಸಿದರು. ಇದೇ ಸಂದರ್ಭದಲ್ಲಿ ನಗರಸಭೆಯ ಮುಂದಿನ ವ್ಯವಹಾರವನ್ನು ಮರಾಠಿಯಲ್ಲೇ ನಡೆಸಬೇಕೆಂದು ಪೌರಾಯುಕ್ತರಿಗೆ ಸೂಚಿಸಿದ್ದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X