• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ ಮಾಹಿತಿ

By Staff
|

KVPY scholorship Informationದಟ್ಸ್ ಕನ್ನಡ ಬ್ರೌಸ್ ಮಾಡುವ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೇಸಿಗೆ ಶುಭಾಶಯಗಳು. ಅನೇಕರಿಗೆ ಈಗ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಸಮಯ. ಪರೀಕ್ಷೆಯಲ್ಲಿ ಪಾಸಾಗಿ, ಸಾರಿ, Distintion ನಲ್ಲಿ ತೇರ್ಗಡೆಯಾಗಿ ವ್ಯಾಸಂಗ ಮುಂದುವರೆಸುವ ಆಲೋಚನೆ. ಪ್ರತಿಭೆ ಇದ್ದೂ, ಚೆನ್ನಾಗಿ ಅಂಕಗಳಿಸಿಯೂ, ಪ್ರೋತ್ಸಾಹದ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಅನೇಕರಿರುತ್ತಾರೆ. ಬುದ್ದಿವಂತ ವಿದ್ಯಾರ್ಥಿಗಳಿಗೆ ವ್ಯಾಸಂಗ ಮುಂದುವರಿಕೆಗೆ ಮಾರ್ಗವಿದ್ದೇ ಇರುತ್ತದೆ. ವಿದ್ಯಾರ್ಥಿ ಫೆಲೋಷಿಪ್ ಪಡೆಯುವುದರ ಮೂಲಕ ಮುಂದಿನ ವ್ಯಾಸಂಗಕ್ಕೆ, ಸಂಶೋಧನೆಗೆ ನೀವೇ ಮಾರ್ಗ ಹುಡುಕಿಕೊಳ್ಳುವುದು ಒಂದು ದಾರಿ. ಆ ದಾರಿಯ ಒಂದು ಬಾಗಿಲು ಇಲ್ಲಿ ತೆರೆದಿದೆ. ಸ್ಕಾಲರ್ ಷಿಪ್ ಮಾಹಿತಿಗೆ ನಿಮಗೆಲ್ಲ ಸ್ವಾಗತ.

ರಾಧಿಕಾ ಎಂ. ಜಿ. ಬೆಂಗಳೂರು

ಇದು ಭಾರತ ಸರ್ಕಾರದ ಯೋಜನೆ. ಹೆಸರು : "ಕಿಶೋರ ವೈಜ್ಞಾನಿಕ ಪ್ರೋತ್ಸಾಹನಾ ಯೋಜನೆ".[KVPY : Kishore Vaigyanik Protsahan Yojana]. ಇದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ನೀಡಲಾಗುವ ರಾಷ್ಟ್ರದ ಪ್ರತಿಷ್ಠಿತ ಸ್ಕಾಲರ್ ಷಿಪ್.

ಮೂಲಭೂತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಬಳಸಿ ಸೂಕ್ತ ದಿಶೆಯಲ್ಲಿ ಮುಂದುವರೆಯಬೇಕು. ನಿಮ್ಮಲ್ಲಿರುವ ವಿದ್ಯಾರ್ಜನೆಯ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸುವ ಫೆಲೋಫಿಪ್ ಮಾಹಿತಿಯನ್ನು ಹಂಚಿಕೊಳ್ಳುವ ಉದ್ದೇಶದ ಮಾರ್ಗದರ್ಶಿ ಲೇಖನವೇ ಇದಾಗಿದೆ.

ನೆನಪಿಡಿ : ನಿಮ್ಮಲ್ಲಿ, ನಿಮ್ಮ ಗೆಳೆಯ ಗೆಳತಿಯರಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಈ ಸ್ಕಾಲರ್ ಷಿಪ್ ಸ್ಥಾಪಿಸಲಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಧನ ಸಹಾಯದಿಂದ 1999ರಲ್ಲಿ ಈ ಸ್ಕಾಲರ್ ಷಿಪ್ ಆರಂಭವಾಯಿತು. ಕೆ.ವಿ.ಪಿ.ವೈ ಸ್ಕಾಲರ್ ಷಿಪ್ನ ಆಯ್ಕೆ ಪ್ರಕ್ರಿಯೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಮೇಲ್ವಿಚಾರಣೆಯಲ್ಲಿ I.I.T(Mumbai), AIIMS(New Delhi), PGIMER(Chandigarh) ಸಹಭಾಗಿತ್ವದೊಂದಿಗೆ ಪ್ರತಿ ವರ್ಷ ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗೆ ನಡೆಯುತ್ತದೆ.

ಆಯ್ಕೆ ಪ್ರಕ್ರಿಯೆಯುಲ್ಲಿ ಎರಡು ಪ್ರಕಾರಗಳಿವೆ:

* 10ನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ 75% ಅಂಕಗಳನ್ನು ಗಳಿಸಿದ, ಮೊದಲನೇ ಪಿ.ಯು.ಸಿ ಸೇರಲಿರುವ ವಿದ್ಯಾರ್ಥಿಗಳು ಅಥವಾ ದ್ವಿತೀಯ ಪಿ.ಯು.ಸಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ 60% ಅಂಕಗಳನ್ನು ಗಳಿಸಿ ಪ್ರಥಮ ಬಿ.ಎಸ್ಸಿ ಸೇರಲಿರುವ ವಿದ್ಯಾರ್ಥಿಗಳು ಪ್ರತಿ ವರ್ಷ ಮೇ ತಿಂಗಳಲ್ಲಿ ಸ್ಕಾಲರ್ ಷಿಪ್ ಗಾಗಿ ಅರ್ಜಿ ಸಲ್ಲಿಸಬಹುದು. ನಂತರ, ದೇಶಾದ್ಯಂತ ನಡೆಯುವ ಕೆ.ವಿ.ಪಿ.ವೈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳನ್ನು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

* ಪ್ರಥಮ ಪಿ.ಯು.ಸಿ/ದ್ವಿತೀಯ ಪಿ.ಯು.ಸಿ/ಪ್ರಥಮ ಬಿ.ಎಸ್ಸಿ /ದ್ವಿತೀಯ ಬಿ.ಎಸ್ಸಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ಮೂಲಭೂತ ವಿಜ್ಞಾನ ವಿಷಯದಲ್ಲಿ ಪೂರ್ಣಗೊಳಿಸಿರುವ ಸಂಶೋಧನಾ ವರದಿಯ ಜೊತೆಗೆ ಕೆ.ವಿ.ಪಿ.ವೈ ಸ್ಕಾಲರ್ ಷಿಪ್ ಗಾಗಿ ಅರ್ಜಿ ಸಲ್ಲಿಸಬಹುದು.

*ಪ್ರಥಮ ಬಿ.ಇ/ದ್ವಿತೀಯ ಬಿ.ಇ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ತಂತ್ರಜ್ಞಾನ ವಿಷಯದಲ್ಲಿ ಪೂರ್ಣಗೊಳಿಸಿರುವ ಸಂಶೋಧನಾ ವರದಿಯ ಜೊತೆಗೆ ಕೆ.ವಿ.ಪಿ.ವೈ ಸ್ಕಾಲರ್ ಷಿಪ್ ಗಾಗಿ ಅರ್ಜಿ ಸಲ್ಲಿಸಬಹುದು.

*ಅಂತೆಯೇ, ದ್ವಿತೀಯ ಎಮ್.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿದ ವೈದ್ಯಕೀಯ ವಿಷಯದಲ್ಲಿ ಪೂರ್ಣಗೊಳಿಸಿರುವ ಸಂಶೋಧನಾ ವರದಿಯ ಜೊತೆಗೆ ಕೆ.ವಿ.ಪಿ.ವೈ ಸ್ಕಾಲರ್ ಷಿಪ್ ಗಾಗಿ ಅರ್ಜಿ ಸಲ್ಲಿಸಬಹುದು.

*ಜೊತೆಗೆ ಎಲ್ಲ ವಿದ್ಯಾರ್ಥಿಗಳೂ ತಮ್ಮ ಶೈಕ್ಶಣಿಕ ತರಗತಿಗಳಲ್ಲಿ 60% ಅಂಕಗಳನ್ನು ಗಳಿಸಿರಬೇಕು. ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಅಂಕಗಳಲ್ಲಿ ಸಡಿಲಿಕೆ ಉಂಟು.

ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಮಾಸಿಕ 2000 ರಿಂದ 5000 ರುಪಾಯಿಗಳವರೆಗೂ ಸ್ಕಾಲರ್ ಷಿಪ್ ಗಾಗಿ ಸಿಗುತ್ತದೆ. ಜೊತೆಗೆ ವರ್ಷಕ್ಕೊಮ್ಮೆ ಇತರೇ ಖರ್ಚುಗಳಿಗಾಗಿ ಎರಡು ತಿಂಗಳ ಹೆಚ್ಚುವರಿ ಫೆಲೋಶಿಪ್ ಸಹಾ ದೊರೆಯುತ್ತದೆ.ಮತ್ತೊಂದು ಆಕರ್ಷಣೆಯ ವಿಚಾರವೆಂದರೆ, ಕೆ.ವಿ.ಪಿ.ವೈ ವಿದ್ಯಾರ್ಥಿಗಳು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ದೇಶದ ಪ್ರಮುಖ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ, ವಿಜ್ಞಾನಿಗಳ ಜೊತೆ ವಿಚಾರ ವಿನಿಮಯ ಮಾಡುವ, ಪ್ರಯೋಗಾಲಯಗಳಲ್ಲಿ ಕೆಲಸ ಮಾಡುವ ಅವಕಾಶ ಹೊಂದಿರುತ್ತಾರೆ.

ಕೆ.ವಿ.ಪಿ.ವೈ ಕುರಿತು ವಿವರವಾದ ಜಾಹೀರಾತು ರಾಷ್ತ್ರೀಯ ತಂತ್ರಜ್ಞಾನ ದಿನವಾದ ಮೇ 11ರಂದು ರಾಷ್ಟ್ರದ ಹಾಗೂ ಎಲ್ಲ ರಾಜ್ಯಗಳ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತದೆ.ಹೆಚ್ಚಿನ ವಿವರಗಳಿಗಾಗಿ ಅಂತರ್ಜಾಲ ತಾಣ ನೋಡಿ : http://www.iisc.ernet.in/kvpy/index.htm ( ಈ ಕೊಂಡಿಯನ್ನು ಉಳಿಸಿಕೊಳ್ಳಿರಿ)

ದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಶೋಧನೆಯತ್ತ ಸೆಳೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಇಟ್ಟಿರುವ ಒಂದು ದಿಟ್ಟ ಹೆಜ್ಜೆ ಕೆ.ವಿ.ಪಿ.ವೈ ಸ್ಕಾಲರ್ ಷಿಪ್. ನಿಧಾನಗತಿಯಲ್ಲಾದರೂ ಸರಿಯೇ, ಈ ಯೋಜನೆ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬುದು ಈ ಯೋಜನೆಯನ್ನು ರೂಪಿಸಿರುವ ವಿಜ್ಞಾನಿಗಳ ಮಹತ್ತರ ಆಶಯ. ಇಂಥ ಯೋಜನೆಗಳ ಸತ್ ಪ್ರಯೋಜನ ಪಡೆಯುವ ಹಾಗೂ ಯೋಗ್ಯ ವಿದ್ಯಾರ್ಥಿಗಳೊಂದಿಗೆ ಈ ಮಾಹಿತಿಯನ್ನು ಹಂಚಿಕೊಳ್ಳುವ ಗೆಳೆತನ ನಿಮ್ಮಲ್ಲಿ ವೃದ್ಧಿಸಲಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more