ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಫಾಸಿಸ್‌ನಲ್ಲಿ 260 ನೌಕರರಿಗೆ ಪಿಂಕ್ ಸ್ಲಿಪ್

By Staff
|
Google Oneindia Kannada News

mPhasis sacks 260 employeesಬೆಂಗಳೂರು, ಫೆ.21 : 22 ಬಿಲಿಯನ್ ಡಾಲರ್ ಕಂಪನಿ ಇಡಿಎಸ್‌ನ ಭಾಗವಾಗಿರುವ ಎಂಫಾಸಿಸ್ ಕೇವಲ ಎರಡು ದಿನಗಳ ಅವಧಿಯಲ್ಲಿ ಚೆನ್ನೈನಲ್ಲಿ 200 ಮತ್ತು ಬೆಂಗಳೂರಿನಲ್ಲಿ 60 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಬಿಪಿಓ ಕ್ಷೇತ್ರದಲ್ಲಿ ಸೇವಾನಿರತವಾಗಿರುವ ಎಂಫಾಸಿಸ್ ಈ ವರದಿಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ಕಂಪನಿ ಪಾಲಿಸಿ ಪ್ರಕಾರ ಯಾವುದೇ ಊಹಾಪೋಹಗಳಿಗೆ ಕಂಪನಿ ಪ್ರತಿಕ್ರಿಯಿಸುವುದಿಲ್ಲ. 2006ರಲ್ಲಿ 11 ಸಾವಿರವಿದ್ದ ನೌಕರರ ಸಂಖ್ಯೆ 2007ರಲ್ಲಿ 27 ಸಾವಿರಕ್ಕೇರಿದೆ. ಇನ್ನೂ ಹೆಚ್ಚಿನ ಸಾಫ್ಟ್‌ವೇರ್ ತಜ್ಞರನ್ನು ಮುಂದೆಯೂ ಕಂಪನಿಗೆ ಸೇರಿಸಿಕೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಎಂಫಾಸಿಸ್ ಮಾತ್ರವಲ್ಲ ಐಟಿ ಕ್ಷೇತ್ರದಲ್ಲಿರುವ ಹೆಚ್ಚಿನ ಕಂಪನಿಗಳ ಲಾಭದಲ್ಲಿ ಶೇ.40ರಷ್ಟು ನೌಕರರ ಸಂಬಳವೇ ಕಬಳಿಸುತ್ತಿದೆ. ಅದಲ್ಲದೇ, ಕಳೆದ ತ್ರೈಮಾಸಿಕದಲ್ಲಿ ಎಂಫಾಸಿಸ್‌ನ ಲಾಭ ಶೇ.13ರಷ್ಟು ಇಳಿದಿರುವುದು ಈ ಕ್ರಮಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕೆಲಸವನ್ನು ತೃಪ್ತಿಕರವಾಗಿ ಮಾಡದ ನೌಕರರನ್ನು ತೆಗೆದುಹಾಕಲಾಗಿದೆ ಎಂಬ ವರದಿಗಳೂ ಬಂದಿವೆ.

ಇತ್ತೀಚೆಗೆ ಐಟಿ ಕ್ಷೇತ್ರದ ಹಿರಿಯಣ್ಣನಂತಿರುವ ಟಿಸಿಎಸ್, ಐಬಿಎಂ ಮತ್ತು ಯಾಹೂನಂಥ ಕಂಪನಿಗಳೂ ಎರಡು ಸಾವಿರಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ತೆಗೆದಿವೆ. ಫಲಪ್ರದವಾಗಿ ಕೆಲಸ ನಿರ್ವಹಿಸದ ತಜ್ಞರನ್ನು ಮನೆಗೆ ಕಳುಹಿಸಿದ್ದಾಗಿ ಈ ಕಂಪನಿಗಳು ಸಮರ್ಥಿಸಿಕೊಂಡಿದ್ದರೂ, ಕಂಪನಿಯ ಖರ್ಚುವೆಚ್ಚವನ್ನು ತಗ್ಗಿಸಲು ನೌಕರರನ್ನು ಈ ಕಂಪನಿಗಳು ಮನೆಗೆ ಕಳುಹಿಸಿರುವುದು ರಹಸ್ಯವಾಗೇನೂ ಉಳಿದಿಲ್ಲ. ಆದರೆ, ಇಂಥದೇ ಕಾರಣಕ್ಕೆ ನೌಕರರ ಸಂಖ್ಯೆಯನ್ನು ತಗ್ಗಿಸಲಾಗಿದೆ ಎಂದು ಬೆರಳುತೋರಿಸಿ ಹೇಳಲಾಗುವುದಿಲ್ಲ ಎಂಬುದು ಐಟಿ ಪಂಡಿತರ ಅಭಿಪ್ರಾಯ.

ಇದೆಲ್ಲ ಮಾಮೂಲು : ಉತ್ತುಂಗದಲ್ಲಿದ್ದಾಗ ನಿರೀಕ್ಷೆಗೂ ಮೀರಿ ಜನರನ್ನು ತೆಗೆದುಕೊಳ್ಳುವುದು ಆರ್ಥಿಕ ಸ್ಥಿತಿ ಹದಗೆಟ್ಟಾಗ ಪಿಂಕ್ ಸ್ಲಿಪ್ ನೀಡಿ ಶೇಕ್ ಹ್ಯಾಂಡ್ ಮಾಡುವುದು ಐಟಿ ಕ್ಷೇತ್ರದಲ್ಲಿ ಮಾಮೂಲು ಎನ್ನುವುದು ಬಹುತೇಕ ಎಲ್ಲ ಐಟಿ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಅಭಿಮತ.

ನಿರೀಕ್ಷೆಗೂ ಕೆಳಮಟ್ಟದಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ತೆಗೆದುಹಾಕುವುದನ್ನು ಲೇಆಫ್ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಿರೀಕ್ಷೆಮಟ್ಟ ತಲುಪದ ನೌಕರರನ್ನು ಮನೆಗೆ ಕಳುಹಿಸಲೇಬೇಕು ಎಂಬುದು ಐಟಿ ದಿಗ್ಗಜ ಇನ್ಫೋಸಿಸ್‌ನ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿರುವ ಮೋಹನದಾಸ್ ಪೈ ಅವರ ಸ್ಪಷ್ಟ ನಿಲುವು.

ಕಳೆದ ಮೂರು ವರ್ಷಗಳಿಂದ ಶೇ.3ರಷ್ಟು ನೌಕರರನ್ನು ಕಾರ್ಯನಿರ್ವಹಣೆ ಆಧಾರದ ಮೇಲೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ವಿಪ್ರೋನ ಎಚ್‌ಆರ್ ಮುಖ್ಯಸ್ಥ ಪ್ರತೀಕ್ ಕುಮಾರ್ಅಭಿಪ್ರಾಯಪಟ್ಟಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X