ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ: ಆಯುಕ್ತೆ ಅಮಿತಾ ಪ್ರಸಾದ್ ವಿರುದ್ಧ ತನಿಖೆ

By Staff
|
Google Oneindia Kannada News

ಬೆಳಗಾವಿ, ಫೆ.15: ಇಲ್ಲಿನ ಸಾಂಬ್ರ ವಿಮಾನ ನಿಲ್ದಾಣದಲ್ಲಿ ಕಲಾವಿದರು ಮತ್ತು ಜನಪ್ರತಿನಿಧಿಗಳನ್ನು ಅವಮಾನ ಮಾಡಿದ ಹಿನ್ನಲೆಯಲ್ಲಿ ಬೆಳಗಾವಿಯ ಪ್ರಾದೇಶಿಕ ಆಯುಕ್ತೆ ಅಮಿತಾ ಪ್ರಸಾದ್ ವಿರುದ್ದ ತನಿಖೆ ನಡೆಸುವಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಈ ಘಟನೆಗೆ ಸಂಬಂದಪಟ್ಟಂತೆ ಅಮಿತಾ ಪ್ರಸಾದ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಅವರಿಗೆ ಕಲಾವಿದರು ಮತ್ತು ಸದಸ್ಯರುಗಳು ದೂರನ್ನು ಕೊಟ್ಟಿದ್ದರು.ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಭಾಪತಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ಪ್ರಕರಣವನ್ನು ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಲಾಗುವುದೆಂದು ತಿಳಿಸಿದ್ದಾರೆ.ಅಮಿತಾರನ್ನು ಕರ್ನಾಟಕದಿಂದ ಎತ್ತಂಗಡಿ ಮಾಡಬೇಕೆಂದು ಮುಖ್ಯಮಂತ್ರಿಚಂದ್ರು,ಅರವಿಂದ ಲಿಂಬಾವಳಿ,ನಾಡಗೌಡ,ಶ್ರೀನಿವಾಸ್,ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.ನಿರ್ದೇಶಕ ಪಿ.ಶೇಷಾದ್ರಿ,ರವಿಕಿರಣ್,ನಟ ಮೋಹನ್ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಘಟನೆಯ ಹಿನ್ನಲೆ : ಫೆಬ್ರವರಿ 11 ರಂದು ಬಾಗಲಕೋಟೆಯಲ್ಲಿ 'ಟಿ.ವಿ.25' ನ ಸರಕಾರಿ ಪ್ರಾಯೋಜಕತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಮರಳಲು ಸಾಂಬ್ರ ವಿಮಾನ ನಿಲ್ದಾಣದ ಗಣ್ಯರ ಮೊಗಸಾಲೆಯಲ್ಲಿ ಕಲಾವಿದರು ಮತ್ತು ಜನಪ್ರತಿನಿಧಿಗಳಿದ್ದ ತಂಡವು ಕುಳಿತಿತ್ತು.ಅಲ್ಲಿ ಕುಳಿತ್ತದ್ದಕ್ಕೆ ಗಣ್ಯರು ಯಾರೆಂದು ತಿಳಿಯದೆ ಅಲ್ಲಿನ ಅಧಿಕಾರಿಗಳನ್ನು ತರಾಟೆಗೆ ಅಮಿತಾ ತೆಗೆದುಕೊಂಡಿದ್ದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಹೋದ ಮುಖ್ಯಮಂತ್ರಿ ಚಂದ್ರು,ಅರವಿಂದ ಲಿಂಬಾವಳಿ ಮತ್ತು ನಾಗತೀಹಳ್ಳಿ ಚಂದ್ರಶೇಖರ್ ಅವರಿಗೆ ನನಗೆ ಬರುವುದೇ ಇಂಗ್ಲೀಷ್ ಮಾತನಾಡಬೇಕಿದ್ದರೆ ಇಂಗ್ಲೀಷ್ ನಲ್ಲಿ ಮಾತನಾಡಿ ಎಂದು ನಿಂದಿಸಿ ಉದ್ದಟತನದಿಂದ ಅಮಿತಾ ವರ್ತಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

ಇದೇ ವೇಳೆ ವಿಮಾನ ಹೋದಮೇಲೆ ಬುದ್ದಿಬಂದ ಅಮಿತಾ ಪ್ರಸಾದ್ ರವರಿಗೆ ಗಣ್ಯರು ಯಾರೇಂದು ತಿಳಿಯದೆ ನಡೆದ ಘಟನೆಯಿದು ಜನಪ್ರತಿನಿಧಿಗಳು ಮತ್ತು ಕಲಾವಿದರೆಂದರೆ ತಮಗೆ ಅಪಾರ ಗೌರವವಿದ್ದು ಅವರುಗಳನ್ನು ಅವಮಾನಿಸುವ ಯಾವ ಉದ್ದೇಶವಿರಲಿಲ್ಲ ಎಂದು ಕ್ಷಮೆಯಾಚಿಸಿದ್ದಾರೆಂದು ತಿಳಿದು ಬಂದಿದೆ.
(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X