ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ದೇಶಗಳಲ್ಲಿ ಪ್ರೇಮಿಗಳ ದಿನ ಬಂದ್

By Staff
|
Google Oneindia Kannada News

ದುಬೈ, ಫೆ.13: ಗುರುವಾರ ಪ್ರೇಮಿಗಳ ದಿನ. ಕೆಂಪು ಗುಲಾಬಿಗಳ ವಿನಿಮಯದೊಂದಿಗೆ ಪ್ರೀತಿ-ಪ್ರೇಮ-ಪ್ರಣಯಗಳು ಅಂಕುರಿಸುವ ದಿನ. ತಮ್ಮ ಸಂಪ್ರದಾಯಕ್ಕೆ ವಿರುದ್ಧವಾದ ಪ್ರೇಮಿಗಳ ದಿನದಂದು ಕೆಂಪು ಗುಲಾಬಿ ಮಾರಾಟವನ್ನು ಸೌದಿ ಅರೇಬಿಯಾದಲ್ಲಿ ನಿಷೇಧಿಸಲಾಗಿದೆ. ಪ್ರೇಮಿಗಳ ದಿನಕ್ಕೆ ಕುವೈತ್‌ನಲ್ಲಿ ಸಹಾ ವಿರೋಧ ವ್ಯಕ್ತವಾಗಿದೆ.

ಫೆ.14ರಂದು ಸೌದಿ ಅರೇಬಿಯಾದ ಅಂಗಡಿ ಮಳಿಗೆಗಳಲ್ಲಿ ಕೆಂಪು ಗುಲಾಬಿ ಮಾರಾಟ ಮಾಡುವಂತಿಲ್ಲ. ಅಲ್ಲಿ ಪ್ರೇಮವನ್ನು ಬಹಿರಂಗವಾಗಿ ವ್ಯಕ್ತಪಡಿಸುವುದು ತಪ್ಪು. ಇದೆಲ್ಲಾ ಇಸ್ಲಾಂಗೆ ವಿರುದ್ಧ. ವೈವಾಹಿಕ ಸಂಬಂಧಗಳನ್ನು ಹದಗೆಡಿಸುತ್ತದೆ ಎಂದು ಅಲ್ಲಿನ ಸರ್ಕಾರ ಕೆಂಪು ಗುಲಾಬಿ ಮಾರಾಟ ಹಾಗೂ ಪ್ರೇಮಿಗಳ ದಿನದ ಆಚರಣೆಯನ್ನು ನಿಷೇಧಿಸಿದೆ. ಆದರೆ ಅಲ್ಲಿನ ಕಾಳಸಂತೆಯಲ್ಲಿ ಕೆಂಪು ಗುಲಾಬಿಗಳು ಕದ್ದುಮುಚ್ಚಿ ಮಾರಾಟವಾಗುತ್ತಿವೆ.

12ನೇ ಶತಮಾನದಲ್ಲಿ ಆರಂಭವಾದ ಪ್ರೇಮಿಗಳ ದಿನದ ಆಚರಣೆ ಇಂದು ಬರೀ ಪ್ರೀತಿಯ ಸಂಕೇತವಾಗಿ ಅಷ್ಟೇ ಉಳಿಯದೆ ಪಾಶ್ಚಿಮಾತ್ಯ ದೇಶಗಳಲ್ಲಿ ಶತಕೋಟಿ ಡಾಲರ್ ತಂದುಕೊಡುವ ಬೃಹತ್ ಉದ್ಯಮವಾಗಿ ಬೆಳೆದಿದೆ .

(ಏಜೆನ್ಸೀಸ್)

ಪೂರಕ ಓದಿಗೆ
ಲವ್ಲಿಗಾಗಿ ಹರಿ ಫೆಬ್ರವರಿ 13 ರಂದು ಪರಾರಿ
ಕಳೆದುಕೊಂಡ 'ಪ್ರೀತಿ"ಹುಡುಕಲೊಂದು'ದಿನ"

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X