ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಡೊಂ ಟೆಸ್ಟರ್ ಹುದ್ದೆಗೆ ಪುರುಷರು ಬೇಕಾಗಿದ್ದಾರೆ

By Staff
|
Google Oneindia Kannada News

ನವದೆಹಲಿ, ಫೆ.12: ಹದಿನೆಂಟು ವರ್ಷ ಮೀರಿದ ನಿರುದ್ಯೋಗಿ, ಆರೋಗ್ಯವಂತ ಪುರುಷರು ನೌಕರಿಗಾಗಿ ಇನ್ನು ಚಿಂತಿಸಬೇಕಿಲ್ಲ. ಇಲ್ಲೊಂದು ವಿಶಿಷ್ಟ ಬಗೆಯ ಕೆಲಸವಿದೆ. ಕೆಲಸವಿಲ್ಲದವರು ಕಾಂಡೋಮ್ ಟೆಸ್ಟರ್ ಆಗಿ ನೌಕರಿ ಮಾಡಿ ಹಣ ಗಳಿಸಬಹುದು.

ಖ್ಯಾತ ಕಾಂಡೋಮ್ ತಯಾರಕ 'ಡ್ಯೂರೆಕ್ಸ್' ಪ್ರಕಟಣೆಯ ಪ್ರಕಾರ ಕಂಪೆನಿಯಲ್ಲಿ ಸುಮಾರು 1000 ಹುದ್ದೆಗಳು ಖಾಲಿ ಇವೆ.ಕೆಲಸ ಕೂಡ ಸುಲಭ. 1000 ಜನರಿಗೆ ಡ್ಯೂರೆಕ್ಸ್ ಕಂಪೆನಿ ಕಾಂಡೋಮ್ ಗಳನ್ನು ವಿತರಿಸುತ್ತದೆ. ಅದನ್ನು ಬಳಸಿ ಅದರ ಗುಣಮಟ್ಟದ ಬಗ್ಗೆ ಅಭಿಪ್ರಾಯ ತಿಳಿಸಿದರೆ ಸಾಕು. ಈ ಕೆಲಸಕ್ಕೆ ಕಂಪೆನಿ ಸಂಬಳ ನೀಡುತ್ತದೆ. ಜೊತೆಗೆ ಇತರೆ ಭತ್ಯೆಗಳು, ಗಿಫ್ಟ್ ಕೂಪನ್ ಗಳು, ಪ್ರವಾಸದ ಅವಕಾಶ ಹಾಗೂ ಉತ್ತಮ ಕೆಲಸಗಾರರಿಗೆ ಐಪಾಡ್ ಮುಂತಾದ ಆಕರ್ಷಕ ಬಹುಮಾನ ಕೂಡ ನೀಡಲಾಗುತ್ತದೆ. ಇವುಗಳಲ್ಲದೆ, 25,000 ರೂ. ಬಂಪರ್ ಬಹುಮಾನವೂ ಇದೆ.

ಅಗತ್ಯ ಹಾಗೂ ಅನಿವಾರ್ಯ: ಭಾರತೀಯ ಕಂಪೆನಿಗಳು ಉತ್ಪಾದಿಸುವ ಕಾಂಡೋಮ್ ಗಳು ಬಹುತೇಕ ಪಾಶ್ಚಾತ್ಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿರುವುದರಿಂದ ಭಾರತೀಯ ಪುರುಷರಿಗೆ ಅವು ಯಾಕೋ ಸರಿ ಹೊಂದುತ್ತಿರಲಿಲ್ಲ ಎಂದು ಭಾರತೀಯ ವೈದ್ಯ ವಿಜ್ಞಾನ ಮಂಡಳಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.ಈ ಹಿನ್ನೆಲೆಯಲ್ಲಿ ಭಾರತೀಯ ಗ್ರಾಹಕರ ಹಿತದೃಷ್ಟಿಯಿಂದ ಡ್ಯೂರೆಕ್ಸ್ ಕಂಪೆನಿ ತನ್ನ ಉತ್ಪನ್ನದಲ್ಲಿ ಅಗತ್ಯ ಬದಲಾವಣೆ ತಂದು, ಮಾರುಕಟ್ಟೆಗೆ ಬಿಡಲು ಯೋಚಿಸಿದೆ ಎಂದು ಟಿಟಿಕೆ ಎಲ್ ಐಜಿ ಲಿಮಿಟೆಡ್ ನ ಉಪಾಧ್ಯಕ್ಷ ಆರ್ .ಶ್ರೀನಿವಾಸನ್ ತಿಳಿಸಿದರು.

ಆಸಕ್ತರು www.durexcondomtester.co.in ನಲ್ಲಿ ಹೆಸರು ನೋಂದಾಯಿಸಿಕೊಂಡು ಉದ್ಯೋಗಾವಕಾಶದ ಲಾಭ ಪಡೆದುಕೊಳ್ಳಬಹುದು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X