ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರಂಭದಲ್ಲೇ ಕುಸಿದ ರಿಲಯನ್ಸ್ ಪವರ್ ಷೇರುಗಳು

By Staff
|
Google Oneindia Kannada News

ಆರಂಭದಲ್ಲೇ ಕುಸಿದ ರಿಲಯನ್ಸ್ ಪವರ್ ಷೇರುಗಳುಮುಂಬೈ, ಫೆ.11: ಇಂದಿನ ಬೆಳಗಿನ ಪಾಳಿ ಷೇರು ಮಾರುಕಟ್ಟೆಯಲ್ಲಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಪವರ್ ಷೇರುಗಳು ಮುಂಬೈ ಷೇರುಪೇಟೆ(BSE) ಹಾಗೂ ರಾಷ್ಟೀಯ ಷೇರುಪೇಟೆ (NSE)ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಕುಸಿತ ಕಂಡಿವೆ.

ಸೋಮವಾರದ ಬೆಳಗಿನ ಪಾಳಿ ಷೇರು ಮಾರುಕಟ್ಟೆಗೆ ಅನಿಲ್ ಅಂಬಾನಿ ಗಂಟೆ ಬಾರಿಸಿ ಚಾಲನೆ ನೀಡಿದರು. ಸ್ವಲ್ಪ ಸಮಯದಲ್ಲೇ ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ 450ರೂ.ಗಳಿದ್ದ ರಿಲಯನ್ಸ್ ಷೇರುಗಳು 530ರೂ.ಗಳಿಗೆ ಏರಿಕೆ ಕಂಡು ಮಾರಾಟಗಾರರಲ್ಲಿ ಉತ್ಸಾಹ ಮೂಡಿಸಿದವು.

ಅನಂತರ 435 ರೂ.ಗಳಿಗೆ ಇಳಿದ ಷೇರುಗಳು ಕವಿದಿದ್ದ ಉತ್ಸಾಹದ ಮೋಡವನ್ನು ಚದುರಿಸಿದವು. ಅಂದರೆ ಶೇ.18 ರಷ್ಟು ಏರಿಕೆ ಕಂಡು ಅನಂತರ 435 ರೂ.ಗಳಿಗೆ ಕುಸಿದು ಶೇ.3ರಷ್ಟು ಇಳಿಕೆ ಕಂಡಿವೆ. ಮುಂಬೈ ಷೇರುಪೇಟೆಯಲ್ಲೂ ರಿಲಯನ್ಸ್ ಪವರ್ ಷೇರುಗಳು ಕುಸಿತ ಕಂಡವು. 547.80ರೂ.ಗಳಿಗೆ ಆರಂಭವಾದ ಷೇರುಗಳು ಸ್ವಲ್ಪ ಸಮಯದ ಅಂತರದಲ್ಲೇ 429ರೂ.ಗಳಿಗೆ ಕುಸಿದಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X