ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗದಲ್ಲಿ ಯಾದವರ ಭಾರೀ ಸಮ್ಮೇಳನ

By Staff
|
Google Oneindia Kannada News

ಚಿತ್ರದುರ್ಗ, ಫೆ.11: ಅಖಿಲ ಕರ್ನಾಟಕ ಯಾದವರನ್ನು ಒಗ್ಗೂಡಿಸುವ ರಾಜ್ಯಮಟ್ಟದ ಬೃಹತ್ ಯಾದವ ಸಮ್ಮೇಳನಕ್ಕೆ ಸೋಮವಾರ ಚಾಲನೆ ದೊರೆಯಿತು. ಶ್ರೀಕೃಷ್ಣ ಯಾದವಾನಂದ ಸ್ವ್ವಾಮೀಜಿಗಳ ಸಾನಿಧ್ಯದಲ್ಲಿ ಸಮ್ಮೇಳನವನ್ನು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಇಂದು ಉದ್ಘಾಟಿಸಿದರು.

ರಾಜ್ಯದ ಮೂಲೆಮೂಲೆಗಳಿಂದ 4 ಲಕ್ಷಕ್ಕೂ ಅಧಿಕ ಯಾದವ ಬಾಂಧವರು ಸಮ್ಮೇಳನಕ್ಕೆ ಆಗಮಿಸಿದ್ದರು. ಸಮಾವೇಶದಲ್ಲಿ ಕೇಂದ್ರ ಸಚಿವ ಕಾಂತಿಸಿಂಗ್, ಆಂಧ್ರಪ್ರದೇಶದ ಕೃಷಿ ಸಚಿವ ರಘುವೀರಾರೆಡ್ಡಿ, ರೋಷನ್ ಬೇಗ್ ಹಾಗೂ ಸಂಸದರಾದ ಎನ್.ವೈ.ಹನುಮಂತಪ್ಪ, ಸಿದ್ದೇಶ್ವರ್, ಮಾಜಿ ಸಚಿವರಾದ ಎ.ಕೃಷ್ಣಪ್ಪ, ಮುನಿಯಪ್ಪ ಮುದ್ದಪ್ಪ, ಡಿ.ಮಂಜುನಾಥ್, ಮಾಜಿ ಶಾಸಕರಾದ ಎ.ವಿ.ಉಮಾಪತಿ, ರಾಜ್ಯ ಯಾದವ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ್ ಯಾದವ್, ಕಾರ್ಯಾಧ್ಯಕ್ಷ ಎಂ.ಆರ್.ಅಶ್ವತ್ಥಪ್ಪ ಮುಂತಾದವರು ಹಾಜರಿದ್ದರು.



ಕನ್ನಡಿಗರಿಗೆ ಮೋಸ ಮಾಡಿಲ್ಲ
ಇಂದು ಯಶವಂತಪುರದ ಮಾದರಿ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. 14 ಲಕ್ಷ ಉದ್ಯೋಗಿಗಳಿರುವ ಭಾರತೀಯ ರೈಲ್ವೆಯಲ್ಲಿ ಅರ್ಹತೆಯೊಂದೇ ಮಾನದಂಡ ಎಂದು ಲಾಲೂ ಹೇಳಿದರು. ರೈಲ್ವೆ ಗ್ರೂಪ್ 'ಡಿ' ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗುತ್ತದೆಯೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ''ಸಾಧ್ಯವಿಲ್ಲ'' ಎಂದ ಅವರು ಕರ್ನಾಟಕ ಮಾತ್ರವಲ್ಲ ಯಾವ ರಾಜ್ಯಗಳಲ್ಲೂ ಈ ರೀತಿಯ ಆದ್ಯತೆ ನೀಡಲಾಗಿಲ್ಲ ಎಂದು ಉತ್ತರಿಸಿದರು.


ಮಂಗಳೂರಿಗೆ ಮತ್ತೊಂದು ರೈಲು

ಯಶವಂತಪುರ ಮಾದರಿ ರೈಲು ನಿಲ್ದಾಣ ಉದ್ಘಾಟಿಸಿದ ನಂತರ ಮಾತನಾಡಿದ ಲಾಲೂ, ಅಗತ್ಯ ಬಿದ್ದರೆ ಬೆಂಗಳೂರು-ಮಂಗಳೂರಿನ ನಡುವೆ ಮತ್ತೊಂದು ರೈಲಿನ ವ್ಯವಸ್ಥೆ ಕಲ್ಪಿಸಲಾಗುವುದೆಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಜಯಪ್ರಕಾಶ್ ನಾರಾಯಣ್, ನೈರುತ್ಯ ರೈಲ್ವೆ ವಲಯದ ವಿಭಾಗೀಯ ವ್ಯವಸ್ಥಾಪಕ ಮಹೇಶ್ ಮಂಗಲ್, ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಪಾಲ್ಗೊಂಡಿದ್ದರು.
(ದಟ್ಸ್‌ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X