ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆಗೆ ಮತ್ತು ಓಟಿಗೆ ಒಂದೇ ವಯಸ್ಸು?

By Staff
|
Google Oneindia Kannada News

Vote at 18, Marry at 18?ನವದೆಹಲಿ, ಫೆ.7: ಪುರುಷರ ವಿವಾಹದ ವಯಸ್ಸನ್ನು 21ರ ಬದಲಿಗೆ 18 ವರ್ಷಕ್ಕೆ ನಿಗದಿಪಡಿಸಬೇಕು ಹಾಗೂ ಬಾಲ್ಯ ವಿವಾಹವನ್ನು ಅನೂರ್ಜಿತಗೊಳಿಸಬೇಕು ಎಂದು ಕಾನೂನು ಆಯೋಗ ಬುಧವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವಿವಾಹದ ವಿಚಾರದಲ್ಲಿ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ವಯಸ್ಸು ನಿಗದಿಪಡಿಸುವುದು ಅರ್ಥಹೀನ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಹುಡುಗರಿಗೆ 18ವರ್ಷಕ್ಕೆ ಮತ ಚಲಾಯಿಸುವ ಹಕ್ಕು ಇರಬೇಕಾದರೆ ಮದುವೆ ಯಾಕಾಗಬಾರದು? ಎಂದು ಆಯೋಗ ಪ್ರಶ್ನಿಸಿದೆ. ಈಗಿರುವ ಕಾನೂನನ್ನು ತಿದ್ದುಪಡಿ ಮಾಡಲು ಸೂಚಿಸಿದೆ.

16ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವುದು ಅಥವಾ ಒಪ್ಪಿಸಿ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು 'ಅತ್ಯಾಚಾರ' ಎಂದು ಪರಿಗಣಿಸಬೇಕು ಎಂದು ಆಯೋಗ ಹೇಳಿದೆ. ಈ ಸಂಬಂಧದ ಎರಡು ವರದಿಗಳನ್ನು ಕೇಂದ್ರ ಕಾನೂನು ಸಚಿವ ಎಚ್.ಆರ್.ಭಾರದ್ವಾಜ್ ಅವರಿಗೆ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎ.ಆರ್.ಲಕ್ಷ್ಮಣನ್ ಸಲ್ಲಿಸಿದ್ದಾರೆ.

ಈ ಹೊಸ ಕಾನೂನು ಜಾರಿಯಾಗಿದ್ದೇ ಆದರೆ, 16 ವರ್ಷದೊಳಗಿನ ಪತ್ನಿ ಅಥವಾ ಪ್ರಿಯತಮೆಯ ಜೊತೆ ಲೈಂಗಿಕ ಸಂಬಂಧ ಹೊಂದಿದವರಿಗೆ ಕಾನೂನು ಶಿಕ್ಷಿಸುತ್ತದೆ. ಲೈಂಗಿಕ ಸಂಬಂಧಕ್ಕೆ ತನ್ನ ಒಪ್ಪಿಗೆ ಇತ್ತೆಂದು ಹುಡುಗಿ ಹೇಳಿದರೂ ಶಿಕ್ಷೆ ತಪ್ಪ್ಪುವುದಿಲ್ಲ. ಬಾಲ್ಯ ವಿವಾಹವನ್ನು ಬುಡಸಮೇತ ಕಿತ್ತೊಗೆಯಬೇಕು ಎನ್ನುವುದು ಆಯೋಗ ಗುರಿ ಎಂದು ಆಯೋಗದ ಸದಸ್ಯೆ ಕೀರ್ತಿ ಉಪ್ಪಾಲ್ ಹೇಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X