ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆರಳ ತುದಿಯಲ್ಲಿ ಸಿಗಲಿದೆ ಆರೋಗ್ಯ ತಾಣ!

By Staff
|
Google Oneindia Kannada News

ಬೆಂಗಳೂರು, ಫೆ.6: ಸಾವಿರಕ್ಕೂ ಹೆಚ್ಚು ವೈದ್ಯರು, ಆಸ್ಪತ್ರೆಗಳು, ಅಲ್ಲಿರುವ ಸೌಲಭ್ಯಗಳು, ಯೋಗ ಕೇಂದ್ರಗಳು...ಒಟ್ಟಿನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಆನ್‌ಲೈನ್‌‍ನಲ್ಲಿ ಲಭ್ಯ. ಯುಆರ್ ಐಡೆಂಟಿಟಿ ಎಂಬ ಸಂಸ್ಥೆ ವೈದ್ಯಕೀಯಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡಿದೆ.

ಸ್ಥಳೀಯ ವೈದ್ಯರ ಬಗ್ಗೆ ಮಾಹಿತಿ ಬೇಕೆ? ನಿಮ್ಮ ಬಡವಾಣೆಯಲ್ಲಿರುವ ಆಸ್ಪತ್ರೆಗಳ ಪಟ್ಟಿ ಬೇಕೆ? ಅಂತರ್ಜಾಲದಲ್ಲಿ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರ ಬಳಿ ಚರ್ಚಿಸಬೇಕೆ? ಹಾಗಿದ್ದರೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ www.consulturdoctor.com ಎಂಬ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಉಚಿತವಾಗಿ ಪಡೆಯಬಹುದು.

ಇಲ್ಲಿ ನೀವು ವೈದ್ಯರೊಂದಿಗೆ ನೇರವಾಗಿ ಚರ್ಚಿಸಬಹುದು. ವೈದ್ಯರಿಗೊಂದು ಇ-ಮೇಲ್ ಕಳುಹಿಸಿ ಸೂಚನೆ ಸಲಹೆ ಸೇರಿದಂತೆ ಆನ್‌‍ಲೈನಲ್ಲೇ ಅಪಾಯಿಂಟ್‌ಮೆಂಟ್ ಪಡೆಯಬಹುದು. ಈ ತಾಣದಲ್ಲಿ ಎಲ್ಲಾ ರೀತಿಯ ಆರೋಗ್ಯ ಪದ್ದತಿಗಳ ಬಗ್ಗೆ ಪ್ರತ್ಯೇಕ ವಿಭಾಗಗಳಿವೆ. ವೈದ್ಯಕೀಯ ಲೇಖನಗಳು ಸಹಾ ಇಲ್ಲಿ ಲಭ್ಯ . ದಿನದ 24ಗಂಟೆ ಸೇವೆ ಒದಗಿಸುವ ಔಷಧಾಲಯಗಳ ವಿಳಾಸ, ರಕ್ತದಾನ ಮಾಡಬೇಕಾದರೆ, ಯಾವ ಗುಂಪಿನ ರಕ್ತಬೇಕೆಂಬಮಾಹಿತಿ ಕ್ಷಣ ಮಾತ್ರದಲ್ಲಿ ಲಭ್ಯವಾಗುತ್ತದೆ.

ಸಾರ್ವಜನಿಕರು ಈ ಅಂತರ್ಜಾಲ ತಾಣದಲ್ಲಿ ತಮ್ಮ ಆರೋಗ್ಯ ಕುರಿತಾದ ಮಾಹಿತಿ, ಸಲಹೆಗಳನ್ನು ಪಡೆಯಬಹುದಾಗಿದೆ. ಇದೇ ರೀತಿಯ ಅಂತರ್ಜಾಲ ತಾಣವನ್ನು ಮೈಸೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿನ ವೈದ್ಯರ ಮಾಹಿತಿಯನ್ನು ಸೇರಿಸುವ ಯೋಜನೆ ಇದೆ ಎಂದು ಯುಆರ್ ಐಡೆಂಟಿಟಿಯ ಅಧ್ಯಕ್ಷರಾದ ಕೆ.ಎಸ್.ಮನೋಹರ್ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X