ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀಟಲ್ಸ್ ಗುರು ಮಹರ್ಷಿ ಮಹೇಶ್ ಯೋಗಿ ನಿಧನ

By Staff
|
Google Oneindia Kannada News

ದಿ ಹೇಗ್(ನೆದರ್ಲ್ಯಾಂಡ್ಸ್), ಫೆ.6: ಪಾಶ್ಚಿಮಾತ್ಯರಿಗೆ ಭಾರತೀಯ ಯೋಗಪದ್ಧತಿಯ ಮೂಲಕ ಧ್ಯಾನ ಕಲಿಸಿದ ಗುರು ಮಹರ್ಷಿ ಮಹೇಶ್ ಯೋಗಿ ಮಂಗಳವಾರ ರಾತ್ರಿ 7ಗಂಟೆಯ ಸಮಯದಲ್ಲಿ ನಿಧನರಾಗಿದ್ದಾರೆ. ಅವರಿಗೆ 91ವರ್ಷ ವಯಸ್ಸಾಗಿತ್ತು. ಇವರ ಯೋಗ ಪದ್ಧತಿ ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ.

ಮಹರ್ಷಿ ಮಹೇಶ್ ಯೋಗಿ ಅವರು ಹುಟ್ಟಿದ್ದು ಮಧ್ಯಪ್ರದೇಶದ ಜಬಲ್‌ಪುರನಲ್ಲಿ. ಇವರ ಜನ್ಮದಿನಾಂಕದ ಬಗ್ಗೆ ನಿಖರವಾದ ದಾಖಲೆಗಳಿಲ್ಲ. ಕೆಲವೊಂದು ಮೂಲಗಳ ಪ್ರಕಾರ 1911ರಿಂದ 1918ರ ಕಾಲಾವಧಿಯಲ್ಲಿ ಮಹರ್ಷಿ ಜನಿಸಿರಬಹುದೆಂದು ಊಹಿಸಲಾಗಿದೆ.

ಮನಸ್ಸಿನ ನಿಯಂತ್ರಣ, ಏಕಾಗ್ರತೆ ಸಾಧಿಸುವ ಯೋಗ ಪದ್ಧತಿಯನ್ನು ಕಲಿಸಿ ಅದಕ್ಕೆ ವೈದ್ಯಕೀಯ ಸ್ಥಾನಮಾನ ತಂದುಕೊಟ್ಟ ಘನತೆ ಮಹೇಶ್ ಯೋಗಿ ಅವರಿಗೆ ಸಲ್ಲುತ್ತದೆ. 1939ರಲ್ಲಿ ಸ್ವಾಮಿ ಬ್ರಹ್ಮಾನಂದ ಸರಸ್ವತಿಯ(ಆದಿ ಶಂಕರಾಚಾರ್ಯರ ಅನುಯಾಯಿ) ಶಿಷ್ಯರಾಗಿದ್ದ ಮಹರ್ಷಿಯವರು ಕೆಲಕಾಲ ಹಿಮಾಲಯದಲ್ಲೂ ವಾಸವಾಗಿದ್ದರು.

1995ರಿಂದ ಬೋಧಿಸುತ್ತಿದ್ದ ಇವರ ತರ್ಕಾತೀತ ಯೋಗರಹಸ್ಯವನ್ನು 1959ರಲ್ಲಿ ಅಮೆರಿಕದಲ್ಲೂ ಪರಿಚಯಿಸಿದರು. 1968ರಲ್ಲಿ ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು ಇವರ ಶಿಷ್ಯರಾದ ಮೇಲೆ ಮಹೇಶ್ ಯೋಗಿ ಅವರಿಗೆ ಬೀಟಲ್ಸ್ಗುರು ಎಂದು ಪ್ರಸಿದ್ಧರಾದರು. ಆನಂತರ ಇವರ ಯೋಗ ಚಳುವಳಿ ಜಗತ್ತಿನಾದ್ಯಂತ ಪ್ರಸಿದ್ಧವಾಯಿತು.

ಡ್ರಗ್ಸ್ ಚಟಕ್ಕೆ ಬಲಿಯಾದ ರಾಕ್ ಗಾಯಕರಿಗೆ ಇವರ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಪುರಾತನವಾದ ಯೋಗ ಪದ್ಧತಿಗೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟ ಘನತೆ ಮಹರ್ಷಿ ಅವರಿಗಿದೆ. ಮಹರ್ಷಿಯೋಗ ಪದ್ದತಿಯನ್ನ್ನು ಅಮೆರಿಕಾ ಹಾಗೂ ಚೀನಾದ ಶಾಲಾ ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X