• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರದಲ್ಲಿ ಮಹಿಳಾ ಚಾಲಕರ ಟ್ಯಾಕ್ಸಿ ಸೇವೆ

By Staff
|

ಬೆಂಗಳೂರು, ಫೆ.1: ಮಹಿಳಾ ಚಾಲಕರ ಟ್ಯಾಕ್ಸಿ ಗಳು ಶೀಘ್ರದಲ್ಲೇ ಬೆಂಗಳೂರಿನ ರಸ್ತೆಗಳಿಗೆ ಇಳಿಯಲಿವೆ. ಖಾಸಗಿ ಟ್ಯಾಕ್ಸಿ ಕಂಪನಿಯೊಂದು ಮಾರ್ಚ್‌ ತಿಂಗಳಿಂದ ಈ ಸೇವೆ ಪ್ರಾರಂಭಿಸಲಿದೆ.

ಮಹಿಳಾ ಚಾಲಕರ ಟ್ಯಾಕ್ಸಿಗಳಲ್ಲಿ ಪುರುಷರು ಪ್ರಯಾಣಿಸುವಂತಿಲ್ಲ. ಇದು ಬರೀ ಮಹಿಳೆಯರಿಗಾಗಿ ಮೀಸಲು. ಸ್ತ್ರೀ-ಪುರುಷರು ಮೇಲು ಕೀಳೆನ್ನುವ ಬೇಧಭಾವವನ್ನು ತೊಡೆದು ಹಾಕಲು. ಸ್ತ್ರೀ-ಪುರುಷರ ಸಮಾನತೆಗಾಗಿ ಮಹಿಳೆಯರಿಗೂ ಈ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಈ ಮಹಿಳಾ ಚಾಲಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಹಾಗೆಯೇ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗಲಿವೆ.

ಚಾಲಕಿಯರು ಓಡಿಸುವ ವಾಹನಗಳಿಗೆ ಜಿಪಿಎಸ್ Global Positioning System (GPS) ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಇದರ ಜೊತೆಗೆ ಮಹಿಳೆಯರಿಗೆ ಏನಾದರೂ ತೊಂದರೆಗಳು ಎದುರಾದರೆ ಅಲ್ಲೇ ಇರುವ ಸ್ವಿಚ್ಚನ್ನು ಅದುಮಿ ಸಹಾಯಕ್ಕಾಗಿ ಸಂದೇಶ ಕಳುಹಿಸಬಹುದು. ಮಹಿಳಾ ಚಾಲಕರ ಭದ್ರತೆಗಾಗಿ ಈ ಎಲ್ಲಾ ವ್ಯವಸ್ಥೆಗಳು ಚಾಲಕಿಯರ ಕೋಣೆಯೊಳಗೆ ಅಳವಡಿಸಲಾಗಿರುತ್ತದೆ. ಜಿಪಿಎಸ್ ವ್ಯವಸ್ಥೆ ಇರುವ ಕಾರಣ ವಾಹನ ಯಾವ ಮಾರ್ಗದಲ್ಲಿದೆ ಎಂದು ನಿಯಂತ್ರಣ ಕೊಠಡಿಯಿಂದ ತಿಳಿದುಕೊಂಡು ತಕ್ಷಣ ಕಾರ್ಯಪ್ರವೃತ್ತರಾಗಬಹುದು ಎಂದು ಬ್ರೀಜ್ ಕಂಪನಿಯ ಪ್ರತಿನಿಧಿಯೊಬ್ಬರು ತಿಳಿಸಿದರು.

ಬ್ರೀಜ್ ಕಂಪನಿಯ ಮಹಿಳಾ ಚಾಲಕರ ಟ್ಯಾಕ್ಸಿ ಸೇವೆಗೆ 'ಜನೋದಯ' ಎಂಬ ಖಾಸಗಿ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ. ಜನೋದಯ ಸಂಸ್ಥೆಯು 120 ಮಹಿಳೆಯರಿಗೆ ಚಾಲಕ ತರಬೇತಿ ಕೊಟ್ಟಿದೆ. ಸಂಸ್ಥೆಗೆ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಣಕಾಸು ನೆರವು ನೀಡುತ್ತಿದೆ. ಒಟ್ಟಿನಲ್ಲಿ ಸ್ತ್ರೀ-ಪುರುಷರ ನಡುವಿನ ಅಸಮಾನತೆಯ ಗೆರೆಯನ್ನು ಅಳಿಸಿಹಾಕಲು ಸ್ತ್ರೀ ಚಾಲಕರು ರಸ್ತೆಗೆ ಇಳಿಯಲಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more