ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ ನಿರ್ಧಾರ ಮತ್ತೆ ಮುಂದಕ್ಕೆ

By Staff
|
Google Oneindia Kannada News

ನವದೆಹಲಿ, ಜ.31 : ಕಚ್ಚಾ ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸಚಿವರ ತಂಡ (ಗ್ರೂಪ್ ಆಫ್ ಮಿನಿಸ್ಟರ್ಸ್) ನಿರ್ಧಾರವನ್ನು ಮತ್ತೆ ಮುಂದೂಡಿದೆ.

ಬೆಲೆ ಏರಿಕೆ ವಿಷಯದಲ್ಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಗುರುವಾರ ಸುದ್ದಿಗಾರಿಗೆ ತಿಳಿಸಿದರು.

ಇದು ನಾಲ್ಕನೇ ಬಾರಿ ಬೆಲೆ ಏರಿಕೆಯ ಅಧಿಕಾರ ಚಲಾಯಿಸಲಾಗದೆ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ತಂಡ ಸಭೆಯನ್ನು ಮುಂದೂಡಿದೆ. ಪೆಟ್ರೋಲ್ ಕಂಪನಿಗಳು ನಷ್ಟ ಅನುಭವಿಸದಷ್ಟು ಮತ್ತು ಗ್ರಾಹಕರು ದೂರು ನೀಡದಷ್ಟು ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ಏರಿಸಲಾಗುವುದು ಎಂದು ದೇವ್ರಾ ಹೇಳಿಕೆ ನೀಡಿದ್ದರು.

ಪೆಟ್ರೋಲ್ ಬೆಲೆ 4 ರು.ಯಷ್ಟು ಮತ್ತು ಡೀಸೆಲ್ ಬೆಲೆ 2 ರು.ಯಷ್ಟು ಏರಿಸಬೇಕೆಂದು ತೈಲ ಕಂಪನಿಗಳು ಆಗ್ರಹಿಸಿವೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X